Tharun Sudhir and Sonal: ಅಭಿಮಾನಿಗಳಿಗೆ ತರುಣ್ ಸುಧೀರ್ & ಸೋನಲ್ ಗುಡ್‌ನ್ಯೂಸ್
Tharun Sudhir and Sonal Monteiro: ಈಗಾಗಲೇ ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ & ಸೋನಲ್ ಮೊಂಥೆರೋ ಆಗಸ್ಟ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಹಾಗಾದರೆ ಆ ಶುಭಸುದ್ದಿ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಸೋನಲ್ ಕ್ರೈಸ್ತ ಧರ್ಮದವರಾಗಿದ್ದು, ಇದೀಗ ಅವರ ಸಂಪ್ರದಾಯದಂತೆ ಸೆಪ್ಟೆಂಬರ್ 1, 2024ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಲಿದೆ. ಮದುವೆ ಆರತಕ್ಷತೆ ಸಹ ನಡೆಯಲಿದೆ. ಇನ್ನು ಈ ಕಾರ್ಯಕ್ರಮಗಳಿಗೆ ಕುಟುಂಬಸ್ಥರು, ಆಪ್ತರಿಗಷ್ಟೇ ಆಹ್ವಾನ ಕೊಟ್ಟಿದ್ದಾರೆ. ಅಲ್ಲದೆ ಇದಕ್ಕೆ ಅದ್ಧೂರಿ ತಯಾರಿ ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಆಗಷ್ಟ್ 11ರಂದು ಬೆಂಗಳೂರಿನಲ್ಲಿ ವಿವಾಹ: ಇನ್ನೂ ಆಗಷ್ಟ್ 11ರಂದು ತರುಣ್ ಸುಧೀರ್ ಮತ್ತು ಸೋನಲ್ ಮೆಂಥೆರೋ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಈ ವಿವಾಹಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರು, ರಾಜಕೀಯ ಗಣ್ಯರು ಸಾಕ್ಷಿಯಾಗಿದ್ದರು.
ತರುಣ್ ಸುಧೀರ್ ಅವರು ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ ಸ್ಯಾಂಡಲ್ವುಡ್ನ ಚೌಕ, ರಾಬರ್ಟ್ ಹಾಗೂ ಕಾಟೇರ ಚಿತ್ರಗಳನ್ನು ಮಾಡಿದ್ದಾರೆ. ಈ ಮೂರು ಚಿತ್ರಗಳು ಭಾರೀ ಮೆಚ್ಚುಗೆಗೆ ಪಾತ್ರವಾಗಿವೆ. ಇನ್ನು ರಾಬರ್ಟ್ ಚಿತ್ರದಲ್ಲಿ ಸೋನಲ್ ನಟಿಸಿದ್ದು, ಈ ವೇಳೆ ಇವರ ಮಧ್ಯೆ ಪ್ರೀತಿ ಆಗಿದ್ದು, ಕೊಮೆಗೆ ಇದೀಗ ಇಬ್ಬರೂ ವಿವಾಹ ಆಗಿದ್ದಾರೆ. ಇವರಿಬ್ಬರ ಮಧ್ಯದ ವಯಸ್ಸಿನ ಅಂತರದ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸೋನಲ್ ಮೆಂಥೆರೋ ಅವರು ಮೂಲತಃ ಮಂಗಳೂರಿನವರಾಗಿದ್ದು, ಅವರು ಮೊದಲು ತಮಿಳು ಸಿನಿಮಾದಲ್ಲಿ ನಟನೆ ಮಾಡಿದ್ದರು. ಮೂಲಗಳ ಪ್ರಕಾರ, ಅವರು ಜನಿಸಿದ್ದು 1995 ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಇದೀಗ ಅವರು ಜನಿಸಿದ್ದು 1983ರಲ್ಲಿ ಎನ್ನಲಾಗಿದ್ಇದು, ಇವರಿಬ್ಬರ ನಡುವೆ ಸುಮರು 12 ವರ್ಷಗಳ ಅಂತರವಿದೆ.
ಇನ್ನು ನಿರ್ದೇಶಕರಿಗೆ ಒಬ್ಗೊಬ ನಟಿ ಸಿಕ್ಕರು. ನಟಿಗೊಬ್ಬ ನಿರ್ದೇಶಕ ಸಿಕ್ಕರು ಅಂತೂ ಪೋಸ್ಟ್ ಅನ್ನು ವಿವಾಹಕ್ಕೆ ಮುಂಚಿತವಾಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ವತಃ ತರುಣ್ ಸುಧೀರ್ ಹಾಗೂ ಸೋಲನ್ ಅವರೇ ಹಂಚಿಕೊಂಡಿದ್ದು, ಇದರಲ್ಲಿ ವಿವಾಹದ ದಿನಾಂಕವನ್ನು ಸಹ ನಮೂದಿಸಲಾಗಿದ್ದು, ಇದು ಭಾರೀ ವೈರಲ್ ಆಗಿತ್ತು.
ಹೀಗೆ ಪೋಸ್ಟರ್ ಹಂಚಿಕೊಳ್ಳದಲ್ಲದೆ, ತರುಣ್ ಅವರು ಸೋನಾಲ್ ಅವರನ್ನು ಮದುವೆಯಾಗುತ್ತಿದ್ದೇನೆ ಎಂದು ವಿಡಿಯೊ ಮೂಲಕ ರಿವೀಲ್ ಮಾಡಿದ್ದರು. ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ವಿವಾಹ ಆಗಸ್ಟ್ 11ಕ್ಕೆ ಎಂದು ತರುಣ್ ಸುಧೀರ್ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಆಗಸ್ಟ್ 10ರಂದು ರಿಸೆಪ್ಷನ್, ಆಗಸ್ಟ್ 11ರಂದು ಮದುವೆ ಎಂದು ತಿಳಿದು ಎಂದು ತಿಳಿಸಿದ್ದರು. ಕೊನೆಗೂ ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಇವರಿಬ್ಬರು ಅದ್ಧೂರಿಯಾಗಿ ಹಿರಿಯರ ಸಮುಖದಲ್ಲಿ ವಿವಾಹ ಆದರು.












Click it and Unblock the Notifications