Sonu Gowda: ಒಂದೇ ವಿಮಾನದಲ್ಲಿ ಸೋನು ಗೌಡ-ಬಿಎಸ್ ಯಡಿಯೂರಪ್ಪ: ಫೋಟೋ ವೈರಲ್
ಬಿಗ್‌ಬಾಸ್ ಸ್ಪರ್ಧಿಯಾಗಿದ್ದ್ ಸೋನು ಶ್ರೀನಿವಾಸ್ ಗೌಡ ಸದ್ಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ವಿಡಿಯೋಗಳನ್ನು ಹಂಚಿಕೊಳ್ಳುವ ಸೋನು ಗೌಡ ಅವರಿಗೆ ಸಾಕಷ್ಟು ಫಾಲೋವರ್ಸ್ ಇದ್ದಾರೆ. ಸೋನು ಅವರು ಭೇಟಿ ನೀಡುವ ಸ್ಥಳ, ಉಡುವ ಬಟ್ಟೆ, ತಿನ್ನುವ ಆಹಾರ ಎಲ್ಲದರ ವೀಡೀಯೋಗಳಿಗೆ ಲಕ್ಷಾಂತರ ಲೈಕ್ಸ್ ಬರುತ್ತವೆ. ಹೀಗಿರುವಾಗ ಸೋನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಒಂದು ಪೋಟೋ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು.... ಸೋನು ಶ್ರೀನಿವಾಸ್ ಗೌಡ ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸೋನು ಗೌಡ ಹಂಚಿಕೊಂಡಿರುವ ಈ ಫೋಟೋಗಳು ಭಾರೀ ವೈರಲ್ ಆಗುತ್ತಿವೆ. ಅಷ್ಟಕ್ಕೂ ಸೋನು ಗೌಡ ಅವರು ಹಂಚಿಕೊಂಡ ಫೋಟೋಗಳು ಎಲ್ಲಿಯದ್ದು ಗೊತ್ತಾ?

ಸೋನು ತಾವು ಭೇಟಿ ನೀಡುವ ಸ್ಥಳದಲ್ಲೂ ವೀಡಿಯೋ ಮಾಡುವ ಹುಡುಗಿ. ಅವರು ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುವಾಗ ಬಿಎಸ್ ಯಡಿಯೂರಪ್ಪ ಅವರು ಕಾಣಿಸಿಕೊಂಡಿದ್ದಾರೆ. ಈ ವೇಳೆ ಸೋನು ಅವರೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಫೋಟೋಗಳು ನೋಡುಗರ ಗಮನ ಸೆಳೆದಿದೆ.
ಬಿಎಸ್ ಯಡಿಯೂರಪ್ಪ ಅವರೊಂದಿಗೆ ವಿಮಾನದಲ್ಲಿ ಸೋನು ಪ್ರಯಾಣ ಮಾಡಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸೋನು, 'ನನ್ನ ಜೀವನದಲ್ಲಿ ಕಂಡಂತ ಮೊದಲ ಮುಗ್ದ ಮನಸಿನ ಮನುಷ್ಯ ಇವರೇ' ಎಂದು ಬರೆದಿದ್ದಾರೆ. ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೇರುವ ಮುನ್ನ ಒಂದೇ ಬಸ್‌ನಲ್ಲಿ ವಿಮಾನದ ಬಳಿ ತೆರಳಿದ್ದಾರೆ. ಈ ವೇಳೆ ತೆಗೆದ ಫೋಟೋಗಳನ್ನು ಸೋನು ಹಂಚಿಕೊಂಡಿದ್ದಾರೆ. ಸದ್ಯ ಸೋನು ಹಂಚಿಕೊಂಡ ಫೋಟೋಗಳು ಈಗಾಗಲೇ ಸಾವಿರಾರು ಜನ ಲೈಕ್ಸ್ ಮಾಡಿದ್ದು ಸಾಕಷ್ಟು ಹಂಚಿಕೊಳ್ಳುತ್ತಿದ್ದಾರೆ.
ಬಿಗ್‌ಬಾಸ್ ಮನೆಗೆ ಈ ಹಿಂದೆ ಹೋಗಿದ್ದಾಗ ಸಖತ್ ಸುದ್ದಿಯಲ್ಲಿ ಇದ್ದ ಸೋನು ಹೊರಬಂದ ಮೇಲೂ ಒಂದಿಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಈಗ ಬಿಎಸ್‌ವೈ ಜೊತೆ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಸೋನು ಮನ್ನೆಯಷ್ಟೇ ತಮ್ಮ ಕನಸಿನ ಮನೆ ಗೃಹ ಪ್ರವೇಶ ಮಾಡಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಯಲ್ಲಿ ತಮ್ಮ ಹೊಸ ಮನೆ ಕಟ್ಟಿಸಿದ್ದು ಅದರ ಗೃಹ ಪ್ರವೇಶದ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಇದಕ್ಕೆ ಅವರ ಅಭಿಮಾನಿಗಳು ಕಾಮೆಂಟ್ ಮಾಡವ ಮೂಲಕ ಅಭಿನಂದನೆಯನ್ನು ತಿಳಿಸಿದ್ದರು. ಅಲ್ಲದೆ ಸದ್ಯದ್ರಲ್ಲೇ ತಮ್ಮ ಮದುವೆ ಬಗ್ಗೆ ಅನೌನ್ಸ್ ಮಾಡ್ತೀನಿ ಅಂತಲೂ ಹೇಳಿಕೊಂಡಿದ್ದರು.
ನನಗೂ ಎಲ್ಲರಂತೆ ಮದುವೆ ಆಗಬೇಕು ಅನಿಸುತ್ತಿದೆ. ಸದ್ಯದ್ರಲ್ಲೇ ನಾನು ಮದುವೆ ಆಗುತ್ತೇನೆ. ಹುಡುಗ ಯಾರು ಅಂತ ತಿಳಿದುಕೊಳ್ಳಲು ಕಾಮೆಂಟ್ ಮಾಡಿ ಎಂದಿದ್ದರು. ಆದರೆ ಹುಡುಗ ಯಾರು, ಮದುವೆ ಯಾವಾಗ ಎಂದು ಸೋನು ಹೇಳಿಕೊಂಡಿಲ್ಲ.












Click it and Unblock the Notifications