ನಟ ಶಿವರಾಜ್ ಕುಮಾರ್ ಆಪರೇಷನ್ ಬಗ್ಗೆ ಹೇಳಿದ್ದೇನು, ಫ್ಯಾನ್ಸ್‌ಗೆ ಭಾವುಕ ಸಂದೇಶ!
ನಟ ಶಿವರಾಜ್‌ಕುಮಾರ್ ಅವರು ಚಿಕಿತ್ಸೆಗೆಂದು ಇಂದು ಅಮೆರಿಕಗೆ ತೆರಳುತ್ತಿದ್ದು, ಇದೇ ಮೊದಲ ಬಾರಿ ಚಿಕಿತ್ಸೆಯ ಬಗ್ಗೆ ಅವರ ಅಭಿಮಾನಿಗಳಿಗೆ ಬಹಿರಂಗವಾಗಿ ಸಂದೇಶವೊಂದನ್ನು ಕೊಟ್ಟಿದ್ದಾರೆ. ನಟ ಶಿವರಾಜ್‌ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಅವರು ಈಗಾಗಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದೀಗ ಅವರು ಆಪರೇಷನ್ ಮಾಡಿಸಿಕೊಳ್ಳುವುದಕ್ಕೆ ಅಮೆರಿಕಗೆ ಹೋಗುತ್ತಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಆತಂಕಪಡಬೇಡಿ ಎಂದಿದ್ದಾರೆ.
ನಾನು ಜನವರಿ 26ಕ್ಕೆ ಬೆಂಗಳೂರಿಗೆ ವಾಪಸ್ ಬರಲಿದ್ದೇನೆ. ಚಿಕಿತ್ಸೆ ಪಡೆದುಕೊಂಡು ಹಿಂದಿರುಗುತ್ತೇನೆ. ಯಾರೂ ಸಹ ಈ ವಿಚಾರವಾಗಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸ್ವಲ್ಪ ದುಃಖ ಆಗುತ್ತಿದೆ. ಸಣ್ಣ ಆತಂಕ ಇದ್ದೇ ಇದೆ. ಡಾ. ಮುರುಗೇಶ್ವರ್ ಅವರ ನೇತೃತ್ವದಲ್ಲಿ ಆಪರೇಷನ್ ನಡೆಯಲಿದೆ. ನಾನು ಆಪರೇಷನ್ ಮುಗಿದ ಕೂಡಲೇ ಬೆಂಗಳೂರಿಗೆ ಬರ್ತಿನಿ ಅಂತ ಶಿವರಾಜ್ ಕುಮಾರ್ ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ನಟ ಶಿವರಾಜ್ ಕುಮಾರ್ ಅವರಿಗೆ ಡಿಸೆಂಬರ್ 24ರಂದು ಅಮೆರಿಕದಲ್ಲಿ ಆಪರೇಷನ್ ನಡೆಯಲಿದೆ. ಆಪರೇಷನ್ ಆದ ಮೇಲೆ ನಾನು ಹಿಂದಿರುಗಲಿದ್ದೇನೆ. ಆದರೆ, ಈ ಸಂದರ್ಭದಲ್ಲಿ ಎಲ್ಲರನ್ನೂ ನಾನು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ. ಈ ವಿಚಾರವಾಗಿ ನನಗೆ ಸ್ವಲ್ಪ ಸಂಕಟವಾಗಿರುವುದು ನಿಜ ಅಂತಲೂ ಅವರು ಹೇಳಿದ್ದಾರೆ.
ಶಿವಣ್ಣ ಅವರು ಆಪರೇಷನ್‌ನ ಬಗ್ಗೆ ಮಾತನಾಡುತ್ತಿರುವಾಗಲೇ ಭಾವುಕರಾದರು ಅವರ ಕಣ್ಣುಗಳು ತುಂಬಿ ಬಂತು. ಇಂದು ಅಮೆರಿಕಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಫ್ಯಾನ್ಸ್‌ಗೆ ಸಂದೇಶ ಕೊಡುತ್ತಲ್ಲೇ ಅವರು ದುಃಖಿತರಾದರು. ನೋವು ಹಾಗೂ ಸಣ್ಣ ಆತಂಕಗಳ ನಡುವೆಯೂ ಶಿವಣ್ಣ ಅವರ ಫ್ಯಾನ್ಸ್‌ಗಳಿಗೆ ಧೈರ್ಯ ತುಂಬಿದ್ದಾರೆ. ಈ ದೃಶ್ಯಗಳನ್ನು ನೋಡಿ ಶಿವಣ್ಣ ಅವರ ಫ್ಯಾನ್ಸ್ ಸಹ ಭಾವುಕರಾಗಿದ್ದಾರೆ.
