Su From So: ಒಟಿಟಿಗೆ ಬಂದ "ಸು ಫ್ರಮ್ ಸೋ" ಸಿನಿಮಾಗೆ ನೆಗೆಟಿವ್ ರೆಸ್ಪಾನ್ಸ್, ಕಾರಣವೇನು ?!
Su From So: ಕನ್ನಡದಲ್ಲಿ ಇತ್ತೀಚೆಗೆ ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿರುವ ಸು ಫ್ರಮ್ ಸೋ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದ್ದು, ಜನರ ಮೆಚ್ಚುಗೆ ಗಳಿಸಿದೆ. ಆದರೆ ಸು ಫ್ರಮ್ ಸೋ ಓಟಿಟಿಗೆ ರಿಲೀಸ್ ಆಗಿರು ಬೆನ್ನಲ್ಲೇ ಈ ಸಿನಿಮಾದ ಬಗ್ಗೆ ನೆಗೆಟಿವ್ ಪ್ರಚಾರಗಳು ಹೆಚ್ಚಾಗಿವೆ. ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡಿರುವ ಈ ಸಿನಿಮಾ ಓಟಿಟಿಯಲ್ಲಿ ಯಾವ ಕಾರಣಕ್ಕೆ ನೆಗೆಟಿವ್ ರಿವ್ಯೂವ್ ಬರುತ್ತಿದೆ ಎನ್ನುವುದು ಕೊನೆಗೂ ಬಹಿರಂಗವಾಗಿದೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ.
ಸಂತೋಷ್‌ಕುಮಾರ್ ಎಲ್.ಎಂ ಎನ್ನುವವರು ಸು ಫ್ರಮ್ ಸೋ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಒಟಿಟಿ ರಿಲೀಸ್‌ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿರುವುದು ಯಾಕೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಿಡುಗಡೆಯ ದಿನಾಂಕಕ್ಕೆ ಮುನ್ನವೇ Paid premiere ಶೋಗಳನ್ನು ಮಾಡಿ ಅಲ್ಲಿ ಬಂದ ಜನರ ಅಭಿಪ್ರಾಯಗಳನ್ನೇ ಪ್ರಮೋಶನ್‌ಗೆ ಬಳಸಿಕೊಂಡಿತ್ತು. ಅತ್ಯದ್ಭುತ ಯಶಸ್ಸು ಕಂಡ "ಸು ಫ್ರಂ ಸೋ" ಸಿನಿಮಾದಿಂದಾಗಿ ಕೆಲ ಚಾನೆಲ್ಲುಗಳಿಗೆ, meme ಪೇಜುಗಳಿಗೆ ಸಿಕ್ಕಾಪಟ್ಟೆ ನಷ್ಟವಾಗಿದೆ. (ಇಲ್ಲದಿದ್ದರೆ ಪ್ರಮೋಷನ್‌ಗಾಗಿ ಅಂತಲೇ ಒಂದಷ್ಟು ಹಣ ಇವರ ಅಕೌಂಟಿಗೆ ಹೋಗುತ್ತಿತ್ತು) ಹಾಗಾಗಿಯೇ ಆ ಬೇಸರದಲ್ಲಿ ಮೊನ್ನೆ ಆ ಸಿನಿಮಾ OTTಗೆ ಬಂದಾಗಿನಿಂದ Negative publicityಯಲ್ಲಿ ತೊಡಗಿವೆ.
ಯಾರೋ "ಚೆನ್ನಾಗಿದೆ" ಅಂತ ಬರೆದದ್ದಕ್ಕೆ ಸಿನಿಮಾಗಳು ಗೆಲ್ಲುವುದಿಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಆ ಒಳ್ಳೆಯ ಅಭಿಪ್ರಾಯಗಳು ಹರಡಿದರಷ್ಟೇ ಸಿನಿಮಾಗಳು ಗೆಲ್ಲುವುದು ಸಿನಿಮಾ ಕೆಲವರಿಗೆ ಇಷ್ಟವಾಗಿರಬಹುದು. ಇಷ್ಟವಾಗದಿರಬಹುದು. ಅದರ ಬಗ್ಗೆ ಅವರು ಬರೆದುಕೊಳ್ಳಲಿ ಆದರೆ ಅದನ್ನು meme pageಗಳವರು
ಕುಹಕವಾಡುವಂತಹ ವಿಕೃತಿಗೆ ಬಳಸಿಕೊಳ್ಳಬಾರದು. ಇನ್ನು ಮುಂದೆ ಜನರಿಗೆ ಇಷ್ಟವಾಗಿದ್ದನ್ನು ಅವರು ನೋಡುತ್ತಾರೆ. ಇಲ್ಲದಿದ್ದರೆ ಬಿಡುತ್ತಾರೆ ಇಂಥ ಮಧ್ಯವರ್ತಿಗಳ ಅವಶ್ಯಕತೆಯಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡದಲ್ಲಿ ಹೊಸ ಮಾದರಿ: ಇನ್ನು ಸು ಫ್ರಮ್ ಸೋ ಸಿನಿಮಾ ಕನ್ನಡದಲ್ಲಿ ಹೊಸ ಮಾದರಿಯಿಂದ ಗೆದ್ದಿದೆ. ಈ ಸಿನಿಮಾದ ಪ್ರಮೋಷನ್ ಹಾಗೂ ಕಥೆ - ಹಾಸ್ಯ ಎಲ್ಲವೂ ಜನರಿಗೆ ಇಷ್ಟವಾಗಿದ್ದವು. ಅಲ್ಲದೇ ಸಿನಿಮಾದಲ್ಲಿ ಅಳವಡಿಸಿಕೊಂಡಿರುವ ನೈಜತೆ ಜನರ ಮನಸ್ಸಿಗೆ ಆಪ್ತವೆನಿಸಿತ್ತು. ಆದರೆ ಇದೀಗ ಒಟಿಟಿಯಲ್ಲಿ ನೆಗೆಟಿವ್ ಯಾವ ಕಾರಣಕ್ಕೆ ಬರುತ್ತಿದೆ ಎನ್ನುವುದು ಹೆಚ್ಚು ಚರ್ಚೆಯಾಗುತ್ತಿದೆ. ಇನ್ನು ಸು ಫ್ರಮ್ ಸೋ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ. ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲೂ ಹಿಟ್ ಆಗಿತ್ತು. ಚಿತ್ರಮಂದಿರಗಳಲ್ಲಿ ನೋಡಿದವರೂ ಸಹ ಒಟಿಟಿಯಲ್ಲಿ ಇನ್ನೊಮ್ಮೆ ನೋಡಬೇಕು ಎಂದು ಹಲವರು ನಿರೀಕ್ಷೆ ಮಾಡಿದ್ದರು.












Click it and Unblock the Notifications