Shilpa Shetty: ಶಿಲ್ಪಾ ಶೆಟ್ಟಿ ಪೋಸ್ಟ್‌ಗೆ ಫುಲ್ ಫಿದಾ ಆದ ಫ್ಯಾನ್ಸ್: ರಶ್ಮಿಕಾಗೆ ಟಾಂಗ್
ಬಾಲಿವುಡ್ ಸ್ಟಾರ್ ಆದರೂ ಕೂಡ ಹುಟ್ಟೂರಿನ ನಂಟು ಮರೆತಿಲ್ಲ. ಹತ್ತಾರು ಭಾಷೆ ಕಲಿತರೂ ತಾಯಿ ನಾಡು, ತಾಯಿ ಭಾಷೆ ಮುಂದೆ ಯಾವುದೂ ಕೂಡ ಲೆಕ್ಕಕ್ಕೇ ಇಲ್ಲ ಅಂದಿದ್ದಾರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ಗ್ಲ್ಯಾಮರ್ ಲೋಕದಲ್ಲಿ ಮಿಂಚಿ ಸಾಕಷ್ಟು ಹೆಸರು ಮಾಡಿದ್ದರೂ ಕೂಡ ತುಳುನಾಡ ಸಂಸ್ಕೃತಿಯನ್ನು ಪಾಲಿಸೋ ಮೂಲಕ ಅಭಿಮಾನಿಗಳ ಹೃದಯದ ಬಾಗಿಲು ತಟ್ಟಿದ್ದಾರೆ ಶಿಲ್ಪಾ ಶೆಟ್ಟಿ.
ಹೌದು... ಬಾಲಿವುಡ್‌ನ ಹೆಸರಾಂತ ನಟಿ ಶಿಲ್ಪಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು 'ಬ್ಯಾಕ್ ಟು ಹೋಮ್, ನಮ್ಮ ತುಳುನಾಡು' ಎಂದು ಬರೆದುಕೊಂಡಿದ್ದಾರೆ. ಇದು ಶಿಲ್ಪಾ ಶೆಟ್ಟಿಗೆ ತಮ್ಮ ತಾಯಿ ನಾಡಿನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಇದನ್ನು ಕಂಡು ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ. ಇದೇ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರನ್ನೂ ಕೆಲ ಅಭಿಮಾನಿಗಳು ನೆನದು ತರಾಟೆ ಕೂಡ ತೆಗೆದುಕೊಂಡಿದ್ದಾರೆ.

ತಾಯಿನಾಡನ್ನು ಹೊತ್ತು ಮೆರೆಸಿದ ಶಿಲ್ಪಾ- ರಶ್ಮಿಕಾಗೆ ಫ್ಯಾನ್ಸ್ ಟಾಂಗ್
ನ್ಯಾಷನಲ್ ಕ್ರಶ್ ಅಂತ ಕರೆಸಿಕೊಳ್ಳುವ ರಶ್ಮಿಕಾ ಅಂತವರ ಮುಂದೆ ಶಿಲ್ಪಾ ಶೆಟ್ಟಿ ತಾಯಿನಾಡನ್ನು ಹೊತ್ತು ಮೆರೆಸಿದ್ದಾರೆ. ದೂರದೂರಿನಲ್ಲಿ ನೆಲೆಸಿದ್ದರೂ ಕೂಡ ತಾಯಿ ನಾಡನ್ನು ಮರೆತಿಲ್ಲ. ತಾಯಿ ನಾಡಿನ ಸಂಸ್ಕಾರವನ್ನು ಮರೆತಿಲ್ಲ. ಕಟೀಲು ದುರ್ಗಾ ಪರಮೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ನಟಿ ಶಿಲ್ಪಾ ಶೆಟ್ಟಿ ಇಡೀ ಕುಟುಂಬಸ್ಥರ ಜೊತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹುಟ್ಟೂರನ್ನೇ ಮರೆತು ಮೆರೆದಾಡಿದ್ದ ಕಿರಿಕ್ ಬ್ಯೂಟಿ ರಶ್ಮಿಕಾ ಈ ಹಿಂದೆ ವೇದಿಕೆ ಮೇಲೆ 'ಐ ಆಮ್ ಫ್ರಂ ಹೈದ್ರಾಬಾದ್' ಎಂದು ಹೇಳಿದ್ದರು. ಇಂತಹ ಮಾತು ಹೇಳೋದಕ್ಕೆ ರಶ್ಮಿಕಾಗೆ ಅದು ಹೇಗೆ ಮನಸ್ಸು ಬಂತೋ ಗೊತ್ತಿಲ್ಲ. ನ್ಯಾಷನ್ ಕ್ರಶ್ ಅನ್ನೋ ಧಿಮಾಕು, ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ ಅನ್ನೋ ಅಹಂಕಾರವೋ ಗೊತ್ತಿಲ್ಲ. ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳಿದಿದ್ದು ಕರ್ನಾಟಕದಲ್ಲಿ, ಬಣ್ಣದ ಲೋಕಕ್ಕೆ ಪರಿಚಯ ಆಗಿದ್ದೂ ಕೂಡ ಕರ್ನಾಟಕದಲ್ಲೇ. ಹೀಗಿದ್ದರೂ ಕೂಡ ಇನ್ಯಾವುದೋ ರಾಜ್ಯದಲ್ಲಿ ನಿಂತುಕೊಂಡು ರಶ್ಮಿಕಾ ನನ್ನೂರು ಹೈದ್ರಾಬಾದ್ ಎಂದು ಹೇಳಿದ್ದಾರೆ. ಇದು ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ.

ಶಿಲ್ಪಾ ಶೆಟ್ಟಿ ಪೋಸ್ಟ್‌ಗೆ ಫ್ಯಾನ್ಸ್ ಫಿದಾ..
