ಒಳ ಉಡುಪು ಕಾಣುವ ಕಾಸ್ಟ್ಯೂಮ್ ಧರಿಸಿ ತಮನ್ನಾ ಭರ್ಜರಿ ಡ್ಯಾನ್ಸ್, ಫೋಟೋಸ್ ವೈರಲ್
ಕನ್ನಡದ ಕೆಜಿಎಫ್ ಸಿನಿಮಾದಲ್ಲಿ ಜೋಕೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia). ಬಳಿಕ ಬಾಲಿವುಡ್‌ನ "ಆಜ್ ಕೀ ರಾತ್" ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಿ ರಾತ್ರೋರಾತ್ರಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದರು. ಇತ್ತೀಚೆಗೆ ತಮನ್ನಾ ಸಿನಿಮಾಗಳಿಗಿಂತಲೂ ಹೆಚ್ಚು ಐಟಂ ಸಾಂಗ್‌ಗಳಿಂದಾಗಿ ಹೆಚ್ಚು ಫೇಮಸ್ ಆಗಿದ್ದಾರೆ. ಇದೀಗ ಮತ್ತೊಂದು ಬಾಲಿವುಡ್ ಸಾಂಗ್‌ನಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ತಮನ್ನಾ ಒಳ ಉಡುಪು ಕಾಣುವಂತಹ ಕಾಸ್ಟ್ಯೂಮ್ ಧರಿಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಲ್ಕಿ ಬ್ಯೂಟಿಯ ಹಾಟ್ ಅವತಾರ ನೋಡಿ ಶಾಕ್ ಆಗಿದ್ದಾರೆ.
ಆರ್ಯನ್ ಖಾನ್ ಅವರ ಚೊಚ್ಚಲ ನಿರ್ದೇಶನದ "ದಿ ಬಾ**ಡ್ಸ್ ಆಫ್ ಬಾಲಿವುಡ್" ಚಿತ್ರದ ಆಕರ್ಷಕ ಟೀಸರ್‌ನಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಹಂಚಿಕೊಂಡಿರುವ ಈ ಗಫೂರ್ ಹಾಡಿನ ಟೀಸರ್‌ನಲ್ಲಿ ತಮನ್ನಾ ತನ್ನ ಬಿಕಿನಿಯನ್ನು ಪ್ರದರ್ಶಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಸೌಂಡ್ ಮಾಡುತ್ತಿದೆ.

ಆರ್ಯನ್ ಖಾನ್ ಅವರ ನೆಟ್‌ಫ್ಲಿಕ್ಸ್ ಸರಣಿಯಾಗಿರುವ ದಿ ಬಾ**ಡ್ಸ್ ಆಫ್ ಬಾಲಿವುಡ್‌ನ ಮುಂಬರುವ ಹಾಡು ಗಫೂರ್‌ನಲ್ಲಿ ತಮನ್ನಾ ಭಾಟಿಯಾ ಬೆರಗುಗೊಳಿಸುತ್ತಿದ್ದಾರೆ. ಈ ಅದ್ಭುತ ಟ್ರ್ಯಾಕ್‌ನ ಪ್ರೋಮೋ ಈಗಾಗಲೇ ಹವಾ ಸೃಷ್ಟಿಸುತ್ತಿದೆ. ಟಿ-ಸೀರೀಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮನ್ನಾ ಭಾಟಿಯಾ ಅವರ ಅದ್ಭುತ ನೃತ್ಯ ಹೆಜ್ಜೆಗಳನ್ನು ಒಳಗೊಂಡ ಮುಂಬರುವ ಹಾಡಿನ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ತಮನ್ನಾ ಅವರ ಕಾಸ್ಟ್ಯೂಮ್ ನಿಜಕ್ಕೂ ಅಭಿಮಾನಿಗಳು ಕಣ್ಣುಕುಕ್ಕುವಂತಿದೆ.
ಐಟಂ ಸಾಂಗ್‌ಗಳಿಂದ ಹೆಚ್ಚಿತು ತಮನ್ನಾ ಕ್ರೇಜ್
ಸೆಪ್ಟೆಂಬರ್ 18ರಂದು ಬಿಡುಗಡೆಯಾಗುವ 'ದಿ ಬಾ***ಡ್ಸ್ ಆಫ್ ಬಾಲಿವುಡ್' ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ವೀಕ್ಷಿಸಿ ಎಂದು ಹೇಳಿದ್ದಾರೆ. ಇತ್ತೀಚೆಗೆ ಸ್ತ್ರೀ 2 ಸಿನಿಮಾದ ಆಜ್ ಕಿ ರಾತ್ ಹಾಡಿನ ಮೂಲಕ ತಮನ್ನಾ ಇಂಟರ್ನೆಟ್ ಸೆನ್ಸೇಷನ್ ಆಗಿದ್ದರು. ಅಲ್ಲದೆ ಜೈಲರ್ ಸಿನಿಮಾದ ಕಾವಾಲಯ್ಯ ಹಾಡಿನಲ್ಲೂ ತಮನ್ನಾ ಟ್ರೆಂಡ್ ಸೃಷ್ಟಿಸಿದ್ದರು. ಈಗ ಮತ್ತೊಂದು ಹಾಡಿನ ಮೂಲಕ ಮಿಲ್ಕಿ ಬ್ಯೂಟಿ ಮನಗೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಕಾಮೆಂಟ್‌ಗಳ ಸುರಿಮಳೆ ಹರಿದಿದೆ.
ಪ್ಯಾಂಟ್ ಜೊತೆಗೆ ಮೈಕ್ರೋ ಬಿಕಿನಿಯಲ್ಲಿ ತಮನ್ನಾ ಮಿಂಚಿದ್ದು, ಬ್ಯಾಡ್ಸ್ ಆಫ್ ಬಾಲಿವುಡ್ ಟೀಸರ್‌ನಲ್ಲಿ ಅವರ ಹಾಟ್ ಅವತಾರ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಫೋಟೋಗಳಿಗೆ ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. "ನಾನು ನಿಜಕ್ಕೂ ಧನ್ಯ. ತಮನ್ನಾ ನಿಜಕ್ಕೂ ಪರಮಾಣು ಬಾಂಬ್ ಇದ್ದಂತೆ. ಅಷ್ಟೆಲ್ಲಾ ತೂಕ ಇಳಿಸಿಕೊಂಡ ನಂತರ, ಈ ಅವತಾರದಲ್ಲಿ ಕಾಣಿಸಿಕೊಳ್ತಾರೆ ಎಂದು ಭಾವಿಸಿರಲಿಲ್ಲ. ತಮನ್ನಾ ಮುಂದೆ ಯಾರೂ ಸರಿಸಾಟಿಯಲ್ಲ ಎಂದು ಮಾರು ಹೋಗಿದ್ದಾರೆ.












Click it and Unblock the Notifications