ಪುನೀತ್ ರಾಜ್‌ಕುಮಾರ್ ಅಭಿಮಾನಿ ಶ್ರೇಯಾಂಕಾ ಪಾಟೀಲ್ ಮಾತು!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈಗ ದೇವರಾಗಿದ್ದು, ಅಭಿಮಾನಿಗಳು ಇಂದಿಗೂ ತಮ್ಮ ನೆಚ್ಚಿನ ನಟನ ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇಡೀ ಭಾರತವೇ ಈಗ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಂಡರೆ ಕಣ್ಣೀರು ಹಾಕುತ್ತದೆ. ಯಾಕಂದ್ರೆ ಅಪ್ಪು ಅಂತಹ ಸಾಧನೆ ಮಾಡಿದ್ದರು, ಸಮಾಜ ಸೇವೆ ಮೂಲಕ ಈ ಮಣ್ಣಿನ ಮಗನಾಗಿದ್ದರು. ಇದೀಗ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಕನ್ನಡತಿ & ಆರ್‌ಸಿಬಿ ಟೀಂ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಏನ್ ಹೇಳಿದ್ದಾರೆ ಗೊತ್ತಾ?

ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಬಿಟ್ಟು ಹೋಗಿ ವರ್ಷಗಳೇ ಕಳೆದಿವೆ. ಆದರೆ ಅವರ ನೆನಪು ಮಾತ್ರ ಎಂದೆಂದಿಗೂ ಅಜರಾಮರ ಎಂಬ ಮಾತು ಕೇಳಿಬರುತ್ತಲೇ ಇರುತ್ತೆ. ಯಾಕಂದ್ರೆ ಅಪ್ಪು ಅವರು ಎಲ್ಲರಿಗೂ ಮಾದರಿಯಾಗಿ ಬದುಕಿದರು. ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಉತ್ತಮ ಸಂದೇಶ ಸಾರಿದರು. ಹೀಗೆ ಎಲ್ಲೆಲ್ಲೂ ಫ್ಯಾನ್ಸ್ ಅಪ್ಪು ಅವರನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಾರೆ. ಈಗ ಸ್ವತಃ ಕನ್ನಡತಿ & ಆರ್‌ಸಿಬಿ ಟೀಂ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಕೂಡ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

Shreyanka Patil Said That She Always Watches Puneeth Rajkumar Movies

ಪುನೀತ್‌ರ ಅಭಿಮಾನಿ ಆರ್‌ಸಿಬಿ ಆಟಗಾರ್ತಿ!

ಶ್ರೇಯಾಂಕಾ ಪಾಟೀಲ್ ಅವರು ನೀಡಿರುವ ಸಂದರ್ಶನ ಒಂದರಲ್ಲಿ, ಪವರ್ ಸ್ಟಾರ್ ಕುರಿತು ಮಾತನಾಡಿದ್ದಾರೆ. ನನಗೆ ಸಮಯ ಸಿಕ್ಕಾಗೆಲ್ಲಾ ಕನ್ನಡ ಸಿನಿಮಾಗಳನ್ನು ನೋಡುತ್ತೇನೆ. ಪುನೀತ್ ರಾಜ್‌ಕುಮಾರ್ ಅವರು ನನಗೆ ತುಂಬಾನೆ ಇಷ್ಟವಾಗುವ ನಟ, ಅವರ ಹಳೆಯ ಸಿನಿಮಾ ತಪ್ಪದೇ ನೋಡುತ್ತೇನೆ. ಮಿಲನ ಮತ್ತಿತರ ಸಿನಿಮಾಗಳು ಟಿವಿಯಲ್ಲಿ ಬಂದಾಗ ನಾನು ಅವರ ಸಿನಿಮಾ ತಪ್ಪದೇ ನೋಡುತ್ತೇನೆ ಎಂದಿದ್ದಾರೆ. ಈ ಮೂಲಕ ಆರ್‌ಸಿಬಿ ಟೀಂ ಪಾಲಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ಶ್ರೇಯಾಂಕಾ ಪಾಟೀಲ್.

