ಡಾ. ಶಿವರಾಜ್‌ಕುಮಾರ್ + ಯುವ ರಾಜ್‌ಕುಮಾರ್ = ಭರ್ಜರಿ ಡಾನ್ಸ್: ದೊಡ್ಡಪ್ಪ ಜೊತೆ ಡಾನ್ಸ್ ಮಾಡಿದ ಯುವ!
ಡಾ. ರಾಜ್‌ಕುಮಾರ್ ಕುಟುಂಬದ ಮತ್ತೊಂದು ಕುಡಿ ಕನ್ನಡ ಸಿನಿಮಾ ರಂಗದಲ್ಲಿ ಅಬ್ಬರಿಸಿ ಅಭಿಮಾನಿಗಳನ್ನು ರಂಜಿಸಲು ಬರುತ್ತಿದೆ. ಅದರಲ್ಲೂ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ, ಯುವ ರಾಜ್‌ಕುಮಾರ್ ಅವರು ಬಹುನಿರೀಕ್ಷಿತ 'ಯುವ' ಸಿನಿಮಾ ಮೂಲಕ ಇದೀಗ ಭರ್ಜರಿ ಸೌಂಡ್ ಮಾಡಲು ಸಜ್ಜಾಗಿದ್ದಾರೆ. ಈ ಸಮಯದಲ್ಲೇ ಯುವ ಸಿನಿಮಾಗೆ ದೊಡ್ಡಪ್ಪ ಡಾ. ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದಾರೆ.
ಕಟ್ಟುಮಸ್ತಾದ ದೇಹ, ಡೈಲಾಗ್ ಡೆಲಿವರಿ ಲೆಕ್ಕಕ್ಕೆ ಬಂದರೆ ತಾತನ ರೀತಿಯೇ ಡೈಲಾಗ್‌ಗಳನ್ನ ಹೊಡೆಯುವ ನಿರರ್ಗಳತೆ. ಅಷ್ಟಕ್ಕೂ ಇದು ಡಾ. ರಾಜ್‌ಕುಮಾರ್ ಅವರ ಮೊಮ್ಮಗನಾದ, ಯುವ ರಾಜ್‌ಕುಮಾರ್ ಅವರ ಕೆಪಾಸಿಟಿ. ಮೊದಲ ಸಿನಿಮಾ ರಿಲೀಸ್ ಆಗುವುದಕ್ಕೆ ಮೊದಲೇ ಹಿಂಗೆಲ್ಲಾ ಹವಾ ಎಬ್ಬಿಸಿದ್ದಾರೆ ಯುವ ರಾಜ್‌ಕುಮಾರ್. ಅದರಲ್ಲೂ ನಿನ್ನೆ ರಿಲೀಸ್ ಆದ, 'ಯುವ' ಸಿನಿಮಾದ ಮೊದಲ ಸಾಂಗ್ ಭರ್ಜರಿ ಸದ್ದು ಮಾಡುತ್ತಿದೆ. ಹೀಗೆ ಸಾಂಗ್ ರಿಲೀಸ್‌ಗೆ ಮೊದಲು, ಯುವ ರಾಜ್‌ಕುಮಾರ್ ಅವರ ದೊಡ್ಡಪ್ಪ ಡಾ. ಶಿವರಾಜ್‌ಕುಮಾರ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್ ಕೊಟ್ಟಿದ್ದಾರೆ.

ಶಿವಣ್ಣ & ಯುವ ಭರ್ಜರಿ ಡಾನ್ಸ್
ನಿನ್ನೆ ಚಾಮರಾಜನಗರ ಜಿಲ್ಲೆಯಲ್ಲಿ ಭರ್ಜರಿಯಾಗಿ ವಿಶೇಷವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಯುವ ರಾಜ್‌ಕುಮಾರ್ ಅಭಿನಯದ ಮೊದಲನೇ ಚಿತ್ರ 'ಯುವ' ಸಿನಿಮಾ ಸಾಂಗ್ 'ಒಬ್ಬನೇ ಶಿವ, ಒಬ್ಬನೇ ಯುವ' ಹಾಡು ಅದ್ಧೂರಿಯಾಗಿ ರಿಲೀಸ್ ಆಗಿದೆ. ಈ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಅಭಿಮಾನಿಗಳು ಸಾಕ್ಷಿಯಾಗಿದ್ದರು. ಆದರೆ ಕಾರ್ಯಕ್ರಮಕ್ಕೆ ಡಾ. ಶಿವರಾಜ್‌ಕುಮಾರ್ ಬಂದಿರಲಿಲ್ಲ, ಇದಕ್ಕೂ ಮೊದಲೇ ಯುವ ರಾಜ್‌ಕುಮಾರ್ ಜೊತೆ ಡಾ. ಶಿವರಾಜ್‌ಕುಮಾರ್ ಡಾನ್ಸ್ ಮಾಡಿದ್ದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಒಬ್ಬನೇ ಶಿವ ಒಬ್ಬನೇ ಯುವ 💥
— RajdhaniHaiklu (@RajdhaniHaiklu) March 3, 2024
▶️https://t.co/750KA9i7iP…#AppuLiveson #YuvaOnMarch28 #YuvaRajkumar #Shivanna #Shivarajkumar #DrShivarajkumar#SapthamiGowda #HombaleFilms #SanthoshAnanddram @aanandaaudio #RajdhaniHaiklu pic.twitter.com/0P1D2sVBCi
ದೊಡ್ಮನೆಯ ಮೊಮ್ಮಗ ಯುವ...
ಯುವ ರಾಜ್‌ಕುಮಾರ್ ಭರ್ಜರಿಯಾಗಿ ಸಿನಿಮಾ ರಂಗಕ್ಕೆ ಬರಲು ಸಜ್ಜಾಗಿದ್ದಾರೆ. ದೊಡ್ಮನೆಯ ಮೊಮ್ಮಗ ಯುವ ರಾಜ್‌ಕುಮಾರ್ ಅಭಿನಯದ ಮೊದಲ ಚಿತ್ರ ಇದೇ ತಿಂಗಳು ಅಂದ್ರೆ ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಹೀಗೆ ಸಿನಿಮಾ ರಿಲೀಸ್‌ಗೆ ಸಕಲ ಸಿದ್ಧತೆ ನಡೆಸಿದ, ಹೊಂಬಾಳೆ ಫಿಲ್ಮ್ಸ್ ಪ್ರಮೋಷನ್ಸ್ ಶುರು ಮಾಡಿದೆ. ಜೊತೆಗೇ ಯುವ ರಾಜ್‌ಕುಮಾರ್‌ರ ಡಾನ್ಸ್ ವೈರಲ್ ಆಗುತ್ತಿದೆ. 'ಯುವ' ಸಿನಿಮಾದ ಮೊದಲನೇ ಹಾಡಿನಲ್ಲಿ ಭರ್ಜರಿ ಸ್ಟೆಪ್ ಹಾಕಿರುವ, ಕನ್ನಡಿಗರ ಪ್ರೀತಿಯ ಯುವ ರಾಜ್‌ಕುಮಾರ್ ಅಪ್ಪು ಅಭಿಮಾನಿಗಳ ಮನಸ್ಸನ್ನೂ ಗೆದ್ದಿದ್ದಾರೆ.

