ಸಮಂತಾಗೆ ಡಿವೋರ್ಸ್‌ ನೀಡಲು ಶಾಕಿಂಗ್‌ ಕಾರಣ ಕೊಟ್ಟ ನಾಗಚೈತನ್ಯ

ಭಾರತೀಯ ಚಿತ್ರರಂಗದ ಕ್ಯೂಟ್‌ ಸೆಲೆಬ್ರಿಟಿ ಜೋಡಿ ಎನಿಸಿಕೊಂಡಿದ್ದ ತೆಲುಗು ನಟ ನಾಗಚೈತನ್ಯ ಹಾಗೂ ಸಮಂತಾ ರುತ್‌ ಪ್ರಭು ಅವರು ಡಿವೋರ್ಸ್‌ ಘೋಷಿಸುವ ಮೂಲಕ ಶಾಕ್‌ ಕೊಟ್ಟಿದ್ದರು. ಸದ್ಯ ನಾಗಚೈತನ್ಯ ಅವರು ಮತ್ತೊಬ್ಬ ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ವಿವಾಹವಾಗಿ ಜೀವನ ಮುಂದುವರಿಸಿದ್ದಾರೆ. ಇನ್ನು ಸಮಂತಾ ಅವರಿಗೆ ಡಿವೋರ್ಸ್‌ ನೀಡಿರುವ ಕುರಿತು ಮೊದಲ ಬಾರಿಗೆ ಅವರು ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಪಾಡ್‌ಕಾಸ್ಟ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಾಗಚೈತನ್ಯ ಅವರು "ನಮ್ಮ ವಿಚ್ಛೇದನವು ಮನರಂಜನೆಯಾಗಿ ಬದಲಾಗಿಬಿಟ್ಟಿದೆ. ನಾವು ಪರಸ್ಪರ ಗೌರವದಿಂದ ಬೇರ್ಪಟ್ಟಿದ್ದರೂ, ಜನರು ಇನ್ನೂ ಅದೇ ಘಟನೆ ಬಗ್ಗೆ ನನ್ನನ್ನು ಚುಚ್ಚುತ್ತಾರೆ" ಎಂದು ಬೇಸರ ಹಂಚಿಕೊಂಡಿದ್ದಾರೆ. ನಾವು ಕದ್ದುಮುಚ್ಚಿ ಡಿವೋರ್ಸ್‌ ಕೊಡಲಿಲ್ಲ. ಪೋಸ್ಟ್‌ ಹಾಕುವ ಮೂಲಕ ಈ ವಿಚಾರ ತಿಳಿಸಿದೆವು. ಇಬ್ಬರೂ ಪರಸ್ಪರ ಒಪ್ಪಿಕೊಂಡೇ ವಿಚ್ಛೇದನ ಪಡೆದರೂ ಇಲ್ಲಿವರೆಗೆ ಟೀಕೆಗಳು ನಿಲ್ಲಲೇ ಇಲ್ಲ ಎಂದು ನಾಗಚೈತನ್ಯ ಹೇಳಿದ್ದಾರೆ.

Telugu Actor Naga Chaitanya Shares Key Details On Divorce With Samantha Ruth Prabhu

ಎಲ್ಲರಿಗೂ ಈ ವಿಚಾರವನ್ನು ತಿಳಿಸಿದರೂ ನಮ್ಮ ಡಿವೋರ್ಸ್‌ ವಿಚಾರವನ್ನು ಗೇಲಿ ಮಾಡುತ್ತಲೇ ಇದ್ದಾರೆ. ಅದು ಮುಗಿದು ಹೋದ ಅಧ್ಯಾಯ, ಈಗ ನಾನು ಮತ್ತೊಂದು ಬದುಕಿನ ಹಾದಿಯಲ್ಲಿ ಸಾಗಿದ್ದೇನೆ. ಆ ಘಟನೆ ನಡೆದು ಹಲವು ವರ್ಷಗಳಾದರೂ ಇಂದಿಗೂ ಗೇಲಿ ಮಾಡುವುದು ನಿಂತಿಲ್ಲ. ಇದೆಲ್ಲ ಯಾವಾಗ ಅಂತ್ಯ ಕಾಣುತ್ತೆ ಗೊತ್ತಿಲ್ಲ ಎಂದಿದ್ದಾರೆ.

