ವರ್ತೂರು ಸಂತೋಷ್‌ ಜೊತೆ ಮದುವೆ; ಶಾಕಿಂಗ್‌ ಉತ್ತರ ಕೊಟ್ಟ ನಟಿ ತನಿಷಾ ಕುಪ್ಪಂಡ

ಬಿಗ್‌ಬಾಸ್‌ ಸೀಸನ್‌-10ರ ಸ್ಪರ್ಧಿಗಳಾಗಿದ್ದ ಹಳ್ಳಿಕಾರ್‌ ಖ್ಯಾತಿಯ ವರ್ತೂರು ಸಂತೋಷ್‌ ಹಾಗೂ ನಟಿ ತನಿಷಾ ಕುಪ್ಪಂಡ ಅವರು ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆಗಲೇ ಇವರಿಬ್ಬರನ್ನೂ ಒಳ್ಳೆಯ ಜೋಡಿ ಎಂದು ಕರೆದಿದ್ದರು. ಬಿಗ್‌ಬಾಸ್‌ ಮುಗಿದ ಮೇಲೂ ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡು ಮದುವೆ ಗಾಸಿಪ್‌ಗೆ ಕಾರಣವಾಗಿದ್ದರು. ಇಬ್ಬರೂ ಸದ್ಯದಲ್ಲೇ ಮದುವೆ ಆಗ್ತಾರೆ ಎಂದು ಹಲವರು ನಿರೀಕ್ಷೆಯಲ್ಲಿದ್ದರು. ಈ ಬಗ್ಗೆ ಇತ್ತೀಚೆಗೆ ಮಾತನಾಡಿರುವ ತನಿಷಾ ಕುಪ್ಪಂಡ ವರ್ತೂರು ಸಂತೋಷ್‌ ಜೊತೆಗಿನ ಮದುವೆ ವಿಚಾರಕ್ಕೆ ಉತ್ತರ ಕೊಟ್ಟಿದ್ದಾರೆ.

ಬಿಗ್‌ಬಾಸ್‌ ಶೋ ಮುಗಿದ ಮೇಲೂ ಸಂತೋಷ್‌-ತನಿಷಾ ಮದುವೆ ವಿಚಾರದ ಬಗ್ಗೆ ಚರ್ಚೆಯಾಗಿತ್ತು. ಆದರೆ ತನಿಷಾ ಹಾಗೂ ವರ್ತೂರ್‌ ಇಬ್ಬರೂ ತಾವು ಸ್ನೇಹಿತರು, ಮದುವೆ ವಿಚಾರ ಸುಳ್ಳು ಎಂದಿದ್ದರು. ಆದರೂ ತಮ್ಮ ಮದುವೆ ವದಂತಿ ನಿಂತಿರಲಿಲ್ಲ. ಒಟ್ಟಿಗೆ ಹಲವು ಬಾರಿ ಕಾಣಿಸಿಕೊಂಡಿದ್ದರಿಂದ ಇವರ ಬಾಂಡಿಂಗ್‌ ನೋಡಿ ಮದುವೆಗೆ ತಯಾರಿ ನಡೆಸಿದ್ದು, ಆ ವಿಚಾರವನ್ನು ಗುಟ್ಟಾಗಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ತನಿಷಾ ಮತ್ತೊಮ್ಮೆ ಮಾತನಾಡಿದ್ದಾರೆ.

tanisha-kuppanda-shocking-reply-on-marriage-with-bigg-boss-varthur-santhosh

ಇತ್ತೀಚೆಗೆ ತನಿಷಾ ಹಾಗೂ ವರ್ತೂರು ಸಂತೋಷ್‌ ಒಟ್ಟಿಗೆ ಕಾಣಿಸಿಕೊಂಡಿದ್ದು ಕಡಿಮೆ. ಈ ಬಗ್ಗೆ ಅವರನ್ನು ಪ್ರಶ್ನೆ ಮಾಡಿದಾಗ ತುಸು ಖಾರವಾಗಿಯೇ ಮಾತನಾಡಿದ್ದಾರೆ. 'ಯಾಕೆ ನಾವು ಒಟ್ಟಿಗೆ ಕಾಣಿಸಿಕೊಳ್ತಿಲ್ಲ ಅಂತ ವರ್ತೂರು ಅವರನ್ನೇ ಕೇಳಬೇಕು. ನಾವು ಇತ್ತೀಚೆಗೆ ಮಾತನಾಡಿದ್ವಿ. ಆದರೆ ಅವರು ತಮ್ಮದೇ ಲೈಫಲ್ಲಿ ಬ್ಯುಸಿ ಆಗಿದ್ದಾರೆ. ಸ್ಕ್ರೀನ್‌, ಕ್ಯಾಮರಾ, ಮೇಕಪ್‌ ಇದು ನಮ್ಮ ವೃತ್ತಿ ಆಗಿರೋದ್ರಿಂದ ಹೊರಗಡೆ ಹೆಚ್ಚಾಗಿ ಕಾಣಿಸಿಕೊಳ್ತೀವಿ. ಈಗ ವರ್ತೂರು ತಮ್ಮ ಕೆಲಸ ಮತ್ತು ಪರ್ಸನಲ್‌ ಲೈಫಲ್ಲಿ ತುಂಬಾ ಬ್ಯುಸಿ ಇದ್ದಾರೆ' ಎಂದಿದ್ದಾರೆ ತನಿಷಾ ಕುಪ್ಪಂಡ.

