ಅಬ್ಬಬ್ಬಾ.. ಸನ್ನಿ ಬಂದಳು ಸನ್ನಿ.. ದಾರಿ ಬಿಡಿ, ದಾರಿ ಬಿಡಿ!
ನಟಿ ಹಾಗೂ ಮಾಜಿ ವಯಸ್ಕರ ಚಿತ್ರದ ಸೂಪರ್ ಸ್ಟಾರ್ ಸನ್ನಿ ಲಿಯೋನ್ ಅಂದ್ರೆ ಈಗಲೂ ಪಡ್ಡೆ ಹೈಕಳು ನಿದ್ದೆ ಬಿಡ್ತಾರೆ. ಯಾಕಂದ್ರೆ ಈ ನಟಿಗೆ ಅಷ್ಟು ಬೇಡಿಕೆ ಇದೆ, ಹಾಗೇ ಸನ್ನಿ ಈಗಲೂ 25ರ ಹರೆಯದ ಬ್ಯೂಟಿ ಕ್ವೀನ್ ರೀತಿ ಕಾಣಿಸುತ್ತಾಳೆ. ಹೀಗಾಗಿ ಸನ್ನಿ ಲಿಯೋನ್‌ಗೆ ಸಖತ್ ಬೇಡಿಕೆ ಕೂಡ ಇದೆ. ಸಿನಿಮಾ ರಂಗದಲ್ಲಿ ಈಗಲೂ ಸನ್ನಿ ಲಿಯೋನ್ ಅಂದ್ರೆ ಸಖತ್ ಇಷ್ಟ ಪಡ್ತಾರೆ. ಹೀಗಿದ್ದಾಗ ಹೊಸ ಫೋಟೋ ಮೂಲಕ ಸನ್ನಿ ಹಲ್‌ಚಲ್ ಎಬ್ಬಿಸಿದ್ದಾಳೆ.
ಹೌದು, ನಟಿ ಸನ್ನಿ ಲಿಯೋನ್ ಬೇರೆ ದೇಶದಲ್ಲಿ ಬೆಳೆದರೂ ಭಾರತದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದವರು. ಹಾಗೇ ಈಕೆಯ ಕ್ಯೂಟ್‌ನೆಸ್ ನೋಡಿ ಕೋಟ್ಯಂತರ ಅಭಿಮಾನಿಗಳು ಅಟ್ಯ್ರಾಕ್ಟ್ ಆಗಿದ್ದಾರೆ. ಈಕೆ ಜೊತೆಗೆ ಒಂದು ಫೋಟೋ ಸಿಕ್ಕರೆ ಸಾಕಪ್ಪಾ ಎನ್ನುವಂತೆ ಅವರೆಲ್ಲ ಕಾಯ್ತಾ ಕೂತಿದ್ದಾರೆ. ಹೀಗಿದ್ದಾಗ ಸನ್ನಿ ಲಿಯೋನ್ ಹೊಸ ಫೋಟೋಗಳನ್ನ ಈಗ ಶೇರ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಕೊಂಡಿದೆ. ಹಾಗಾದ್ರೆ ಆ ಫೋಟೋ ಗಮ್ಮತ್ತು ನೋಡೋಣ ಬನ್ನಿ!

ಸನ್ನಿ ಸೌತ್ ಇಂಡಿಯಾದಲ್ಲೂ ಫೇಮಸ್!
ಯೆಸ್, ಬಾಲಿವುಡ್ ಸಿನಿಮಾ ಮಾತ್ರವಲ್ಲ ಸೌತ್ ಇಂಡಿಯಾದ ಸಿನಿಮಾದಲ್ಲೂ ಸನ್ನಿಗೆ ಭಾರಿ ಡಿಮ್ಯಾಂಡ್ ಇದೆ. ಹೀಗಾಗಿ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸನ್ನಿ. ಇದೇ ಕಾರಣಕ್ಕೆ ಅವರಿಗೆ ಭಾರಿ ಅಂದ್ರೆ ಭಾರಿ ದೊಡ್ಡ ಅಭಿಮಾನಿ ಬಳಗವೂ ಇದೆ. ಲೇಟೆಸ್ಟ್ ಆಗಿ ಕೆಲವು ಫೋಟೋಗಳನ್ನ ಶೇರ್ ಮಾಡಿರುವ ಸನ್ನಿ ಲಿಯೋನ್, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹಾಗೇ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ ಈ ನಟಿ. ಹಸಿರು ಬಣ್ಣದ ಬಟ್ಟೆಗೆ ಹೊಸ ಸೌಂದರ್ಯ ನೀಡಿದ್ದಾರೆ ಸನ್ನಿ ಲಿಯೋನ್. ಹಾಗಾದ್ರೆ ಸನ್ನಿ ಈಗ ಧರಿಸಿರುವ ಹೊಸ ಡಿಸೈನ್ ಬಟ್ಟೆ ಯಾವುದು ಗೊತ್ತೆ?
