Bigg Boss: ಬಿಗ್‌ಬಾಸ್‌ಗೆ ಕಿಚ್ಚನೇ ಸಾರಥಿ; 10 ವರ್ಷದಿಂದ ಒಂದ್ ಲೆಕ್ಕ ಇವಾಗಿಂದ ಒಂದ್ ಲೆಕ್ಕ ಎಂದ ಸುದೀಪ್
ಅಂತೂ ಇಂತೂ ಬಿಗ್ ಬಾಸ್ 11ನೇ ಆವೃತ್ತಿಯ ನಿರೂಪಕರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಲ್ಲ, ಬೇರೊಬ್ಬ ನಟ ನಿರೂಪಣೆ ಮಾಡುತ್ತಾರೆ ಎನ್ನುವ ಗುಸು ಗುಸು ಇತ್ತು. ಸುದೀಪ್ ಕೂಡ ಈ ಬಗ್ಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಕಲರ್ಸ್ ಕನ್ನಡ ಕೂಡ ಮೊದಲು ಬಿಡುಗಡೆ ಮಾಡಿದ್ದ ಪ್ರೋಮೊಗಳಲ್ಲಿ ನಿರೂಪಕರು ಯಾರು ಎನ್ನುವ ಕುತೂಹಲ ಬಿಟ್ಟುಕೊಟ್ಟಿರಲಿಲ್ಲ.
ಇದೀಗ ಎಲ್ಲಾ ಕುತೂಹಲ, ಪ್ರಶ್ನೆಗಳಿಗೂ ತೆರೆ ಬಿದ್ದಿದೆ. 10 ಆವೃತ್ತಿಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡುವ ಮೂಲಕ ಜನಮನ ಗೆದ್ದಿದ್ದ ಸುದೀಪ್ ಅವರೇ ಬಿಗ್ ಬಾಸ್ 11ನೇ ಆವೃತ್ತಿಯನ್ನು ನಿರೂಪಣೆ ಮಾಡಲಿದ್ದಾರೆ. ಇಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೊ ಬಿಡುಗಡೆ ಮಾಡಿದ್ದು, ಸುದೀಪ್ ಮಿಂಚಿದ್ದಾರೆ.

ಅದ್ದೂರಿ ಸೆಟ್‌ನಲ್ಲಿ ಪ್ರೋಮೊ ಶೂಟ್ ಮಾಡಿದ್ದು, ಸುದೀಪ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಹಾಸನಕ್ಕಾಗಿ ಹೊಡೆದಾಟ ನಡೆಯುತ್ತಿರುವ ಸಂದರ್ಭದಲ್ಲಿ ಸುದೀಪ್ ಪ್ರವೇಶವಾಗುತ್ತಿದ್ದಂತೆ ಎಲ್ಲರೂ ಸೈಲೆಂಟ್ ಆಗುತ್ತಾರೆ. ಸಿಂಹಾಸನದ ಬಳಿ ಬರುವ ಸುದೀಪ್ "10 ವರ್ಷದವರೆಗೂ ಒಂದು ಲೆಕ್ಕ ಇನ್ಮೇಲಿಂದ ಮತ್ತೊಂದು ಲೆಕ್ಕ, ಇದು ಹೊಸ ಅಧ್ಯಾಯ" ಎನ್ನುವ ಮೂಲಕ, ಈ ಬಾರಿ ಬಿಗ್ ಬಾಸ್ ಮತ್ತಷ್ಟು ರೋಚಕವಾಗಿರುವ ಸೂಚನೆ ಸಿಕ್ಕಿದೆ.
Bigg boss kannada 11 promo.
— 𝐑𝐮𝐠𝐠𝐚ᵗᵒˣⁱᶜ (@LoyalYashFan) September 15, 2024
Without @KicchaSudeep it would've been flop, thanks to Colors Kannada for convincing him 🤝❤#BBK11 pic.twitter.com/57AyJ7hBqj
ಅಭಿಮಾನಿಗಳ ಸಂಭ್ರಮ
ಕಿಚ್ಚ ಸುದೀಪ್ ಮತ್ತೊಮ್ಮೆ ಕಿರುತೆರೆಯಲ್ಲಿ ಬರುವುದು ಖಚುತವಾಗುತ್ತಿದ್ದಂತೆ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಸುದೀಪ್ ತಮ್ಮದೇ ಶೈಲಿಯ ನಿರೂಪಣೆಯಿಂದ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಅವರು ನಿರೂಪಣೆ ಮಾಡುವುದಿಲ್ಲ ಎನ್ನುವ ಸುದ್ದಿ ಹಲವರಿಗೆ ಬೇಸರ ತರಿಸಿತ್ತು. ಇಂದು ಕಲರ್ಸ್ ಕನ್ನಡ ಪ್ರೋಮೊ ಮಾಡುವ ಮೂಲಕ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯುವ ಸುದ್ದಿಯನ್ನು ಖಚಿತಪಡಿಸಿದ್ದು, ಅಭಿಮಾನಿಗಳಿಗೂ ಸಂತಸ ತಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬಿಗ್‌ಬಾಸ್ 11ನೇ ಆವೃತ್ತಿಯ ಪ್ರೋಮೊ ಈಗಾಗಲೇ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ನಿಮ್ಮನ್ನು ಬಿಟ್ಟರೆ ಬಿಗ್ ಬಾಸ್ ನಿರೂಪಕರಾಗಿ ಇನ್ಯಾರನ್ನೂ ನೋಡಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.












Click it and Unblock the Notifications