‘ಡಿ-ಬಾಸ್’ ದರ್ಶನ್ ಹುಟ್ಟುಹಬ್ಬಕ್ಕೆ ಹೋಗುವ ಅಭಿಮಾನಿಗಳೇ ಗಮನಿಸಿ!

ಒಂದು.. ಎರಡು.. ಮೂರು.. ಇನ್ನೇನು ಕೇವಲ 3 ಗಂಟೆ ಮಾತ್ರ ಬಾಕಿ. ಆ ನಂತರ ಇಡೀ ಕನ್ನಡ ನಾಡಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮ ಮೇಳೈಸಿ ಸದ್ದು ಮಾಡಲಿದೆ. ಹೀಗಿದ್ದಾಗಲೇ ನಟ ದರ್ಶನ್ ಅವರ ಅಭಿಮಾನಿಗಳಿಗೆ ವಿಶೇಷ ಮನವಿ ಇದೆ. ಅದರಲ್ಲೂ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅಂತಾ, ಕೇಕ್, ಹಾರ, ಹೂವುಗಳನ್ನು ತೆಗೆದುಕೊಂಡು ಹೋಗುವ ಅಭಿಮಾನಿಗಳು ಈ ಸುದ್ದಿ ಓದಲೇಬೇಕು.

ನಟ ದರ್ಶನ್ ಅವರ ಫ್ಯಾನ್ಸ್ ಫುಲ್ ಖುಷಿಯಲ್ಲಿದ್ದಾರೆ, ಯಾಕಂದ್ರೆ ಒಂದು ಕಡೆ ಅವರ ಸಿನಿಮಾ ಕಾಟೇರ ಭರ್ಜರಿ ಸಕ್ಸಸ್ ಪಡೆದಿದೆ. ಇನ್ನೊಂದ್ಕಡೆ ಡೆವಿಲ್ ಸಿನಿಮಾ ಸಿದ್ಧವಾಗುತ್ತಿದೆ. ಈ ವೇಳೆ ನಟ ದರ್ಶನ್ ಅವರ ಹುಟ್ಟುಹಬ್ಬವೂ ಬಂದಿದೆ. ಇದೇ ಸಮಯದಲ್ಲಿ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ನಟ ದರ್ಶನ್ ಅವರು ವಿಶೇಷವಾದ ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ ಏನದು ವಿಶೇಷ ಮನವಿ? ಸಂಪೂರ್ಣ ಮಾಹಿತಿ, ಈ ಸುದ್ದಿಯಲ್ಲಿ ತಿಳಿಯೋಣ ದರ್ಶನ್ ಅವರ ಅಭಿಮಾನಿಗಳು ಮಿಸ್ ಮಾಡದೆ ಮುಂದಕ್ಕೆ ಓದಿ.

Special Request By Challenging Star Darshan With His Fans

ಡಿ-ಬಾಸ್ ಅಭಿಮಾನಿಗಳೇ ಇಲ್ಲಿ ಗಮನಿಸಿ

ಅಷ್ಟಕ್ಕೂ ಫೆಬ್ರವರಿ 16 ದರ್ಶನ್ ಅವರ ಅಭಿಮಾನಿಗಳಿಗೆ ಎಂದೆಂದಿಗೂ ಮರೆಯಲಾಗದ ದಿನ. ಇದೇ ದಿನ ನಟ ದರ್ಶನ್ ಅವರು ಜನಿಸಿದ್ದು, ಹೀಗೆ ಅಭಿಮಾನಿಗಳು ಫೆಬ್ರವರಿ 16ನ್ನು ಅತ್ಯಂತ ಸಂಭ್ರಮ & ಸಡಗರದಿಂದ ಆಚರಿಸುತ್ತಾರೆ. ಹೀಗಾಗಿ ಆ ದಿನ ಸಾಕಷ್ಟು ಸಂಭ್ರಮ ಮೇಳೈಸಿರುತ್ತೆ. ಅದ್ರಲ್ಲೂ ಈ ಬಾರಿ ಹುಟ್ಟುಹಬ್ಬಕ್ಕೆ ಕಾಟೇರ ಸಕ್ಸಸ್ ಡಬಲ್ ಮೆರಗು ನೀಡಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಖುಷಿಯಿಂದ ಈ ಕ್ಷಣಕ್ಕೇ ಕಾಯುತ್ತಿದ್ದಾರೆ. ಈ ಸಮಯದಲ್ಲೇ ದರ್ಶನ್ ಅವರು ತಮ್ಮ ಫ್ಯಾನ್ಸ್ ಬಳಿ ಮಹತ್ವದ ಮನವಿ ಮಾಡಿಕೊಂಡಿದ್ದಾರೆ. ಅದು ಏನು ಅಂದ್ರೆ...

