Sonu Gowda: ನೀನು ವರ್ಜಿ*?: ನೆಟ್ಟಿಗನ ಪ್ರಶ್ನೆಗೆ ನಕ್ಕು ಉತ್ತರ ಕೊಟ್ಟ ಸೋನು ಗೌಡ
ಕನ್ನಡ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಒಟಿಟಿ ಸೀಸನ್ 1ರ ಸ್ಪರ್ಧಿಯಾಗಿರುವ ಸೋನು ಶ್ರೀನಿವಾಸ್ ಗೌಡ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಹೆಣ್ಣು ಮಗವೊಂದನ್ನು ದತ್ತು ತೆಗೆದುಕೊಂಡು ಜೈಲುವಾಸ ಅನುಭವಿಸಿದ್ದ ಸೋನು ಗೌಡ ಇತ್ತೀಚಿಗಷ್ಟೇ ನಾನು ಸದ್ಯದಲ್ಲೇ ಮದುವೆಯಾಗುತ್ತೇನೆ ಅಂತಾ ಗುಡ್ ನ್ಯೂಸ್ ಕೂಡ ಕೊಟ್ಟಿದ್ದರು. ಇದೀಗ ಸೋನು ಗೌಡ ನೆಟ್ಟಿಗನೊಬ್ಬನ ಪ್ರಶ್ನೆಗೆ ನೀಡಿರುವ ಉತ್ತರ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟ್‌ವ್ ಆಗಿರುವ ಸೋನು ಗೌಡಗೆ ನೆಟ್ಟಿಗರ ಕಮೆಂಟ್‌ಗಳೇ ದೊಡ್ಡ ತಲೆ ನೋವು. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ಕೆಟ್ಟ ಕಮೆಂಟ್‌ಗಳನ್ನು ನಿರ್ಲಕ್ಷ್ಯ ಮಾಡುವ ಸೋನು ಗೌಡ, ತಮ್ಮ ಪಾಡಿಗೆ ತಮ್ಮ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಯೂಟ್ಯೂಬ್‌ನಲ್ಲಿ ಪ್ರಶ್ನೋತ್ತರ ವೇಳೆ ವ್ಯಕ್ತಿಯೊಬ್ಬ ಕೇಳಿದ ಪ್ರಶ್ನೆ, ಸೋನು ಗೌಡಗೆ ತೀವ್ರ ಮುಜುಗರ ಉಂಟು ಮಾಡಿದ್ದು, ಸೋನು ಆ ಪ್ರಶ್ನೆಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

ಯೂಟ್ಯೂಬ್‌ನಲ್ಲಿ ಅಭಿಮಾನಿಗಳು ಅನೇಕ ಪ್ರಶ್ನೆಗಳಿಗೆ ಸೋನು ಗೌಡ ಸವಿವರವಾಗಿ ಉತ್ತರಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಕೇಳಿದ ಕೆಟ್ಟ ಪ್ರಶ್ನೆಯನ್ನು ಕೂಡ ಸೋನು ಗೌಡ ವಿಡಿಯೋದಲ್ಲಿ ಓದಿದ್ದು, ಜೋರಾಗಿ ನಕ್ಕು ಉತ್ತರ ಕೊಟ್ಟಿದ್ದಾರೆ. 'ಇವನ್ಯಾರೋ ಒಬ್ಬ ಆರ್ ಯು ವರ್ಜಿ* ಅಂತಾ ಕೇಳಿದ್ದಾನೆ. ಇವನ್ಯಾರೋ ಎಂದು ಕೆಟ್ಟ ಪದ ಬಳಸಿ ಬೈದಿರುವ ಸೋನು, ಇವರಿಗೆಲ್ಲಾ ಮಾನ ಮರ್ಯಾದೆ ಇಲ್ವಾ? ಏನಾದರೂ ವಿಶೇಷ ಪ್ರಶ್ನೆ ಕೇಳಿ ಅಂದರೆ ಇಂತಹ ಪ್ರಶ್ನೆ ಕೇಳ್ತಿರಲ್ಲಾ, ನಿಮಗೆ ದೊಡ್ಡ ನಮಸ್ಕಾರ. ನೀವು ಹೇಗೆ ಅಂದುಕೊಳ್ಳುತ್ತೀರಾ ಹಾಗೆ? ನಾವು ತಲೆ ಕೆಡಿಸಿಕೊಳ್ಳಲ್ಲ ಗುರು. ಇಂತಹ ಪ್ರಶ್ನೆಗಳನ್ನು ಓದುವಂತಿಲ್ಲ. ಆದರೂ ನೀವು ಸಮಯ ಕೊಟ್ಟು ಕೇಳಿದ್ದೀರಲ್ಲಾ ಅದಕ್ಕೆ ಹೇಳುತ್ತಿರುವುದು ಅಷ್ಟೇ' ಎಂದು ಸೋನು ಗೌಡ ತಿರುಗೇಟು ನೀಡಿದ್ದಾರೆ.
ಇನ್ನು ತಮ್ಮ ಮದುವೆ ಬಗ್ಗೆ ಮಾತನಾಡಿರುವ ಸೋನು ಗೌಡ, 'ಸಾಕಷ್ಟು ಜನರು ಇದೊಂದೆ ಪ್ರಶ್ನೆ ಕೇಳುತ್ತಿದ್ದಾರೆ. ಖಂಡಿತ ಆದಷ್ಟು ಬೇಗ ನಾನು ಮದುವೆ ಆಗುತ್ತೇನೆ. ಜೊತೆಗೆ ಬೇಗ ಹುಡುಗ ಯಾರು ಎನ್ನುವ ಬಗ್ಗೆಯೂ ವೀಡಿಯೋ ಮಾಡಿ ಹೇಳುತ್ತೇನೆ. ಹುಡುಗನ ಫೋಟೊ ಕೂಡ ರಿವೀಲ್ ಮಾಡುತ್ತೇನೆ. ಮದುವೆ ಬಗ್ಗೆ ಕೂಡ ವಿಡಿಯೋ ಮಾಡಿ ಹೇಳುತ್ತೇನೆ' ಎಂದು ತಿಳಿಸಿದ್ದಾರೆ.












Click it and Unblock the Notifications