ಆರ್‌ಸಿಬಿ ಕಪ್ ಗೆಲ್ಲುವಲ್ಲಿ ಶ್ರೇಯಾಂಕಾ ಪಾತ್ರ!

ಶ್ರೇಯಾಂಕ ಪಾಟೀಲ್ ಅವರ ಹೆಸರು ಇದೀಗ ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಶೇಯಾಂಕ ಕ್ರಿಕೆಟ್ ವಿಡಿಯೋ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ಹಾಗೇ ಶೇಯಾಂಕ ಆಟಕ್ಕೂ ಫ್ಯಾನ್ಸ್ ಈಗ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇಯಾಂಕ ಹವಾ ಜೋರಾಗಿದೆ. ಇದೇ ಸಮಯದಲ್ಲಿ ಅಪ್ಪು ಅಂದ್ರೆ ಪವರ್ ಸ್ಟಾರ್ ಪುನೀತ್ ಅವರ ಬಗ್ಗೆ ಶ್ರೇಯಾಂಕಾ ಅವರ ಮಾತು ಈಗ ವೈರಲ್ ಆಗುತ್ತಿದೆ.

ಮೊದಲ ಬಾರಿ ಆರ್‌ಸಿಬಿಗೆ ಕಪ್

ಆರ್‌ಸಿಬಿ ಮೊದಲ ಬಾರಿ ಕಪ್ ಗೆದ್ದ ಬಳಿಕ ಶ್ರೇಯಾಂಕಾ ಹವಾ ಮತ್ತಷ್ಟು ಜೋರಾಗಿದೆ. ಅಲ್ಲದೆ 2024ರ WPLನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದು, ಮುಂದೆ ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಡುವ ಗುರಿ ಹೊಂದಿದ್ದಾರಂತೆ ಕನ್ನಡತಿ ಶ್ರೇಯಾಂಕಾ ಪಾಟೀಲ್. ಆರ್‌ಸಿಬಿ ತಂಡ ಕಪ್ ಗೆಲ್ಲುವಲ್ಲಿ ಶ್ರೇಯಾಂಕಾ ಅವರ ಪಾತ್ರ ದೊಡ್ಡದಾಗಿತ್ತು. ಹೀಗಾಗಿ ಫ್ಯಾನ್ಸ್ ಶ್ರೇಯಾಂಕಾ ಅವರನ್ನು ಗ್ರೇಟ್ ಅಂತಿದ್ದಾರೆ. ಇದೇ ಸಮಯದಲ್ಲಿ ಪುನೀತ್ ಅವರ ಬಗ್ಗೆ ಶ್ರೇಯಾಂಕಾ ಆಡಿದ ಮಾತುಗಳು ವೈರಲ್ ಆಗಿ ಮತ್ತಷ್ಟು ಗೌರವ ಹೆಚ್ಚಿಸಿದೆ.

ಒಟ್ನಲ್ಲಿ ಅಪ್ಪು ಅವರನ್ನು ಕಂಡರೆ ಸೆಲೆಬ್ರಿಟಿಗಳು ಕೂಡ ಗ್ರೇಟ್ ಅಂತಾರೆ. ಯಾಕಂದ್ರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಸೆಲೆಬ್ರಿಟಿಗಳ ಪಾಲಿಗೆ ಸೆಲೆಬ್ರಿಟಿ ಆಗಿದ್ದರು ಎಂಬುದೇ ಮತ್ತೊಂದು ವಿಶೇಷ. ಹೀಗೆ ಅಪ್ಪು ಅವರನ್ನು ಕಂಡರೆ ಎಲ್ಲರಿಗೂ ತುಂಬಾನೆ ಇಷ್ಟ. ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಗುಣವನ್ನು ಎಲ್ಲರೂ ಕೊಂಡಾಡುತ್ತಾರೆ. ಈಗ ಕನ್ನಡತಿ ಕೂಡ ತಾವು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಎಂಬ ವಿಚಾರ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+