Sonal: 29 ವರ್ಷದ ಸೋನಾಲ್ & 41 ವರ್ಷ ವಯಸ್ಸಿನ ತರುಣ್ ಸುಧೀರ್ ಲವ್ವಲ್ಲಿ ಬಿದ್ದಿದ್ದು ಹೇಗೆ?

ಸೋನಾಲ್ ಮೊಂಟೇರಿಯೋ ಬಾಳಲ್ಲಿ ಹೊಸ ಅತಿಥಿಯ ಆಗಮನ ಆಗುತ್ತಿದೆ. ತರುಣ್ ಸುಧೀರ್ ಜೊತೆಗೆ ಸಪ್ತಪದಿ ತುಳಿಯಲು 'ರಾಬರ್ಟ್' ನಟಿ ಸೋನಾಲ್ ಮೊಂಟೇರಿಯೋ ಸಜ್ಜಾಗಿದ್ದಾರೆ. ಈ ಇಬ್ಬರ ಪ್ರೇಮಕಾವ್ಯ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ 29 ವರ್ಷದ ಸೋನಾಲ್ & 41 ವರ್ಷ ವಯಸ್ಸಿನ ತರುಣ್ ಸುಧೀರ್ ಲವ್ವಲ್ಲಿ ಬಿದ್ದಿದ್ದು ಹೇಗೆ? ಇವರ ಪ್ರೀತಿಗೆ ಮನೆಯವರ ಬೆಂಬಲ ಹೇಗೆ ಪಡೆದರು? ಬನ್ನಿ ತಿಳಿಯೋಣ.

ತರುಣ್ ಸುಧೀರ್ ಅವರು ಕನ್ನಡದ ಲೆಜೆಂಡ್ ನಟ ಸುಧೀರ್ ಅವರ ಮಗ. ಕನ್ನಡ ಸಿನಿಮಾಗಳ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದರು ಸುಧೀರ್. ಇಂತಹ ಸುಧೀರ್ ಅವರ ಪುತ್ರ ತರುಣ್ ಸುಧೀರ್ ಕೂಡ ಪ್ಯಾನ್ ಇಂಡಿಯಾ ಲೆವೆಲ್ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ. ತರುಣ್ ಸುಧೀರ್ ಸಾಲು, ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ನೀಡುತ್ತಿದ್ದರೂ ಅವರಿಗೆ ಮದುವೆ ಆಗಿಲ್ಲ ಎಂಬ ಕೊರಗು ತರುಣ್ ಸುಧೀರ್ ಕುಟುಂಬಕ್ಕೆ ಕಾಡುತ್ತಿತ್ತು. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಗೆಳೆಯ ಅದ್ಭುತವಾದ ಸುದ್ದಿ ಒಂದನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದಾರೆ!

Sonal Monteiro And Tharun Sudhir Love Story Detail

ಸೋನಾಲ್ ಲವ್ಸ್ ತರುಣ್ ಸುಧೀರ್!

ದರ್ಶನ್ ತೂಗುದೀಪ್ & ವಿನೋದ್ ಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ರಾಬರ್ಟ್' ಚಿತ್ರದ ಶೂಟಿಂಗ್ ಸಮಯದಲ್ಲೇ ಇಬ್ಬರ ಲವ್ ಸ್ಟೋರಿ ಶುರುವಾಗಿತ್ತು. ನಟಿ ಸೋನಾಲ್ ಮೊಂಟೇರಿಯೋ ಅವರು ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ 'ರಾಬರ್ಟ್' ಮೂಲಕ ದೊಡ್ಡ ತಿರುವು ಪಡೆದರು. ಹೀಗಿದ್ದಾಗಲೇ ನಟಿ ಸೋನಾಲ್ ಮೊಂಟೇರಿಯೋ & ಅದೇ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಅವರ ಮಧ್ಯೆ ಪ್ರೀತಿ ಮೂಡಿತ್ತು. ಇದಕ್ಕೆ ಕಾರಣ ಆಗಿದ್ದು ಕೂಡ ದರ್ಶನ್ ತೂಗುದೀಪ್ ಅವರಂತೆ! ಹೀಗೆ ತಂಗಿ ಸೋನಾಲ್ ಮೊಂಟೇರಿಯೋ ಅವರ ಮದುವೆಗೆ ಅಣ್ಣ ದರ್ಶನ್ ತೂಗುದೀಪ್ ಅವರು ಪರೋಕ್ಷವಾಗಿ ಬೆಂಬಲ ನೀಡಿದ್ದರು.

ಆಗಸ್ಟ್ 10 & 11ಕ್ಕೆ ಮದುವೆ

ಹೀಗೆ ಇಬ್ಬರ ನಡುವೆ ಪ್ರೀತಿ ಆದ ನಂತರ, ಹಲವು ತಿಂಗಳ ಕಾಲ ಕಾದು ನಂತರ ಪರಸ್ಪರ ತಮ್ಮ ತಮ್ಮ ಮನೆಯವರ ಬಳಿ ಮಾಹಿತಿ ಹಂಚಿಕೊಂಡಿದ್ದರು. ಎರಡೂ ಕುಟುಂಬಗಳ ನಡುವೆ ಇಬ್ಬರ ಮದುವೆ ಬಗ್ಗೆ ಚರ್ಚೆ ನಡೆದ ನಂತರ ಒಪ್ಪಿಗೆ ಸಿಕ್ಕಿದ್ದು, ಮದುವೆಗೆ ಕೂಡ ಸಜ್ಜಾಗಿದ್ದಾರೆ. ಹೀಗೆ ತಮ್ಮ ಮದುವೆಯ ಮೊದಲನೇ ಪತ್ರಿಕೆಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರಿಗೆ ನೀಡಿದ್ದಾರೆ ತರುಣ್ ಸುಧೀರ್ ಅವರು. ಆಗಸ್ಟ್ 10 & 11ಕ್ಕೆ ಇಬ್ಬರೂ ಮದುವೆ ಆಗಲಿದ್ದು ಕನ್ನಡ ಸಿನಿಮಾ ಇಂಡಸ್ಟ್ರಿ ಇಬ್ಬರ ಮದುವೆಗೆ ಸಾಕ್ಷಿ ಆಗಲಿದೆ. ಈಗಾಗಲೇ, ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ನಟ & ನಟಿಯರಿಗೆ ಇಬ್ಬರ ಮದುವೆ ಆಮಂತ್ರಣ ಪತ್ರಿಕೆಯು ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+