ಸನ್ನಿ ಏನಮ್ಮಾ ನಿನ್ನ ಲೀಲೆ?
ಅಂದಹಾಗೆ ಸನ್ನಿ ಲಿಯೋನ್ ಈಗ ನಿಯಾನ್ ಕಲರ್ ಪ್ಯಾಂಟ್, ಟಾಪ್ ಅದರ ಜೊತೆಯಲ್ಲಿ ಬ್ಲೇಜರ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಫೋಟೋಸ್ ಸೊಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿವೆ. ನೆಟ್ಟಿಗರು ಕೂಡ ಸಿಕ್ಕಾಪಟ್ಟೆ ಲೈಕ್ಸ್ ಕೊಟ್ಟು, ಕಮೆಂಟ್ಸ್ ಹಾಕುತ್ತಿದ್ದಾರೆ. ಹೀಗಾಗಿ ನಟಿ ಸನ್ನಿಯ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ ಅಭಿಮಾನಿಗಳು. ಹಾಗೆಯೇ ಡಿಸೈನ್, ಡಿಸೈನ್ ಬೇಡಿಕೆ ಕೂಡ ಮುಂದಿಡುತ್ತಿದ್ದಾರೆ ಫ್ಯಾನ್ಸ್.
ಹೊಸ ಬದುಕು ಆರಂಭಿಸಿದ ಚೆಲುವೆ
ಈ ಮೊದಲು ಸನ್ನಿ ಲಿಯೋನ್ ವಯಸ್ಕರ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆಗಲೂ ಈಕೆಗೆ ಕೋಟ್ಯಂತರ ಅಭಿಮಾನಿಗಳು ಇದ್ದರು. ಇದಾದ ನಂತರ ಈಕೆ ಬಾಲಿವುಡ್‌ಗೆ ಎಂಟ್ರಿಯನ್ನ ಕೊಟ್ಟು, ಹೊಸ ಬದುಕು ಆರಂಭಿಸಿದ್ದರು. ಹೀಗೆ ತನ್ನ ಮೂಲ ನೆಲೆ ಭಾರತಕ್ಕೆ ಬಂದಿದ್ದ ನಟಿ ಸನ್ನಿ ಲಿಯೋನ್, ಇನ್ನೂ ಎಂದೆಂದೂ ಮೊದಲಿನ ವೃತ್ತಿಗೆ ಮರಳಲೇ ಇಲ್ಲ. ಅದು ಮರೆತು ಹೊಸ ಬದುಕಿನ ಜೊತೆಗೆ ಹೆಜ್ಜೆ ಹಾಕಿದರು. ಇದೀಗ ಸನ್ನಿ ಲಿಯೋನ್, ಟಾಪೆಸ್ಟ್ ನಟಿಯರ ಪೈಕಿ ಒಬ್ಬರಾಗಿದ್ದಾರೆ. ಇದರ ಜೊತೆಗೆ ಒಂದೊಂದು ಸಿನಿಮಾಗೂ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಒಟ್ನಲ್ಲಿ ಸನ್ನಿ ಲಿಯೋನ್ ಅಂದಕ್ಕೆ ಅಭಿಮಾನಿಗಳು ಬೆರಗಾಗಿ ಹೋಗಿದ್ದಾರೆ. ಅದರಲ್ಲೂ, ಈ ನಟಿಯ ಮೈಮಾಟ ಎಂತಹ ವ್ಯಕ್ತಿಯನ್ನೂ ಸೆಳೆಯುವಂತಿದೆ. ಹಾಲ್ಗೆನೆಯ ಸುಂದರಿಗೆ, ನಿಯಾನ್ ಕಲರ್ ಪ್ಯಾಂಟ್ & ಟಾಪ್ ಅದರ ಜೊತೆಯಲ್ಲಿ ಬ್ಲೇಜರ್ ಹೊಸ ಲುಕ್ ಕೊಟ್ಟಿದೆ. ಇಷ್ಟೆಲ್ಲದರ ನಡುವೆ ಸನ್ನಿ ಕೈಯಲ್ಲಿ ಇರುವ ಹೊಸ ಉಂಗುರ ಕೂಡ ಗಮನ ಸೆಳೆಯುತ್ತಿದೆ. ಈ ಮೂಲಕ ಅಭಿಮಾನಿಗಳ ಕುತೂಹಲ ಡಬಲ್ ಆಗಿದ್ದು, 2024 ರಲ್ಲಿ ಸನ್ನಿ ಲಿಯೋನ್ ಅವರ ಸಾಲು ಸಾಲು ಸಿನಿಮಾ ರಿಲೀಸ್ ಆಗಲಿವೆ.












Click it and Unblock the Notifications