Bigg Boss: ಬಿಗ್ ಬಾಸ್‌ಗೆ ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ಆರ್‌ಸಿಬಿ ಮಾಜಿ ಸ್ಟಾರ್ ಬೌರಲ್ ಮಾಜಿ ಪತ್ನಿ ಎಂಟ್ರಿ..
Bigg Boss: ಐಪಿಎಲ್‌ನಷ್ಟೇ ಬಿಗ್ ಬಾಸ್ ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದುವ ಮೂಲಕ ಪ್ರಸಿದ್ಧಿಯಾಗಿದೆ. ಅಷ್ಟರ ಮಟ್ಟಿಗೆ ಈ ರಿಯಾಲಿಟಿ ಶೋ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನೂ ಈ ಬಾರಿಯ ಸೀಸನ್ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ವಿಶೇಷತೆ ಅಂದ್ರೆ ಇದರಲ್ಲಿ ಆರ್‌ಸಿಬಿ ಮಾಜಿ ಸ್ಟಾರ್ ಆಟಗಾರನ ಮಾಜಿ ಪತ್ನಿ ಎಂಟ್ರಿ ಕೊಡುತ್ತಾರೆಂಬ ವಿಚಾರ. ಹಾಗಾದ್ರೆ ಯಾರು ಅವರು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಲೀಗ್‌ನಲ್ಲಿ ಅತ್ಯಂತ ದೊಡ್ಡ ಲೀಗ್ ಐಪಿಎಲ್ ಆಗಿದೆ. ಹಾಗೆಯೇ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ. ಈ ಬಾರಿಯ ಸೀಸನ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದರಲ್ಲಿ ಟೀಂ ಇಂಡಿಯಾ ಸ್ಟಾರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರನ ಪತ್ನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಐಪಿಎಲ್ ಟ್ರೋಫಿ ಗೆಲ್ಲುವ ಮುಂಚೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಟಾರ್ ಸ್ಪಿನ್ ಬೌಲರ್ ಆಗಿ ಮಿಂಚಿದ್ದ ಯುಜ್ವೇಂದ್ರ ಚಹಾಲ್ ಮಾಜಿ ಪತ್ನಿ ಧನಶ್ರೀ ವರ್ಮಾ ಅವರು ಬಿಗ್ ಬಾಸ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಇವರಿಬ್ಬರ ನಡುವೆ ವಿಚ್ಛೇದನ ಆಗಿ ಬೇರೆಯೂ ಆಗಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಇದೀಗ ಪ್ರಸ್ತುತ ರಿಯಾಲಿಟಿ ಶೋ, ಸಿನಿಮಾ ಹಾಗೂ ಆಲ್ಬಂ ಸಾಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ನಡುವೆಯೇ ಬಿಗ್ ಬಾಸ್ ಹಿಂದಿ 19 ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.
ತಮ್ಮ ವೀಡಿಯೊಗಳಿಂದಲೇ ಜನಪ್ರಿಯತೆ ಗಳಿಸಿದ ಧನಶ್ರೀ ವರ್ಮಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರನ್ನು ಪ್ರೀತಿಸಿ 2020ರಲ್ಲಿ ವಿವಾಹ ಆದರು. ಆದರೆ, ವಿವಾಹ ಆದ ಕೆಲ ವರ್ಷಗಳಲ್ಲಿಯೇ ಇಬ್ಬರೂ ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ. ಇದೀಗ ಧನಶ್ರೀ ವರ್ಮಾ ಅವರು ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಇನ್ನು ವಿಚ್ಛೇದನದ ನಂತರ ಧನಶ್ರೀ ವರ್ಮಾ ಯುಜ್ವೇಂದ್ರ ಚಾಹಲ್ ಅವರಿಂದ 40,OO,OO,OOO ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂದು ವರದಿಯಾಗಿದ್ದು, ಚಾಹಲ್ ಹಾಗೂ ಧನಶ್ರೀ ವರ್ಮಾ ಈ ವರದಿಗಳನ್ನು ತಳ್ಳಿಹಾಕಿದ್ದಾರೆ. ಧನಶ್ರೀ ವರ್ಮಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದ್ದವು.