ಇನ್ನು ಶಿವಣ್ಣ ಅವರು ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರ ಮುಂಬರಲಿರುವ ಸಿನಿಮಾಗಳಿಗೆ ಒಳ್ಳೆಯದಾಗಲಿ ಅಂತಲೂ ಶುಭಕೋರಿದ್ದಾರೆ. ಈ ಇಬ್ಬರು ನಾಯಕರ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಈ ಮಾತುಗಳು ಕಿಚ್ಚ ಸುದೀಪ್ ಅವರ ಕಣ್ಣಲ್ಲೂ ಕಣ್ಣೀರು ಬರುವಂತೆ ಮಾಡಿದೆ.
ಕನ್ನಡ ಚಿತ್ರರಂಗದಿಂದ ಬೆಂಬಲ: ಇನ್ನು ನಟ ಶಿವರಾಜ್ ಕುಮಾರ್ ಅವರು ಆಪರೇಷನ್‌ಗೆ ತೆರಳುವುದಕ್ಕೂ ಮುಂಚೆ ಕನ್ನಡ ಚಿತ್ರರಂಗದ ಹಲವು ಸಿನಿಮಾ ನಟರು ಭೇಟಿ ಮಾಡಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಸಹ ಭಾವುಕರಾಗಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಬೇಗ ಚಿಕಿತ್ಸೆ ಪಡೆದುಕೊಂಡು ಆಯುಆರೋಗ್ಯವಾಗಿ ಹಿಂದಿರುಗಬೇಕು ಅಂತ ಅವರ ಅಭಿಮಾನಿಗಳು ಸಹ ಪ್ರಾರ್ಥನೆ ಮಾಡುತ್ತಿದ್ದಾರೆ.
ನಟ ಶಿವರಾಜ್‌ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಇರುವುದು ಈಚೆಗೆ ರಿವೀಲ್ ಆಗಿತ್ತು. ಈ ವಿಷಯ ಕನ್ನಡಿಗರಿಗೆ ಶಾಕ್ ಆಗಿತ್ತು. ಇದೀಗ ಶಿವಣ್ಣ ಅವರಿಗೆ ಆಪರೇಷನ್ ಆಗುತ್ತಿದೆ. ಹೀಗಾಗಿ, ಅವರ ಅಭಿಮಾನಿಗಳು ಸಹ ಶಿವಣ್ಣ ಆರೋಗ್ಯವಾಗಿ ಬೇಗ ಬರಲಿ ಅಂತ ಆಶಿಸಿದ್ದಾರೆ.
ಶಿವರಾಜ್‌ಕುಮಾರ್ ಅವರ ಆಪರೇನ್ ದಿನಾಂಕ ಸಮೀಪಿಸುತ್ತಿದ್ದು, ಅವರ ಆಪರೇಷನ್ ಒಳ್ಳೆಯ ರೀತಿಯಲ್ಲಿ ಆಗಲಿ ಎಂದು ಎಲ್ಲರೂ ಬೇಡಿಕೊಳ್ಳುತ್ತಿದ್ದಾರೆ. ಶಿವಣ್ಣ ಅವರು ಆಪರೇಷನ್‌ಗಾಗಿ ಈಗಾಗಲೇ ಅಮೆರಿಕಗೆ ಹೋಗಿದ್ದಾರೆ. ಈ ವಾರದಲ್ಲಿ ಅವರ ಆಪರೇಷನ್ ಆಗಲಿದೆ.












Click it and Unblock the Notifications