Get Updates
Get notified of breaking news, exclusive insights, and must-see stories!

Rashmika Mandanna: ರಶ್ಮಿಕಾರ ಹೊಸ ಸಿನಿಮಾ 'Mysaa'ಗೆ ಶಿವಣ್ಣ ಬೆಸ್ಟ್ ವಿಶ್: ನಟಿ ಹೇಳಿದ್ದೇನು?

Mysaa-Rashmika Mandanna: ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. ಹೊಸ ಸಿನಿಮಾದ ಘೋಷಣೆ ಆಗಿದೆ. ಅದರ ರಕ್ತಸಿಕ್ತ ಪೋಸ್ಟರ್ ಹಾಗೂ ಶಿರ್ಷಿಕೆ ಇಂದು ಅನಾರವರಣಗೊಂಡಿದೆ. ಸಿನಿಮಾಗೆ 'ಮೈಸಾ' (Mysaa) ಎಂದು ಹೆಸರಿಡಲಾಗಿದೆ. ಇದೀಗ ಈ ಸಿನಿಮಾ ಮತ್ತು ನಟಿ ರಶ್ಮಿಕಾ ಕುರಿತು ಸ್ಯಾಂಡಲ್‌ವುಟ್ ಸ್ಟಾರ್ ಶಿವರಾಜ್ ಕುಮಾರ್ ಅವರು ಬೆಸ್ಟ್ ವಿಶ್ ಮಾಡಿದ್ದಾರೆ. ಅದಕ್ಕೆ ನಟಿ ರಶ್ಮಿಕಾ ಏನು ಹೇಳಿದ್ರು? ಮೈಸಾ ನಿರ್ದೇಶಕ ಯಾರು? ಇಲ್ಲಿದೆ ಪೂರ್ಣ ಮಾಹಿತಿ.

ರಶ್ಮಿಕಾ ನಟನೆ ದ್ವಿಭಾಷೆಯಲ್ಲಿ ಸಿದ್ಧವಾಗಿದ್ದ 'ಕುಬೇರ' ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಅದರ ಬೆನ್ನಲ್ಲೆ ಇಂದು ಜೂನ್ 27ರಂದು ಹೊಸ ಸಿನಿಮಾದ ಹೆಸರು ಬಿಡುಗಡೆ ಮಾಡುವುದಾಗಿ ನಟಿ ರಶ್ಮಿಕಾ ಗುರುವಾರ ತಿಳಿಸಿ, ಪೋಸ್ಟರ್ ಹಂಚಿಕೊಂಡಿದ್ದರು. ಅದು ಎಲ್ಲರಲ್ಲಿ ಕುತೂಹಲ ಹುಟ್ಟುವಂತೆ ಮಾಡಿತ್ತು. ಇಂದು 'ಮೈಸಾ' ಶಿರ್ಷಿಕೆಯಡಿ ರಶ್ಮಿಕಾ ಅವರು ಮಹಿಳಾ ಪ್ರಧಾನಿ ಸಿನಿಮಾದಲ್ಲಿ ನಟಿಸುತ್ತಿರುವುದು ಖಚಿತವಾಗಿದೆ. 'ಮೈಸಾ' ಜತೆಗೆ ರಕ್ತಸಿಕ್ತ ರಶ್ಮಿಕಾ ಪೋಸ್ಟರ್ ಬಿಡುಗಡೆ ಆಗಿದೆ.

Shivarajkumar Best Wished to Rashmika Mandanna Her Upcoming Film of Revealed Title Mysaa

ಇದನ್ನು ನಟಿ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಇದಕ್ಕೆ ನಟ ಶಿವಣ್ಣ ಅವರು ಶುಭಾಷಯ ಕೋರಿದ್ದಾರೆ. 'ರಶ್ಮಿಕಾ ನಿಮ್ಮ ಹೊಸ ಸಿನಿಮಾಗೆ ಶುಭಾಶಯ ಎಂದು #Mysaa ಹ್ಯಾಷ್‌ಟ್ಯಾಗ್ ಹಾಕಿ ಶಿವಣ್ಣ ವಿಷ್ ಮಾಡಿದ್ದಾರೆ. ಕನ್ನಡಿಗರ ಕೆಂಗಣ್ಣಿಗೆ ಆಗಾಗ ಗುರಿಯಾದರೂ ಸಹ ರಶ್ಮಿಕಾರ ಹೊಸ ಪ್ರಯತ್ನ, ಕನ್ನಡದ ನಟಿ ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವುದನ್ನು ನೋಡಿ ಶಿವಣ್ಣ ಶುಭಕೋರಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಇದಕ್ಕೆ ನಟಿ ರಶ್ಮಿಕಾ ಗೌರವಯುತವಾಗಿ ಪ್ರತಿಕ್ರಿಯಿಸಿದ್ದಾರೆ. ''ಶಿವಣ್ಣ ಸರ್...ವಿಷ್ ಮಾಡಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು, ಗೌರವಿಸುತ್ತೇನೆ'' ಎಂದು ಹೇಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಶಿವಣ್ಣ ರಶ್ಮಿಕಾರ ಮೈಸಾ ಪೋಸ್ಟರ್ ಹಂಚಿಕೊಂಡಿದ್ದಾರೆ. ಮರಳಿ ನಟಿ ರಶ್ಮಿಕಾ ಶಿವಣ್ಣ ವಿಷ್ ಅನ್ನು ರಿಪೋಸ್ಟ್ ಮೂಲಕ ಗೌರವ ಪ್ರದರ್ಶಿಸಿದ್ದಾರೆ. ಇದನ್ನು ಕಂಡು ಅವರ ಫ್ಯಾನ್ಸ್ ಖುಷ್ ಆಗಿದ್ದಾರೆ.

