Simran: 'ಆಂಟಿ' ಪಾತ್ರದ ಬಗ್ಗೆ ನಟಿ ಸಿಮ್ರಾನ್‌ಗೆ ಖ್ಯಾತ ನಟಿಯಿಂದ ಅವಮಾನ
ನಟಿ ಸಿಮ್ರಾನ್ ಅವರು ದಶಕಗಳ ಕಾಲ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಮಿಂಚಿದವರು. ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಅವರು ಸ್ಟಾರ್ ನಟಿಯಾಗಿ ಹೆಸರುವಾಸಿಯಾಗಿದ್ದರು. ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಸಿಮ್ರಾನ್ ಅವರು ಈಗೀಗ ಅವರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾಗಳಲ್ಲಿ ಈಗಲೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಿಮ್ರಾನ್ ಅವರು ಆಂಟಿ ಪಾತ್ರಗಳನ್ನು ಮಾಡುತ್ತಿದ್ದಾರೆ ಎಂದು ಮತ್ತೊಬ್ಬ ಖ್ಯಾತ ನಟಿ ಅವಮಾನ ಮಾಡಿದ್ದಾರೆ. ಈ ವಿಚಾರವನ್ನು ಖುದ್ದಾಗಿ ಸಿಮ್ರಾನ್ ಅವರೇ ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಬೇಸರದಿಂದಿ ಮಾತನಾಡಿರುವ ಸಿಮ್ರಾನ್ ಅವರು ಕೆಟ್ಟ ಅನುಭವೊಂದನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ನಟಿಯೊಬ್ಬರು ಮಾಡಿದ ಪಾತ್ರದ ಬಗ್ಗೆ ನಾನು ಮೆಚ್ಚುಗೆ ವ್ಯಕ್ತಪಡಿಸಿದ್ದೆ. ಈ ಸಂಬಂಧ ನನ್ನ ಸಹ-ನಟಿಯೊಬ್ಬರಿಗೆ ನಾನು ಮೆಸೇಜ್ ಕೂಡ ಕಳಿಸಿದ್ದೆ. "ಆ ಪಾತ್ರದಲ್ಲಿ ನಿಮ್ಮನ್ನು ನೋಡಿ ನನಗೆ ಆಶ್ಚರ್ಯವಾಯಿತು" ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಅದಕ್ಕೆ ತಕ್ಷಣವೇ ರಿಪ್ಲೈ ಬಂತು. 'ಆಂಟಿ ಪಾತ್ರ ಮಾಡುವುದಕ್ಕಿಂತ ಇದೆಷ್ಟೋ ಉತ್ತಮ ಎಂದು ಆ ನಟಿ ನನಗೆ ರಿಪ್ಲೈ ಮಾಡಿದರು. ಈ ಉತ್ತರವನ್ನು ನಾನು ಅವರಿಂದ ನಿರೀಕ್ಷಿಸಿರಲಿಲ್ಲ. ಇದೊಂದು ಅಸಂವೇದನಾಶೀಲ ಸಂದೇಶ. ನನಗೆ ಇದಕ್ಕಿಂತ ಉತ್ತಮ ಉತ್ತರ ಸಿಗುತ್ತಿತ್ತು ಎಂದು ನಾನು ಭಾವಿಸಿದ್ದೆ ಎಂದು ಸಿಮ್ರಾನ್ ಹೇಳಿದ್ದಾರೆ.

ನಟಿಯ ಹೇಳಿಕೆಗೆ ತಿರುಗೇಟು ನೀಡಿರುವ ಸಿಮ್ರಾನ್ ಅವರು ಡಬ್ಬಾ ಪಾತ್ರಗಳನ್ನು ನಿರ್ವಹಿಸಿ ಏನೂ ಮಾಡದೆ ಇರುವುದಕ್ಕಿಂತ, ಆಂಟಿ ಪಾತ್ರಗಳು ಹಾಗೂ ತಾಯಿಯ ಪಾತ್ರಗಳನ್ನು ಮಾಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ. "ಕನ್ನತಿಲ್ ಮುತ್ತಮಿತ್ತಲ್"ನಲ್ಲೂ ನಾನು ಅದನ್ನೇ ಮಾಡಿದ್ದೇನೆ. ನಾವೆಲ್ಲರೂ ಏನು ಮಾಡಬೇಕೆಂದು ಬಯಸುತ್ತೇವೆ ಎಂಬುದರ ಬಗ್ಗೆ ನಮಗೆ ವಿಶ್ವಾಸವಿರಬೇಕು ಎಂದು ನಟಿಯ ಹೇಳಿಕೆಗೆ ಕೌಂಟರ್ ನೀಡಿದ್ದಾರೆ.
ನನಗೆ ಆಂಟಿ ಅಥವಾ ತಾಯಿಯ ಪಾತ್ರಗಳಲ್ಲಿ ನಟಿಸಲು ಅಭ್ಯಂತರವಿಲ್ಲ. ನಾವು ಮಾಡುವ ಕೆಲಸದಲ್ಲಿ ನಾವು ಆತ್ಮವಿಶ್ವಾಸ ಹೊಂದಿರಬೇಕು. ಜೀವನದ ಪ್ರತಿಯೊಂದು ಹಂತದಲ್ಲೂ ನಾನು ಯಾವಾಗಲೂ ಮಹಿಳೆಯಾಗಿರುವುದನ್ನು ಸ್ವೀಕರಿಸಿದ್ದೇನೆ. ಅದನ್ನು ಪ್ರತಿಬಿಂಬಿಸುವ ಪಾತ್ರಗಳನ್ನು ನಾನು ವಹಿಸಿಕೊಳ್ಳುತ್ತೇನೆ. ಅದು ಆಂಟಿಯ ಪಾತ್ರವೇ ಆಗಿರಬಹುದು ಇನ್ನೇನಾದರೂ ಆಗಿರಬಹುದು ಎಂದಿದ್ದಾರೆ.