ಬ್ಯಾನರ್ ಹಾಕದಂತೆ ಫ್ಯಾನ್ಸ್ ಬಳಿ ಮನವಿ

ಈಗಾಗಲೆ ಅಭಿಮಾನಿಗಳಿಗೆ ದರ್ಶನ್ ಅವರು ಸಂದೇಶ ರವಾನಿಸಿದ್ದು ಯಾರೂ ಕೇಕ್, ಬ್ಯಾನರ್ ಕಟ್ಟದಂತೆ ಮನವಿ ಮಾಡಿದ್ದಾರೆ. ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯ ಉಡುಗೊರೆಯಾಗಿ ನೀಡಿ ಸಾಕು ಎಂದು ಮನವಿ ಮಾಡಿದ್ದು ಡಿ-ಬಾಸ್ ದರ್ಶನ್‌ ಅವರ ಫ್ಯಾನ್ಸ್ ಈಗ ಹಿಗೆ ಅರ್ಥಪೂರ್ಣವಾಗಿ ಹುಟ್ಟಹಬ್ಬ ಆಚರಣೆಗಾಗಿ ಸಕಲ ಸಿದ್ಧತೆ ನಡೆಸಿದ್ದಾರೆ. ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳಿಗೆ ಇಂದು ಹಲವು ಸರ್ಪ್ರೈಸ್ ಸಿಗುವ ನಿರೀಕ್ಷೆ ಇದೆ. ಹೊಸ, ಹೊಸ ಸಿನಿಮಾಗಳ ಅಪ್‌ಡೇಟ್ ಹೊರಬೀಳುವ ನಿರೀಕ್ಷೆ ಇದೆ.

ಕೋಟಿ ಕೋಟಿ ಅಭಿಮಾನಿಗಳು

ಕನ್ನಡಿಗರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಖಾಡದಲ್ಲಿ ಮಾತ್ರ ಶತ್ರುಗಳನ್ನು ಪುಡಿ ಮಾಡಿಲ್ಲ, ನಿಜ ಬದುಕಿನಲ್ಲಿ ಕೂಡ ಸಾಕಷ್ಟು ಶತ್ರುಗಳನ್ನ ಎದುರಿಸಿದ್ದಾರೆ. ಹೀಗೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಗೆದ್ದು ನಿಂತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ದೊಡ್ಡ ಹೆಸರು ಮಾಡಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಡಿ-ಬಾಸ್ ದರ್ಶನ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಹೀಗೆ, ನಟ ದರ್ಶನ್ ಅವರಿಗೆ ದೊಡ್ಡ ಫ್ಯಾನ್ ಫಾಲೋವರ್ಸ್ ಇದೆ. ಅವರೆಲ್ಲಾ ಇದೀಗ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ.

Special Request By Challenging Star Darshan With His Fans

ಕಾಟೇರ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ದಾಖಲೆ ಮೀರಿ ಮುನ್ನುಗ್ಗಿದೆ. ಕನ್ನಡಿಗರ ಚಿತ್ರ ಕಾಟೇರ ಒಂದು ಗತ್ತು ಕೊಟ್ಟಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದ್ರೂ ಕಾಟೇರ ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹಣ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿ ಸಾಧನೆ ಮಾಡಿದೆ ಎಂಬ ಮಾತು ಹರಿದಾಡುತ್ತಿದೆ. ಹೀಗಿದ್ದರೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇಷ್ಟೆಲ್ಲದರ ನಡುವೆ ಡಿ-ಬಾಸ್ ದರ್ಶನ್‌ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+