Sonu Srinivas Gowda: ಗೋವಾ ಟ್ರಿಪ್ ಮಾಡಿ ಕಪ್ಪಾದ ಸೋನು ಶ್ರೀನಿವಾಸ್ ಗೌಡ: ಸಖತ್ ಶಾಪಿಂಗ್..
ಸೋನು ಶ್ರೀನಿವಾಸ ಗೌಡ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿಕೊಂಡು ಸಿಕ್ಕಾಪಟ್ಟೆ ಫೇಮಸ್ ಆಗಿರುವ ಹುಡುಗಿ. ಇದಲ್ಲದೆ ಬಿಗ್‌ಬಾಸ್ ಕನ್ನಡ ಒಟಿಟಿ 1ರ ಸ್ಪರ್ಧಿಯಾಗಿ ಸೋನು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಸೋನು ಗೋವಾ ಪ್ರವಾಸದ ವಿಡಿಯೋ ಭಾರೀ ವೈರಲ್ ಆಗಿದೆ. ಗೋವಾದಲ್ಲಿ ಬಿಸಿಲು ಜಾಸ್ತಿ ಇರೋದ್ರಿಂದ ನಾನು ಕಪ್ಪಾಗಿದ್ದೇನೆ ಅಂತ ಸೋನು ಹೇಳಿಕೊಂಡಿದ್ದಾರೆ.
ಹೌದು... ತಮ್ಮದೇ ಆದ ಯೂಟ್ಯೂಬ್ ಚಾನಲ್ ಮಾಡಿಕೊಂಡಿರುವ ಸೋನು ಅದರಲ್ಲಿ ತಮ್ಮ ಗೋವಾ ಪ್ರವಾಸದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಗೋವಾ ಪ್ರವಾಸ ಹೋಗುವ ಮುನ್ನ ಮಾಡಿದ ಶಾಪಿಂಗ್ ಹಾಗೂ ಪ್ಯಾಕಿಂಗ್‌ಯಿಂದ ಹಿಡಿದು ಕೆಲ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇನ್ನೂ ಗೋವಾ ರೀಚ್ ಆದ ಬಳಿಕವೂ ಕೆಲ ವಿಡಿಯೋಗಳನ್ನ ಮಾಡಿ ಅದನ್ನು ಹಂಚಿಕೊಂಡಿದ್ದಾರೆ.

ಬೀಚ್‌ಗೆ ಹೋಗಿ ರೀಲ್ಸ್ ಮಾಡಿಕೊಂಡು ಬರಬೇಕು ಅಂದುಕೊಂಡ ಸೋನುಗೆ ಸೂರ್ಯನೊಂದಿಗೆ ಮಳೆರಾಯ ಕೂಡ ಅಡ್ಡಿಯನ್ನುಂಡು ಮಾಡಿದ್ದಾನೆ. ಹೀಗಿದ್ದರೂ ಸೋನು ಮಾತ್ರ ತನ್ನ ಮೊಬೈಲ್‌ನಲ್ಲಿ ರೀಲ್ಸ್ ಮಾಡುವುದನ್ನು ನಿಲ್ಲಿಸದೇ ಗೋವಾದಲ್ಲಿ ಭೇಟಿ ನೀಡಿದ ಪ್ರತಿಯೊಂದು ಸ್ಥಳಗಳ ವಿಡಿಯೋ ಮಾಡಿದ್ದಾರೆ. ಅಲ್ಲದೆ ಭರ್ಜರಿ ಶಾಪಿಂಗ್ ಕೂಡ ಮಾಡಿದ್ದಾರೆ.
ಗೋವಾದಲ್ಲಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ತಿಂಡಿ ಮಾಡಿ ಬೈಕ್ ಬಾಡಿಗೆ ತೆಗೆದುಕೊಂಡು ತಮ್ಮ ಪ್ರಯಾಣವನ್ನು ಸೋನು ಆರಂಭಿಸಿದರು. ಬೈಕ್ ತೆಗೆದುಕೊಂಡು ಕಂಡೊಲಿಮ್ ಬೀಚ್(candolim beach)ಗೆ ಭೇಟಿ ನೀಡಿದರು. ಅಲ್ಲಿ ಸಿಕ್ಕಾಪಟ್ಟೆ ಬಿಸಿಲು ನಿಲ್ಲೋಕು ಆಗ್ತಿಲ್ಲ ಅಂತಿದ್ದ ಸೋನು ಬೇಗ ಮನೆಗೆ ಹೋದ್ರೆ ಸಾಕು ಅಂತ ಸಖತ್ ಸುಸ್ತಾಗಿ ಹೋಗಿದ್ರು.

