Su From So: ಹಾಸ್ಯದ ಅಲೆ ಸೃಷ್ಟಿಸಿದ ಸು ಫ್ರಮ್ ಸೋ: ಸಿನಿ ಪ್ರೇಕ್ಷಕರು ಹೇಳಿದ್ದೇನು ?
Su From So: ಸ್ಟಾರ್ ನಟರು ಇಲ್ಲದ ಸು ಫ್ರಮ್ ಸೋ.. ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡುತ್ತಿದೆ. ಈ ವರ್ಷ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರಲಿಲ್ಲ. ಸ್ಟಾರ್ ನಟರ ಸಿನಿಮಾಗಳು ಇಲ್ಲ ಎನ್ನುವ ಸಂದರ್ಭದಲ್ಲಿಯೇ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳು ಚಿತ್ರಮಂದಿರಗಳ ಕಡೆ ಕನ್ನಡಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅದರಲ್ಲಿ ಎಕ್ಕ & ಜೂನಿಯರ್ ಜೊತೆ ಇದೀಗ ಸು ಫ್ರಮ್ ಸೋ ಸೇರ್ಪಡೆಯಾಗಿದೆ. ಸು ಫ್ರಮ್ ಸೋ ಉಳಿದ ಎರಡು ಚಿತ್ರಗಳಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವುದು ಹಾಗೂ ಹೌಸ್‌ಫುಲ್ ಆಗುತ್ತಿರುವುದು ಅಚ್ಚರಿಯನ್ನು ಸಹ ಮೂಡಿಸಿದೆ. ಕನ್ನಡದಲ್ಲಿ ಹಾಸ್ಯಮಯ ಸಿನಿಮಾ ಬಂದು ಬಹಳಷ್ಟು ವರ್ಷಗಳೇ ಆಗಿತ್ತು. ಪೂರ್ಣ ಪ್ರಮಾಣದ ಹಾಸ್ಯ ಸಿನಿಮಾ ನೋಡಿ ಖುಷಿ ಆಗ್ತಿದೆ ಅಂತಿದ್ದಾರೆ ಪ್ರೇಕ್ಷಕರು.
ಈ ವಾರ ತೆರೆ ಕಂಡ, ವರ್ಡ್ ಆಫ್ ಮೌಥ್ ಪಬ್ಲಿಸಿಟಿಯಿಂದ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಸು ಫ್ರಮ್ ಸೋ'.. ಅಂತಲೇ ಎಲ್ಲರೂ ಅಭಿಪ್ರಾಯಪಡುತ್ತಿದ್ದಾರೆ. ಬಾಯಿ ಮಾತಿನಿಂದಲೇ ಈ ಸಿನಿಮಾ ಹಲವರನ್ನು ತಲುಪಿದೆ. ಸಂಜಯ್ ಗೌಡ ಎನ್ನುವವರು, ಸು ಫ್ರಮ್ ಸೋ 🌻 ಎಷ್ಟೋ ದಿವಸ ಆಗಿತ್ತು ಇಷ್ಟೊಂದು ನಕ್ಕು, ಒಳ್ಳೆ ಸಿನಿಮಾ ಬಂದಾಗ ಜನ ಕೈ ಬಿಡಲ್ಲ ಅಂತ ಮತ್ತೆ ಪ್ರೂವ್ ಆಯ್ತು. ಒಟ್ಟಾರೆ ಇದು ಪಕ್ಕ ಪೈಸಾ ವಸೂಲ್ ಸಿನಿಮಾ 🔥 ಎಂದಿದ್ದಾರೆ.

ಸಮೀಕ್ಷಾ ಯೋಗ ಎನ್ನುವವರು 'ಸು ಫ್ರಮ್ ಸೋ' ಸಿನಿಮಾ ನನ್ನ ಮನಸಿಗೂ ತುಂಬಾ ಇಷ್ಟವಾಯ್ತು. ಕರಾವಳಿ ಶೈಲಿಯ ತಿಳಿ ಹಾಸ್ಯದೊಂದಿಗೆ ಪ್ರಾರಂಭ ಆಗುವ ಸಿನಿಮಾ ಕೊನೆಗೆ ನಿಮ್ಮ ಹೊಟ್ಟೆ ನೋವು ಬರುವಷ್ಟು ನಗು ತರಿಸುತ್ತೆ... ಪ್ರತಿಯೊಂದು ಪಾತ್ರವೂ ಮನಃಪೂರ್ವಕವಾಗಿದೆ.. ರವಿ ಅಣ್ಣ ಮತ್ತು ಭಾನು ಅವರ ಪಾತ್ರಗಳು, ಸುಲೋಚನ ದೆವ್ವದ ಕಥಾಹಂದರ, ಹಿನ್ನಲೆ ಸಂಗೀತ, ಮತ್ತು ಕಲಾವಿದರ ಅಭಿನಯ ಎಲ್ಲವೂ 10/10.ಪೈಸ ವಸೂಲ್ ಸಿನಿಮಾ 😍😍😍 ನನಗಂತೂ ನಕ್ಕು ನಕ್ಕು ಹೊಟ್ಟೆ ನೋವು ಬಂತು 🤭 ಎಂದಿದ್ದಾರೆ. ಬಹುತೇಕ ಪ್ರೇಕ್ಷಕರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾಗಳು ಮತ್ತೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಪ್ರಾರಂಭಿಸಿರುವುದು ಕನ್ನಡಿಗರಿಗೆ ಖುಷಿ ನೀಡಿದೆ.
ಹಲವು ದಿನಗಳ ನಂತರ ಕುಟುಂಬ ಸಮೇತ "ಸು ಫ್ರಮ್ ಸೋ" ಕನ್ನಡ ಸಿನಿಮಾ ನೋಡಿಬಂದೆವು. ಕೆಲವು ತಿಂಗಳುಗಳಿಂದ ಥಿಯೇಟರ್'ಗೆ ಹೋಗಿ ಯಾವುದಾದರೂ ಸಿನಿಮಾ ನೋಡೋಣವೆಂದು ಪ್ಲಾನ್ ಮಾಡುತ್ತಿದ್ದೇವಾದರೂ ಯಾವುದು ಸಾಕಾರವಾಗಿರಲಿಲ್ಲ. ನಮ್ಮ ಹಲವು ತಾಪತ್ರಯಗಳು ಅದಕ್ಕೆ ಕಾರಣವಾಗಿದ್ದರೂ ಇತ್ತೀಚೆಗೆ ಬಂದ ಯಾವ ಸಿನಿಮಾವೂ ಥಿಯೇಟರ್ ತನಕ ನಮ್ಮನ್ನು ಈ ಪರಿ ಸೆಳೆದಿರಲಿಲ್ಲ ಎಂದು ರಘು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಸು ಫ್ರಮ್ ಸೋ ಸಿನಿಮಾವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದು. ಈ ಸಿನಿಮಾ ನೋಡುವುದಕ್ಕೆ ಟಿಕೆಟ್ ಸಿಗುತ್ತಿಲ್ಲ ಎನ್ನುತ್ತಿದ್ದಾರೆ.
ವಾರಾಂತ್ಯದಲ್ಲಿ ಈ ಸಿನಿಮಾಗೆ ಹೋಗಬೇಕು ಎಂದುಕೊಂಡಿದ್ದ ಹಲವರಿಗೆ ಈ ಸಿನಿಮಾಗೆ ಟಿಕೆಟ್ ಸಿಕ್ಕಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.












Click it and Unblock the Notifications