ಗಂಡ ಹಲ್ಲೆ ಮಾಡಿದ್ರು ಅಂತಾ ವಿಡಿಯೋ ಮಾಡಿದ ರೇಷ್ಮಾ ಆಂಟಿಗೆ ಉಗಿದ ನೆಟ್ಟಿಗರು
ಹಾಯ್ ಫ್ರೆಂಡ್ಸ್ ಅಂತಾ ವಿಡಿಯೋ ಮಾಡುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರುವ ರೀಲ್ಸ್ ಸ್ಟಾರ್ ಹಾಗೂ ಕಲರ್ಸ್ ಕನ್ನಡದ ಗಿಚ್ ಗಿಲಿ ಗಿಲಿ ಕಾರ್ಯಕ್ರಮದ ಮಾಜಿ ಸ್ಪರ್ಧಿ ರೇಷ್ಮಾ ಆಂಟಿ ಜೀವನದಲ್ಲಿ ಈಗ ಮತ್ತೆ ಬಿರುಗಾಳಿ ಎದ್ದಿದೆ. ಮೊದ ಮೊದಲು ನನ್ನ ಗಂಡ ಹೊಡೆದ ಫ್ರೆಂಡ್ಸ್, ಮನೆಯ ಬಟ್ಟೆಗಳಿಗೆ ಬೆಂಕಿ ಹಚ್ಚಿದ ಫ್ರೆಂಡ್ಸ್ ಅಂತಾ ವಿಡಿಯೋ ಮಾಡುತ್ತಿದ್ದ ರೇಷ್ಮಾ ಆಂಟಿ ಫೇಮಸ್ ಆಗುತ್ತಿದ್ದಂತೆ ತಮ್ಮ ಹಳೆ ವರಸೆ ಬದಲಿಸಿದ್ದರು.
ನನ್ನ ಗಂಡನೇ ದೇವರು, ಅವರ ಬೆಂಬಲದಿಂದಲೇ ನಾನು ಬೆಳೆಯುತ್ತಿದ್ದೇನೆ. ಯಾರು ಏನೇ ಹೇಳಿದರೂ ಕೂಡ ನನ್ನ ಗಂಡ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಅಂತೆಲ್ಲಾ ರೇಷ್ಮಾ ಆಂಟಿ ವಿಡಿಯೋ ಮಾಡುತ್ತಿದ್ದರು. ಈ ದಂಪತಿ ಅನ್ಯೋನ್ಯವಾಗಿದ್ದರು ಕೂಡ. ಗಂಡ-ಹೆಂಡತಿ ಜೊತೆಯಾಗಿ ರೀಲ್ಸ್ ಕೂಡ ಮಾಡುತ್ತಿದ್ದರು. ಇತ್ತೀಚಿಗೆ ರೇಷ್ಮಾ ಆಂಟಿ ನನ್ನ ತಮ್ಮನ ರೀತಿ ಎಂದು ಹೇಳಿರುವ ವ್ಯಕ್ತಿಯ ಜೊತೆಗೆ ವಿಭಿನ್ನವಾದ ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಇವರಿಬ್ಬರ ರೀಲ್ಸ್ ಯಾವುದೇ ಸಿನಿಮಾ ಹಾಡಿಗೂ ಕಮ್ಮಿ ಇರದಂತೆ ವಿಡಿಯೋ ಮಾಡುತ್ತಿದ್ದಾರೆ. ಇವರಿಬ್ಬರ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತಿತ್ತು.

ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಿಂದ ಜನಪ್ರಿಯತೆ ಪಡೆದುಕೊಂಡಿದ್ದ ರೇಷ್ಮಾ ಆಂಟಿ ಇನ್ಸ್ಟಾಗ್ರಾಮ್‌ನಲ್ಲಿ 1.87 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಜೋಡಿ ಜನಪ್ರಿಯತೆ ಪಡೆದ ಕಾರಣ ಅನೇಕ ಬ್ರ್ಯಾಂಡ್‌ಗಳ ಪ್ರೋಮೋಷನ್ ವಿಡಿಯೋಗಳನ್ನು ಸಹ ಮಾಡುತ್ತಿದ್ದಾರೆ. ಇತ್ತ ರೇಷ್ಮಾ ಆಂಟಿ ಇಷ್ಟೆಲ್ಲಾ ಫೇಮಸ್ ಆಗುತ್ತಿದ್ದರೆ, ಅತ್ತ ಅವರ ಕುಟುಂಬದಲ್ಲಿ ಮತ್ತೆ ಕಲಹ ಶುರುವಾಗಿದ್ದು ಈ ಬಗ್ಗೆ ರೇಷ್ಮಾ ಆಂಟಿ ಸ್ವತಃ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಶಾಕಿಂಗ್ ವಿಡಿಯೋ ಹಂಚಿಕೊಂಡಿರುವ ರೇಷ್ಮಾ ಆಂಟಿ, ನನ್ನ ಗಂಡ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಪತಿ ಮತ್ತು ಮಗ ಸೇರಿಕೊಂಡು ನನ್ನ ಮತ್ತು ಅಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರುವ ರೇಷ್ಮಾ ಆಂಟಿ, ಇವರು ಒಳ್ಳೆಯವರು ಎಂದು ನೀವು ಹೇಳುತ್ತೀರಲ್ಲವೆ, ನೋಡಿ ನನ್ನ ಕಣ್ಣುಗಳಿಗೆ ಗಾಯ ಮಾಡಿದ್ದಾರೆ. ನನ್ನ ಅಪ್ಪನಿಗೆ ಚೂರಿ ಹಾಕಲು ಬಂದಿದ್ದರು ಎಂದಿದ್ದಾರೆ. ಈ ವೇಳೆ ಅವರ ಅಪ್ಪ ಇಲ್ಲ ಇಲ್ಲ ಎಂದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ನೆಟ್ಟಿಗರು ರೇಷ್ಮಾ ಆಂಟಿಯನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ಮಾಡುತ್ತಿರುವ ವಿಡಿಯೋ ನೋಡಿಯೇ ಆ ವ್ಯಕ್ತಿ ಹಾಗೆ ಆಗಿದ್ದಾರೆ. ನೀವು ಗಂಡ ಮಗನನ್ನು ನೋಡಿಕೊಂಡು ಇರಬೇಕು ಅಲ್ಲವೇ?, ನೀವು ಪತಿಯಿಂದ ದೂರಾಗಿ ವಿಡಿಯೋ ಮಾಡಿಕೊಂಡಿದ್ದರೆ ಹೇಗೆ? ನಿಮ್ಮ ವಿಡಿಯೋಗಳನ್ನು ನೋಡಿ ನೋಡಿ ಅವರ ಮನಸ್ಥಿತಿ ಹೇಗೆ ಆಗಿರಬೇಡ? ನೀವು ರೀಲ್ಸ್ ಮಾಡಿ ಆದರೆ ಕುಟುಂಬವನ್ನು ನೋಡಿಕೊಳ್ಳಿ, ಸೋಶಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ವಿಡಿಯೋ ಮಾಡಿದರೆ ವೈಯಕ್ತಿಕ ಜೀವನ ಹೀಗೆ ಆಗುತ್ತದೆ ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.












Click it and Unblock the Notifications