ಸಿಮ್ರಾನ್‌ಗೆ ಅವಮಾನ ಮಾಡಿದ ನಟಿ ಯಾರು?
ಸಿಮ್ರಾನ್ ಅವರು ಸಹನಟಿಯೊಬ್ಬರು ನನಗೆ ಆಂಟಿ ಪಾತ್ರಗಳ ಬಗ್ಗೆ ಈ ರೀತಿ ಹೇಳಿದರು ಎಂದಷ್ಟೇ ಹೇಳಿದ್ದಾರೆ. ಆದರೆ ಆ ನಟಿಯ ಹೆಸರು ರಿವೀಲ್ ಮಾಡಿಲ್ಲ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಹಲವು ನಾಯಕ ನಟಿಯರ ಹೆಸರು ಈ ವಿಚಾರದಲ್ಲಿ ತಳುಕು ಹಾಕಿಕೊಂಡಿದೆ. ಸಿಮ್ರಾನ್ ಡಬ್ಬಾ ಪಾತ್ರಗಳು ಎಂದು ಹೇಳಿರುವುದೇ ಹೊಸ ವಿವಾದಕ್ಕೆ ಕಾರಣವಾಗಿದೆ.
ಸಿಮ್ರಾನ್ ಅವರು "ಡಬ್ಬಾ" ಎನ್ನುವ ಮೂಲಕ ಅವಮಾನ ಮಾಡಿದ ನಟಿಯ ಸುಳಿವು ನೀಡಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಅನೇಕರು ಸಿಮ್ರಾನ್ ಹೇಳಿದ್ದು ಖ್ಯಾತ ನಟಿ ಜ್ಯೋತಿಕಾ ಅವರ ಬಗ್ಗೆ ಎಂದು ಕಾಮೆಂಟ್ ಮಾಡಿದ್ದಾರೆ. ಏಕೆಂದರೆ ಜ್ಯೋತಿಕಾ ಅವರು ಇತ್ತೀಚಿನ ವೆಬ್ ಸಿರೀಸ್ 'ಡಬ್ಬಾ ಕಾರ್ಟೆಲ್'ನಲ್ಲಿ ನಟಿಸಿದ್ದರು. ಹಾಗಾಗಿ ಸಿಮ್ರಾನ್ ಅವರ ಕಾಮೆಂಟ್‌ಗಳು ಜ್ಯೋತಿಕಾ ಅವರನ್ನು ಗುರಿಯಾಗಿರಿಸಿಕೊಂಡಿವೆ ಎಂದು ಚರ್ಚೆಗಳು ಶುರುವಾಗಿವೆ.
ಇನ್ನು ಕೆಲವರು ನಟಿ ತ್ರಿಶಾ ಅವರ ಹೆಸರನ್ನು ಎಳೆದು ತಂದಿದ್ದಾರೆ. ಗೋಟ್ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ತ್ರಿಶಾ ಕುರಿತು ಸಿಮ್ರಾನ್ ಹೇಳಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಇಲ್ಲಿಯವರೆಗೆ ಸಿಮ್ರಾನ್ ಯಾರನ್ನೂ ನೇರವಾಗಿ ಹೆಸರು ಹೇಳಿಲ್ಲ. ಆದರೆ ಅಭಿಮಾನಿಗಳು ಸಿಮ್ರಾನ್ ಹೇಳಿಕೆ ಆಧರಿಸಿ ಈ ಇಬ್ಬರು ನಟಿಯರ ಹೆಸರು ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹುತೇಕ ಕಾಮೆಂಟ್‌ನಲ್ಲೂ ಈ ಇಬ್ಬರ ಹೆಸರೇ ಇದೆ.












Click it and Unblock the Notifications