ಆದರೆ, ಇದೀಹ ಧನಶ್ರೀ ವರ್ಮಾ ಅವರು ಸಂಗೀತ ಆಲ್ಬಮ್‌ಗಳ ಜೊತೆಗೆ ಕೆಲ ಚಲನಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ. ರಾಜ್‌ಕುಮಾರ್ ರಾವ್ ನಟಿನೆ ಮಾಡಿದ ಭೂಲ್ ಚುಕ್ ಮಾಫ್ ಚಿತ್ರದಲ್ಲಿ ಅವರು ಐಟಂ ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಜೊತೆಗೆ ಅಕ್ಷಯ್ ಕುಮಾರ್ ನಡೆಸಿಕೊಡುವ ಖತ್ರೋನ್ ಕಿ ಖಿಲಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ, ಕಾರಣಾಂತರಗಳಿಂದ ಈ ಕಾರ್ಯಕ್ರಮ ಪ್ರಾರಂಭ ಆಗಲಿಲ್ಲ.
ಇದೀಗ ಧನಶ್ರೀ ವರ್ಮಾ ಅವರಿಗೆ ಬಿಗ್ ಬಾಸ್ ಮನೆಯಿಂದ ದೊಡ್ಡ ಮಟ್ಟದ ಸಂಭಾವನೆಯ ಆಫರ್ ಬಂದಿದೆ ಎಂದು ವರದಿ ಆಗಿದೆ. ಯೂಟ್ಯೂಬರ್, ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ಯುಜ್ವೇಂದ್ರ ಚಾಹಲ್ ಅವರ ಮಾಜಿ ಪತ್ನಿಯಾಗಿ ಧನಶ್ರೀ ವರ್ಮಾ ಯುವಕರಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಜೊತೆಗೆ ಅವರನ್ನು ಬಿಗ್ ಬಾಸ್ ಮನೆಗೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಈ ಬಾರಿಯ ಹಿಂದಿ ಬಿಗ್ ಬಾಸ್ 19 ಸೀಸನ್ ಮುಂದಿನ ತಿಂಗಳಿನಿಂದ ಆರಂಭವಾಗಲಿದ್ದು, ಜನವರಿ 2026ರ ವರೆಗೂ ಮುಂದುವರಿಸಲು ಪ್ರಯತ್ನಗಳು ನಡೆಯುತ್ತಿವೆ. ಯೂಟ್ಯೂಬರ್ ಪೂರವ್ ಝಾ, ರಾಜ್ ಕುಂದ್ರಾ, ಫೈಸಲ್ ಶೇಖ್, ರಾಮ್ ಕಪೂರ್, ತನುಶ್ರೀ ದತ್ತಾ ಮತ್ತು ಗೌರವ್ ತನೇಜಾ ಅವರಂತಹ ಸೆಲೆಬ್ರಿಟಿಗಳು ಬಿಗ್ ಬಾಸ್ ಹಿಂದಿ ಸೀಸನ್ 19ರಲ್ಲಿ ಸ್ಪರ್ಧಿಗಳಾಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ.
ಧನಶ್ರೀ ವರ್ಮಾ ಅವರ ಮಾಜಿ ಪತಿ ಚಹಾಲ್ ಅವರು ಟೀಂ ಇಂಡಿಯಾದಲ್ಲಿ ಉತ್ತಮ ಸ್ಪಿನ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇವರು ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡದ ಪರ ಆಡಿ ಮಿಂಚಿದ್ದಾರೆ. ಇದೀಗ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾರೆ. ಆದರೂ ಮುಖ್ಯವಾಗಿ ಇವರು ಹೆಚ್ಚು ಸದ್ದು ಮಾಡಿದ್ದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅಂದ್ರೆ ತಪ್ಪಾಗಲಾರದು.












Click it and Unblock the Notifications