ಇನ್ನು ಮದುವೆ ವಿಚಾರ ಪ್ರಸ್ತಾಪಿಸಿದಾಗ, 'ನಾನು ಮದುವೆಯಾಗುತ್ತೇನೆ ಅಂದ್ರೆ ಮಾತ್ರ ನನ್ನ ಬಳಿ ಕೇಳಬೇಕು. ಅವರು ಮದುವೆ ಆಗ್ತಾರೆ ಅಂದ್ರೆ ಅವರನ್ನೇ ಹೋಗಿ ಕೇಳಬೇಕು. ಬೇರೆಯವರ ಲೈಫ್‌ ಬಗ್ಗೆ ಹಾಗೆಲ್ಲ ನನ್ನ ಪ್ರಶ್ನೆ ಮಾಡಬೇಡಿ. ನಾವಿಬ್ಬರೂ ಎಷ್ಟೇ ಒಳ್ಳೆಯ ಫ್ರೆಂಡ್ಸ್‌ ಆಗಿದ್ರೂ ನಮ್ಮದೇ ಆದ ಮಿತಿ ಇರುತ್ತೆ. ನಮ್ಮಿಬ್ಬರ ಲೈಫ್‌ಸ್ಟೈಲ್‌ ಕೂಡ ಬೇರೆ ಇರುತ್ತೆ' ಎಂದು ಕೋಪದಿಂದ ಮಾತನಾಡಿದ್ದಾರೆ.

ವರ್ತೂರು ಹೇಳುವವರೆಗೆ ತಾಳ್ಮೆ ಇರಲಿ

'ನಾವಿಬ್ಬರೂ ವಿಭಿನ್ನ ಲೈಫ್‌ಸ್ಟೈಲ್‌ಗೆ ಸೇರಿದವರು. ಅವರ ಲೈಫ್‌ ಬೇರೆ, ನನ್ನ ಲೈಫ್‌ಸ್ಟೈಲ್‌ ಬೇರೆ. ಕಲಾವಿದರು ಅನ್ನೋದಕ್ಕಿಂತ ನಮ್ಮಿಬ್ಬರ ಜೀವನ ಡಿಫರೆಂಟ್‌. ಹಾಗಾಗಿ ವರ್ತೂರು ಸಂತೋಷ್‌ ಅವರಿಗೆ ಏನು ಇಷ್ಟ ಅನ್ನೋದನ್ನ ಅವರೇ ಹೇಳ್ತಾರೆ. ಇಷ್ಟ ಇಲ್ಲದೇ ಇರೋದನ್ನ ಹೇಳಲ್ಲ. ಹಾಗಾಗಿ ಅವರು ನಿಮ್ಮೆಲ್ಲರನ್ನೂ ಕರೆದು ವಿಚಾರ ಹೇಳುವವರೆಗೂ ತಾಳ್ಮೆಯಿಂದ ಇರಬೇಕು' ಎಂದಿದ್ದಾರೆ.

'ಇನ್ನು ನಾವು ಇತ್ತೀಚೆಗೆ ಮಾತನಾಡಿಕೊಂಡಾಗ ನಮ್ಮ ಭವಿಷ್ಯದ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆ ಮಾಡಿದ್ವಿ. ನಾನು ಮತ್ತು ಅವರು ಸದ್ಯದಲ್ಲೇ ಒಂದು ಒಳ್ಳೆಯ ಪ್ರಾಜೆಕ್ಟ್‌ ಮಾಡಬಹುದು' ಎಂದು ಗುಡ್‌ನ್ಯೂಸ್‌ ಕೂಡ ಕೊಟ್ಟದ್ದಾರೆ ತನಿಷಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+