ಅಲ್ಲದೆ ಇದೇ ಕಾರಣಕ್ಕೆ ನಾನು ಇಂಟರ್ವ್ಯೂಗಳಲ್ಲಿ ಹೆಚ್ಚಾಗಿ ಮಾತನಾಡಲಿಲ್ಲ. ಅಲ್ಲಿ ನಾನೊಂದು ಮಾತನಾಡಿದರೆ, ಅದರ ಸುತ್ತ ಇನ್ನೂ ಏನೇನೋ ಕಥೆಗಳನ್ನು ಕಟ್ಟಿ ಟೀಕೆ ಮಾಡುತ್ತಾರೆ. ನಮ್ಮ ನಿಲುವಿನ ಬಗ್ಗೆ ಸ್ಪಷ್ಟತೆ ಕೊಟ್ಟರೂ ಡಿವೋರ್ಸ್‌ ವಿಚಾರ ಇನ್ನೂ ತಣ್ಣಗಾಗಲೇ ಇಲ್ಲ. ಜನ ನಮ್ಮ ಡಿವೋರ್ಸ್‌ ವಿಚಾರವನ್ನು ಇನ್ನೂ ಮರೆತೇ ಇಲ್ಲ ಎಂದು ನಾಗಚೈತನ್ಯ ಹೇಳಿದ್ದಾರೆ.

ನನ್ನ ಜೀವನದಲ್ಲಿ ನಡೆದಿರುವ ಘಟನೆ ಸಾಕಷ್ಟು ಮಂದಿಯ ಬದುಕಲ್ಲೂ ನಡೆದಿದೆ. ಆದರೆ ನನ್ನನ್ನೇ ಏಕೆ ಎಲ್ಲರೂ ಕ್ರಿಮಿನಲ್‌ ತರ ನೋಡ್ತಾರೆ? ನಾನು ಒಂದು ಸಂಬಂಧವನ್ನು ಕಡಿದುಕೊಳ್ಳಬೇಕಾದರೆ 1000 ಸಲವಾದ್ರೂ ಯೋಚನೆ ಮಾಡ್ತೀನಿ. ಏಕೆಂದರೆ ನಾನು ಕೂಡ ಅಂತಹ ಕುಟುಂಬದಿಂದಲೇ ಬಂದವನು. ಸಂಬಂಧ ಕಡಿದುಕೊಳ್ಳುವ ನೋವು ಹೇಗಿರುತ್ತೆ ಅನ್ನೋದು ನನಗೆ ಗೊತ್ತಿದೆ ಎಂದು ನೆನೆದಿದ್ದಾರೆ.

Telugu Actor Naga Chaitanya Shares Key Details On Divorce With Samantha Ruth Prabhu

ನಾವು ಪರಸ್ಪರ ಡಿವೋರ್ಸ್‌ ನೀಡಲು ಒಪ್ಪಿಕೊಂಡೆವು. ಆದರೆ, ಅದು ಹೆಡ್‌ಲೈನ್‌ ವಿಷಯವಾಗಿ, ಎಲ್ಲರ ಬಾಯಿಗೆ ಗಾಸಿಪ್‌ ಆಗಿ ಕೊನೆ ಎಂಟರ್‌ಟೇನ್‌ಮೆಂಟ್‌ ಆಗಿಬಿಟ್ಟಿದೆ. ಇದೇ ಕಾರಣಕ್ಕೆ ನಾನು ಹೆಚ್ಚಾಗಿ ಆ ವಿಷಯವಾಗಿ ಸಂದರ್ಶನಗಳಲ್ಲಿ ಮಾತನಾಡಲಿಲ್ಲ. ಒಂದು ವೇಳೆ ನಾನು ಮಾತನಾಡಿದರೆ, ಅದರಿಂದ ಮತ್ತಷ್ಟು ವಿಚಾರಗಳು ಹೆಚ್ಚಾಗುತ್ತವೆ ಎಂದು ಬೇಸರ ಹಂಚಿಕೊಂಡಿದ್ದಾರೆ. ನಾನು ಕ್ರಿಮಿನಲ್ ಅಲ್ಲ, ನೀವು ಸುಮ್ಮನೆ ನನ್ನ ಬಗ್ಗೆ ಗಮನ ಹರಿಸುವ ಬದಲು ನಿಮ್ಮ ಮೇಲೆ ಕೇಂದ್ರೀಕರಿಸಿ ಎಂದು ತಮ್ಮ ಬಗ್ಗೆ ಟೀಕೆ ಮಾಡುವವರಿಗೆ ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+