Sonu Gowda: ಸೋನುಗೌಡ ಮಸ್ತ್ ಪಾರ್ಟಿ ಫೋಟೋ ವೈರಲ್, ಸೋನು ಹೇಳಿದ್ದೇನು
ಬಿಗ್‌ಬಾಸ್ ಖ್ಯಾತಿಯ ಸೋನು ಗೌಡ ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಸೋನುಗೌಡ ಪಾರ್ಟಿಯಲ್ಲಿ ಮಿಂಚಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೋನು ಅಭಿಮಾನಿಗಳು ಕಮೆಂಟ್ ಬಾಕ್ಸ್‌ನಲ್ಲಿ ಜಾಲಿ.. ಜಾಲಿ ಸೋನು ಸಿಕ್ಕಾಪಟ್ಟೆ ಜಾಲಿ ಅಂತ ಕಮೆಂಟ್ ಮಾಡಿದ್ದಾರೆ. ಸೋನುಗೌಡ ಇನ್‌ಸ್ಟಾಗ್ರಾಮ್ ವಿಡಿಯೋ ಹಾಗೂ ಫೋಟೋಗಳಿಂದ ಸದಾ ಟ್ರೆಂಡ್‌ನಲ್ಲಿ ಇರೋದು ಇದೆ. ಈಗ ಅದೇ ರೀತಿ ಪಾರ್ಟಿಯೊಂದರಲ್ಲಿ ಸೋನು ಮಿಂಚಿರುವ ಚಿತ್ರಗಳು ಟ್ರೆಂಡ್ ಆಗ್ತಿದೆ. ಕೆಲವರು ಸ್ವಲ್ಪ ಕುಡಿಹಿರಿ ಅಂತ ಕಮೆಂಟ್ ಮಾಡಿದ್ದರೆ, ಸೋನು ಖಡಕ್ ರಿಪ್ಲೈ ಕೊಟ್ಟಿದ್ದಾರೆ.
ಸೋನುಗೌಡ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡಿದ್ದಾರೆ. ಆಕೆಯ ಪಾರ್ಟಿ ಫೋಟೋಗಳು ವೈರಲ್ ಆಗುತ್ತಿದ್ದು, ಕೆಲವರು ಬಾಯಿ ಬಂದಂತೆ ಕಮೆಂಟ್ ಮಾಡಿದ್ದು, ಇದಕ್ಕೆ ಸೋನು ಅವರು ಸರಿಯಾಗಿ ಕಮೆಂಟ್ ಮಾಡಿದ್ದಾರೆ. ಈಚೆಗೆ ಪಾರ್ಟಿಯಲ್ಲಿ ಮಿಂಚಿರುವ ಫೋಟೋಗಳನ್ನು ಸೋನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, 30 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

ಪಾರ್ಟಿಯಲ್ಲಿ ಸೋನುಗೌಡ ಕೈಯಲ್ಲಿ ಗ್ಲಾಸ್ ಇದೆ. ಬಹಳಷ್ಟು ಜನ ಇವರ ಲೈಟ್‌ಆಗಿ ಪಾರ್ಟಿಯಲ್ಲಿ ಎಣ್ಣೆ ತಗೊಂಡಿದ್ದಾರೆ ಅಂತ ಹೇಳ್ತಿದ್ದಾರೆ. ಹೌದು ಈಚೆಗೆ ಆಪ್ತರೊಂದಿಗೆ ಸೇರಿ ಸೋನು ಅವರು ಎಣ್ಣೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಎಲ್ಲಾ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಸಂತೋಷದ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಆ ಚಿತ್ರಗಳೊಂದಿಗೆ ಇದು ಬರೀ ಸ್ಪ್ರೈಟ್ ಅಂತ ಹೇಳಿದ್ದಾರೆ. ನೋಟ್: ನನ್ನ ಕೈನಲ್ಲಿರುವ ಗ್ಲಾಸ್‌ನಲ್ಲಿ ಇರೋದು ಸ್ಪೈಟ್ ಅಷ್ಟೇ ಅಂತ ಹೇಳಿದ್ದಾರೆ. ಸೆಲೆಬ್ರೇಷನ್ ಮೂಡ್‌ನಲ್ಲಿ ಇರುವ ಸೋನು ಅವರು ಕಮೆಂಟ್‌ಗಳಿಗೆ ತಲೆಕೆಡಿಸಿಕೊಳ್ಳದೆ ಸೈಲಂಟ್ ಆಗಿಯೇ ರಿಪ್ಲೈ ಮಾಡಿದ್ದಾರೆ.
ತೂಕ ಕಳೆದುಕೊಂಡ ಸೋನು: ಸೋನು ಅವರು ಈಚೆಗೆ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಸೀರೆಯಲ್ಲಿ ಮಿಂಚಿರುವ ಚಿತ್ರಗಳು ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಸೋನು ಅವರು ಅವರ ತೂಕ ಇಳಿಸಿಕೊಂಡಿರುವ ಇನ್ನಷ್ಟು ಚಿತ್ರಗಳನ್ನು ಇನ್ಸಟಾದಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರ ನೋಡಿ ಜನ ಶಾಕ್ ಆಗಿದ್ದಾರೆ. ಕೆಲವರು ಮೇಡಂ ತೂಕ ಇಳಿಸಿಕೊಳ್ಳಲು ಏನು ಮಾಡಿದ್ರಿ, ನಮ್ಗೆ ಸ್ವಲ್ಪ ಟಿಪ್ಸ್ ಕೊಡಿ ಅಂತ ಕೇಳಿದ್ದಾರೆ. ಇನ್ನು ಕೆಲವರು ಈ ರೀತಿ ಎಲ್ಲಾ ಫೋಟೋ ಹಾಕಿದರೆ ಹೆಂಗೆ ಅಂತಲೂ ಕಾಮೆಂಟ್ ಮಾಡಿದ್ದಾರೆ.
ರೀಲ್ಸ್ ವೈರಲ್: ಈಚೆಗೆ ಸೋನು ಮಾಡಿದ ರೀಲ್ಸ್ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರೀಲ್ಸ್‌ನಿಂದಲೇ ಸೋನುಗೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿರುವುದು ಇದೆ. ಇದು ಕೆಲವೊಮ್ಮೆ ಅತಿರೇಖಕ್ಕೆ ಹೋಗಿರುವುದು ಸಹ ಇದೆ. ಈ ನಡುವೆ ದರ್ಶನ್ ಅಭಿನಯಿಸಿರುವ ಕಲಾಸಿಪಾಳ್ಯ ಸಿನಿಮಾದ ಹಾಡಿಗೆ ಸೋನು ಗೌಡ ರೀಲ್ಸ್ ಮಾಡಿದ್ದು, ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇದಕ್ಕೂ ಕೆಲವರು ನಾನು ದರ್ಶನ್ ಫ್ಯಾನ್ ಈ ರೀಲ್ಸ್ ನೋಡಿ ಖುಷಿ ಆಯ್ತು ಅಂತ ಹೇಳಿದ್ದಾರೆ.

ಸೋನುಗೌಡ ಅವರು ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ಇನ್ಸ್‌ಟಾದಲ್ಲಿ ಆ್ಯಕ್ಟೀವ್ ಆಗಿದ್ದು ಅವರ ಅಭಿಮಾನಿಗಳು ಇದನ್ನು ನೋಡಿ ಫಿದಾ ಆಗ್ತಿದ್ದಾರೆ.












Click it and Unblock the Notifications