ಬಳಿಕ ಬೀಚ್ ಬಳಿ ಮಾವಿನ ಕಾಯಿ ಮಸಾಲಾ ಸವಿಯುತ್ತಾ, ತಮ್ಮ ಪ್ರಯಾಣ ಮುಂದುವರೆಸಿದರು. ಅಲ್ಲದೇ ಸೋನು ಬೀಚ್‌ನಲ್ಲಿ ಆಟ ಆಡುತ್ತಾ ಬಿಸಿಲಿಗೆ ಕಪ್ಪಾಗಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನೂ ಬೀಚ್ ಅಲ್ಲಿ ಆಟವಾಡುವಾಗಲೇ ಜೋರಾಗಿ ಸುರಿದ ಮಳೆಗೆ ಸೋನು ಅಂಗಡಿಯೊಂದರ ಆಶ್ರಯ ಪಡೆಯುತ್ತಾರೆ. ಜೋರಾಗಿ ಮಳೆ ಬಂದಿದ್ದರಿಂದ ತಾವು 'ಬೀಚ್ ಬಂದಿರೋ ಟೈಮೇ ಸರಿಯಾಗಿಲ್ಲ. ಜೋರಾಗಿ ಮಳೆ ಬರುತ್ತಿದೆ. ಬೀಚ್‌ಗೆ ಹೋಗಲು ಆಗಲ್ಲಿಲ್ಲ' ಅಂತ ಬೇಸರ ವ್ಯಕ್ತಪಡಿಸಿದರು.
ಇನ್ನೇನು ಮಳೆ ಬರ್ತಾಯಿದೆ ಅಂತ ಅದೇ ಗ್ಯಾಪ್ ಅಲ್ಲಿ ಸೋನು ಶಾಪಿಂಗ್ ಮಾಡಲು ಶುರು ಮಾಡುತ್ತಾರೆ. ಅಂಗಡಿಯಲ್ಲಿ ಬಟ್ಟೆ ಖರೀದಿಗೆ ಮುಂದಾದ ಸೋನು ತಮ್ಮ ನೆಚ್ಚಿನ ಸ್ಕರ್ಟ್ ಹಾಗೂ ಶಾರ್ಟ್ ಪ್ಯಾಂಟ್‌ಗಳನ್ನು ನೋಡುತ್ತಾರೆ. ಅಲ್ಲಿ ತಮಗೆ ಇಷ್ಟ ಆದ ಛತ್ರಿ, ಬ್ಯಾಗ್, ಚಪ್ಪಲ್ ಜೊತೆಗೆ ಬಟ್ಟೆಗಳನ್ನು ಖರೀದಿ ಮಾಡಿ ಸಖತ್ ಎಂಜಾಯ್ ಮಾಡ್ತಾರೆ. ಬಳಿಕ 'I Love Goa' ಎನ್ನುವ ಶರ್ಟ್ ಖರೀದಿ ಮಾಡಿ ಮಳೆಯನ್ನು ಆನಂದಿಸುತ್ತಾರೆ.

ಇನ್ನೂ ಮಳೆ ಬಂದು ನಿಂತಿದ್ದರಿಂದ ವಾತಾವರಣ ಸ್ವಲ್ಪ ತಂಪಾಗಿತ್ತು. ಆದರೂ ಆಗಾಗ ಸೋನು ನಾನು ಸ್ವಲ್ಪ ಕಪ್ಪಾದೆ ಅಂತ ಹೇಳ್ತಾನೇ ಇದ್ರು. ಒಟ್ಟಿನಲ್ಲಿ ಸೋನು ಗೌಡ ಅವರ ಗೋವಾ ಟ್ರಿಪ್ ಬಗ್ಗೆ ಸಾಕಷ್ಟು ಫಾಲವರ್ಸ್ ಸಿಕ್ಕಪಾಟ್ಟೆ ಇಂಟ್ರಸ್ಟ್ ತೋರಿಸಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಜನ ವಿಡಿಯೋವನ್ನು ನೀಡಿದ್ದಾರೆ.












Click it and Unblock the Notifications