ಈ ಸಿನಿಮಾದಲ್ಲಿ ಎಂದೂ ನೋಡಿರದ ರಶ್ಮಿಕಾ..!

ಹೌದು ಈ 'ಮೈಸಾ' ಸಿನಿಮಾದಲ್ಲಿ ಎಂದೂ ನೋಡಿರದ ಪಾತ್ರದಲ್ಲಿ ನಟಿ ರಶ್ಮಿಕಾರನ್ನು ನೋಡಲಿದ್ದೇವೆ. ಆ ಬಗ್ಗೆ ರಕ್ತಸಿಕ್ತ ಹಾಗೂ ಯೋಧ ರಾಜಕುಮಾರಿಯಂತೆ ಕಾಣುವ ರಶ್ಮಿಕಾರ ಸಿನಿಮಾ ಪೋಸ್ಟರ್ ಸಾಕಷ್ಟು ವಿಷಯಗಳನ್ನು ತಿಳಿಸುತ್ತದೆ. ಈ ಸಿನಿಮಾಗೆ ರವೀಂದ್ರ ಪುಲ್ಲೆ ಆಕ್ಷನ್ ಕಟ್ ಹೇಳಿದ್ದಾರೆ. ಸಯ್ಯಾಪುರೆಡ್ಡಿ ಚಿತ್ರ ನಿರ್ಮಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ

ಪ್ಯಾನ್ ಇಂಡಿಯಾ 'ಪುಷ್ಪಾ' ಸರಣಿ ಸಿನಿಮಾಗಳಲ್ಲಿ, ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ ಅವರನ್ನೇ ಪ್ರದಾನವಾಗಿಟ್ಟುಕೊಂಡು ಬರುತ್ತಿರುವ 'ಮೈಸಾ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಕನ್ನಡ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಲಿದೆ. ಈ ಬಗ್ಗೆ ಚಿತ್ರತಂಡ 'ಮೈಸಾ' ಶಿರ್ಷಿಕೆಯ ಪೋಸ್ಟರ್ ಮೂಲಕ ತಿಳಿಸಿದೆ. ಪೋಸ್ಟರ್ ನೋಡಿದರೆ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಗೊತ್ತಾಗುತ್ತದೆ.

ರಶ್ಮಿಕಾ ಸಿನಿ ಜೀವನ ಬದಲು

ಕನ್ನಡದ 'ಕಿರಿಕ್ ಪಾರ್ಟಿ' ಮೂಲಕ ಚಿತ್ರ ಜಗತ್ತಿಗೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಸಿನಿ ಜೀವನ ಬದಲಾಯಿತು. ಚಲೋ ಸಿನಿಮಾ ಮೂಲಕ ತೆಲುಗು ಪ್ರವೇಶಿಸಿದ ನಟಿ ರಶ್ಮಿಕಾ ಸಾಕಷ್ಟು ಹಿಟ್ ಸಿನಿಮಾ ನೀಡಿದ್ದಾರೆ. 'ಅನಿಮಲ್, ಪುಷ್ಪ, ಪುಷ್ಪ-2, ಚಾವಾ' ಸಿನಿಮಾಗಳು ಹಿಟ್ ಲಿಸ್ಟ್‌ಗೆ ಸೇರಿವೆ, ಇತ್ತೀಚೆಗೆ 'ಕುಬೇರ' ಸಹ ರಿಲೀಸ್ ಆಗಿದ್ದು, ಕಮಾಲ್ ಮಾಡುತ್ತಿದೆ.

ಇದರೊಂದಿಗೆ 'ಥಾಮಾ', 'ದಿ ಗರ್ಲ್‌ ಫ್ರೇಂಡ್' ಸೇರಿದಂತೆ ಒಂದೆರಡು ಸಿನಿಮಾ ತೆರೆಗೆ ಬರಲು ಸಜ್ಜಾಗಿವೆ. ಈ ಮಧ್ಯೆ ನಟಿ ರಶ್ಮಿಕಾರ 'ಮೈಸಾ' ಸಿನಿಮಾ ಸಹ ಅನೌನ್ಸ್ ಆಗಿದೆ. ಅವರ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+