ಒಟ್ನಲ್ಲಿ ಪುನೀತ್ ರಾಜ್‌ಕುಮಾರ್ ಅವರು ಕನ್ನಡಿಗರನ್ನು ಬಿಟ್ಟು ಹೋದ ನಂತರ, ಇದೀಗ ಅಪ್ಪು ಅವರ ಅಭಿಮಾನಿಗಳು ಯುವ ರಾಜ್‌ಕುಮಾರ್ ಅವರನ್ನ ಇಷ್ಟಪಡುತ್ತಿದ್ದಾರೆ. ಹೀಗೆ ಎಲ್ಲೆಲ್ಲೂ ಯುವ ರಾಜ್‌ಕುಮಾರ್ ಹವಾ ಬಲು ಜೋರಾಗಿದೆ. ಹಾಗೇ ಮೊದಲ ಸಿನಿಮಾಗೆ ಯುವ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದರಲ್ಲೂ ಸಂತೋಷ್ ಆನಂದ್ ರಾಮ್ ಮತ್ತೊಮ್ಮೆ ದೊಡ್ಮನೆ ನಟನಿಗೆ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಇದೇ ತಿಂಗಳು ಅಂದರೆ ಮಾರ್ಚ್ ಅಂತ್ಯಕ್ಕೆ ಯುವ ಸಿನಿಮಾ ಅದ್ಧೂರಿಯಾಗಿ, ದೇಶಾದ್ಯಂತ ರಿಲೀಸ್ ಆಗಲಿದೆ. ಫ್ಯಾನ್ಸ್ ಕೂಡ ಸಿನಿಮಾ ನೋಡಲು ಕಾಯುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹವಾ!
ಯುವ ರಾಜ್‌ಕುಮಾರ್ ಹೋಲಿಕೆಯಲ್ಲಿ ಪುನೀತ್ ಅವರ ನೆನಪು ಮಾಡುತ್ತಾರೆ. ಹಾಗೇ, ಯುವ ಮಾಡುವ ಸ್ಟಂಟ್ & ಡಾನ್ಸ್ ಕೂಡ ಪುನೀತ್ ರಾಜ್‌ಕುಮಾರ್ ಅವರನ್ನೀಗ ನೆನಪು ಮಾಡುತ್ತಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ಶುರುವಾಗಿದ್ದು ಯುವ ಅವ್ರನ್ನ ಫ್ಯಾನ್ಸ್ ಹೊಗಳುತ್ತಿದ್ದಾರೆ. ಹಾಗೇ ಸಿನಿಮಾ ನೋಡಿ ಎಂಜಾಯ್ ಮಾಡಲು ಕಾಯುತ್ತಿದ್ದಾರೆ. ಯುವ ಡಿಫರೆಂಟ್ ಎಂಟ್ರಿಗೆ ವೇದಿಕೆ ಕೂಡ ಭಾರಿ ಅಬ್ಬರದೊಂದಿಗೆ ಸಜ್ಜಾಗಿದೆ. ಇನ್ನು ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಹಿಂದೆಯೇ ಯುವ ರಾಜ್‌ಕುಮಾರ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಬಹುದಿತ್ತು. ಇದಕ್ಕಾಗಿ ಐತಿಹಾಸಿಕ ಸಿನಿಮಾ ಕಥೆ ರೆಡಿಯಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾ ತೆರೆಗೆ ಬಂದಿಲ್ಲ. ಹೀಗಾಗಿ ಆ ಸಿನಿಮಾ ಪ್ರಾಜೆಕ್ಟ್ ಬಿಟ್ಟು, ಯುವ ಸಿನಿಮಾ ಒಪ್ಪಿಕೊಂಡಿದ್ದ ದೊಡ್ಮನೆ ಮೊಮ್ಮಗ ಯುವ ರಾಜ್‌ಕುಮಾರ್ ಇದೀಗ ಅಬ್ಬರಿಸಲು ಸಜ್ಜಾಗಿದ್ದಾರೆ.












Click it and Unblock the Notifications