Shiva Rajkumar: ನನ್ನ ತಾಯಿ, ತಂಗಿ ಜೊತೆ ಕುಟುಂಬದ ಇವರಿಗೆಲ್ಲಾ ಕ್ಯಾನ್ಸರ್ ಇತ್ತು: ಶಿವಣ್ಣ ಶಾಕಿಂಗ್ ಹೇಳಿಕೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಕ್ಯಾನ್ಸರ್‌ನಿಂದ ಶಸ್ತ್ರಚಿಕಿತ್ಸೆ ಪಡೆದು ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗಿದ್ದಾರೆ. ಅಮೆರಿಕದಲ್ಲಿ ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯ ಬಳಿಕವೂ ಹೆಚ್ಚು ರೆಸ್ಟ್ ಕೂಡ ಪಡೆಯದೇ ಮತ್ತೆ ನಟನೆಗೆ ಮರಳಿದ್ದಾರೆ.
ಕ್ಯಾನ್ಸರ್‌ನಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 62ರ ಹರೆಯದಲ್ಲಿಯೂ ಯುವಕರನ್ನು ನಾಚಿಸುವಂತೆ ಎಲ್ಲಾ ಚಟುವಟಿಕೆಯಿಂದ ಓಡಾಡುತ್ತಿದ್ದಾರೆ. ಕ್ಯಾನ್ಸರ್ ಗೆದ್ದು ಬಂದ ಶಿವಣ್ಣ ಅವರು, ಇದೀಗ ಹಲವಾರ ಸಂದರ್ಶನಗಳಲ್ಲಿ ಕ್ಯಾನ್ಸರ್ ಬಗ್ಗೆ ಹೇಳಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತಮ್ಮ ಕುಟುಂಬದಲ್ಲಿ ಹಲವರಿಗೆ ಕ್ಯಾನ್ಸರ್ ಇದ್ದ ವಿಷಯವನ್ನು ನಟ ಶಿವರಾಜ್ ಕುಮಾರ್ ಅವರು ರಿವೀಲ್ ಮಾಡಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನ ನೀಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ತಮ್ಮ ಮನೆಯಲ್ಲಿ ಯಾರಿಗೆಲ್ಲಾ ಕ್ಯಾನ್ಸರ್ ಇತ್ತು ಎಂಬ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಕ್ಯಾನ್ಸರ್ ಕೂಡ ವಂಶಪಾರಂಪರ್ಯವಾಗಿ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದೇ ಕಾರಣಕ್ಕೆ ಶಿವಣ್ಣ ಅವರಿಗೂ ಬಂದಿರಲಿಕ್ಕೆ ಸಾಕು ಎಂಬ ಅನಿಸಿಕೆ ನಟನ ಈ ಮಾತಿನಿಂದ ಈಗ ಬಯಲಾಗಿದೆ.
ನನ್ನ ತಾಯಿ, ತಂಗಿ ಪೂರ್ಣಿಮಾ, ನನ್ನ ಕಸಿನ್ಸ್ ಎಲ್ಲರಿಗೂ ಕ್ಯಾನ್ಸರ್ ಇತ್ತು, ಅದಕ್ಕಾಗಿಯೇ ನನಗೆ ಕ್ಯಾನ್ಸರ್ ಬಂದಿದೆ ಎಂದು ತಿಳಿದಾಗ ಇನ್ನೇನು ಮಾಡೋಕೆ ಆಗತ್ತೆ ಎಂದುಕೊಂಡುಬಿಟ್ಟಿದ್ದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ನನಗೆ ಮೊದಲು ವಿಷಯ ಗೊತ್ತಾದಾಗ ಪಾಸಿಟಿವ್ ಆಗಿ ಇದ್ದರೂ ಮನಸ್ಸಿನಲ್ಲಿ ಏನೋ ಒಂದು ಆತಂಕ ಇತ್ತು. ನನಗೆ ಏನಾದರೂ ಆಗಿಬಿಟ್ಟರೆ ಎನ್ನುವ ಭಯವೂ ಇತ್ತು. ಆದರೆ, ಕ್ಯಾನ್ಸರ್ ನಮ್ಮ ಮನೆಯಲ್ಲಿ ತುಂಬಾ ಮಂದಿಗೆ ಬಂದಿತ್ತು. ಅದಕ್ಕಾಗಿಯೇ ಇದು ನನಗೆ ಮಾತ್ರ ಯಾಕೆ ಎನ್ನುವ ಪ್ರಶ್ನೆಯೇನೂ ಕಾಡಲಿಲ್ಲ. ನನ್ನ ತಾಯಿ, ತಂಗಿ ಪೂರ್ಣಿಮಾ, ನನ್ನ ಕಸಿನ್ಸ್ ಎಲ್ಲರಿಗೂ ಕ್ಯಾನ್ಸರ್ ಇತ್ತು, ಅದಕ್ಕಾಗಿಯೇ ನನಗೆ ಕ್ಯಾನ್ಸರ್ ಬಂದಿದೆ ಎಂದು ತಿಳಿದಾಗ ಇನ್ನೇನು ಮಾಡೋಕೆ ಆಗತ್ತೆ ಎಂದುಕೊಂಡುಬಿಟ್ಟಿದ್ದೆ ಎಂದು ತಿಳಿಸಿದ್ದಾರೆ.
ಇನ್ನೂ ಪತ್ನಿ ಗೀತಾ ಅವರಿಗೆ ಕ್ಯಾನ್ಸರ್ ಕುರಿತು ಗೊತ್ತಾಗಿದ್ದು ಹೇಗೆ ಎನ್ನುವ ಕುರಿತು ಶಿವಣ್ಣ ಅವರು ಹಂಚಿಕೊಂಡಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಗೊತ್ತಾಗಿದ್ದು ಎಂದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ಶಿವಣ್ಣ, ಮೂತ್ರದಲ್ಲಿ ಕೆಂಪು ಕಲರ್ ಬಂತು. ಹೀಟ್ ಆಗಿರಬಹುದು ಎಂದುಕೊಂಡೆ. ಗೀತಾಗೂ ಅದನ್ನೇ ಹೇಳಿದೆ. ಆಮೇಲೆ ವಾಪಸ್ ಬೆಂಗಳೂರಿಗೆ ಬಂದು ಟೆಸ್ಟ್ ಮಾಡಿದಾಗಲೇ ಕ್ಯಾನ್ಸರ್ ಎಂದು ತಿಳಿಯಿತು.
ನನಗೆ ಕ್ಯಾನ್ಸರ್ ಇರುವ ಬಗ್ಗೆ ಗೀತಾ ಒಬ್ಬರಿಗೇ ತಿಳಿದಿತ್ತು, ಅದನ್ನು ಆಕೆ ನನ್ನ ಬಳಿ ಹೇಳಲೇ ಇಲ್ಲ. ನಾನು ಕೂಡ ಸಿನಿಮಾದಲ್ಲಿ ಪಾಲ್ಗೊಂಡಿದ್ದೆ. ಆಗ ಭೈರತಿ ರಣಗಲ್ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆಗ ಸ್ವಲ್ಪ ಕ್ಯಾನ್ಸರ್ ಬೇರೆ ಕಡೆ ಹರಡಲು ಶುರುವಾದಾಗ, ವಿಷಯ ನನಗೂ ತಿಳಿಯಿತು ಎಂದು ನಟ ಶಿವಣ್ಣ ಅವರು ತಿಳಿಸಿದ್ದಾರೆ.












Click it and Unblock the Notifications