ಆದರೆ ಇಂಥವರ ಮಧ್ಯೆ ಶಿಲ್ಪಾ ಶೆಟ್ಟಿ ಅಂತವರು ಹಾಕೋ ಒಂದೊಂದು ಪೋಸ್ಟ್ ಕಡೆ ಕನ್ನಡಿಗರ ಮನಸ್ಸು ಹರಿದಿದೆ. ತಾನೆಷ್ಟೇ ದೊಡ್ಡ ಸ್ಟಾರ್ ಆದರೂ ಕೂಡ ತಾನೆಲ್ಲೇ ಜೀವನ ಕಟ್ಟಿಕೊಂಡರೂ ಸಹ ಹುಟ್ಟೂರಿಗೆ ಬಂದಾಗ ಹುಟ್ಟೂರಿನ ಬಗ್ಗೆ ಹೇಳಿಕೊಂಡು ಹೆಮ್ಮೆ ಪಡೋದಕ್ಕಿಂತ ದೊಡ್ಡದು ಇನ್ನೊಂದು ಇಲ್ಲ.
ಕರಾವಳಿ ಮೂಲದಿಂದ ಹೋದ ಅದೆಷ್ಟೋ ಸ್ಟಾರ್ ನಟ ನಟಿಯರು ಬಾಲಿವುಡ್‌ನಲ್ಲಿ ಭದ್ರ ಬುನಾದಿ ಹಾಕಿಕೊಂಡಿದ್ದಾರೆ. ಐಶ್ವರ್ಯ ರೈ, ಸುನೀಲ್ ಶೆಟ್ಟಿ, ರೋಹಿತ್ ಶೆಟ್ಟಿ, ಶಿಲ್ಪಾ ಶೆಟ್ಟಿ ಇವೆರೆಲ್ಲ ಕರಾವಳಿ ಕುಡಿಗಳು. ಬಾಲಿವುಡ್ ನಲ್ಲಿ ಸೆಟಲ್ ಆಗಿದ್ದರೂ ಕೂಡ ತಮ್ಮ ಭಾಷೆಯನ್ನು ಕಡೆಗಣ್ಣಿನಿಂದ ಕಂಡಿಲ್ಲ.
ಕಳೆದ ದಿನ ನಟಿ ಶಿಲ್ಪಾ ಶೆಟ್ಟಿ ತಮ್ಮ ಕುಟುಂಬ ಸಮೇತ ಕಟೀಲ ದುರ್ಗಾ ಪರಮೇಶ್ವರಿ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಕಟೀಲು ತಾಯಿಯ ಪರಮ ಭಕ್ತೆಯಾಗಿರುವ ಶಿಲ್ಪಾ ಶೆಟ್ಟಿ ತನ್ನ ತಾಯಿ ಸುನಂದ, ತಂಗಿ ಶಮಿತಾ ಹಾಗೂ ತನ್ನಿಬ್ಬರ ಮಕ್ಕಳ ಜೊತೆಗೆ ಬಂದು ತಾಯಿಯ ದರ್ಶನ ಪಡೆದಿದ್ದಾರೆ.
ರಶ್ಮಿಕಾಗೂ ಮುನ್ನ ಶಿಲ್ಪಾ ಸ್ಟಾರ್ ನಟಿ
ರಶ್ಮಿಕಾಗೆ ಸಿನಿಮಾದ ಗಂಧ ಗಾಳಿ ಗೊತ್ತಿಲ್ಲದ ಕಾಲದಲ್ಲಿ ಶಿಲ್ಪಾ ಶೆಟ್ಟಿ ಬಾಲಿವುಡ್ ಅಂಗಳದಲ್ಲಿ ಸ್ಟಾರ್ ನಟಿ ಆಗಿದ್ದರು. ಬಳಕುವ ಬಳ್ಳಿಯಂತಿರುವ ಈ ಬ್ಯೂಟಿಗೆ ಈಗಲೂ ದೊಡ್ಡ ಅಭಿಮಾನಿ ಬಳಗವಿದೆ. ಶಿಲ್ಪಾ ಶೆಟ್ಟಿ ಕುಟುಂಬಸ್ಥರು ಇರೋದು ಕಟೀಲು ಸಮೀಪದಲ್ಲಿ. ಹೀಗಾಗಿ ಪ್ರತೀ ವರ್ಷ ಇಲ್ಲಿಗೆ ಬರುವ ಶಿಲ್ಪಾ ತಾಯಿ ದರ್ಶನ ಪಡೆಯದೇ ಹಿಂದಿರುಗುವುದಿಲ್ಲ.
ತಮಗೆ ಎಂಥಹ ಸಮಸ್ಯೆ ಬಂದರೂ ಎಂತಹ ಕಷ್ಟವೇ ಬಂದರೂ ಕೂಡ ಮೊದಲ ಹರಕೆ ಹೋರುವುದು ಈ ತಾಯಿಗೆ. ಹೀಗಾಗಿ ಇಡೀ ಕುಟುಂಬಸ್ಥರ ಜೊತೆಗೆ ಬಂದು ಶಿಲ್ಪಾ ಕಟೀಲು ಅಮ್ಮನಿಗೆ ಮಲ್ಲಿಗೆ ಹೂವಿನ ಜೊತೆ ಸೀರೆಯನ್ನು ಅರ್ಪಿಸಿದ್ದಾರೆ. ಹೆಮ್ಮೆಯ ವಿಷಯ ಅಂದರೆ ದೇವಸ್ಥಾನಕ್ಕೆ ಹೋದ ಫೋಟೋವನ್ನು ಶಿಲ್ಪಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಬ್ಯಾಕ್ ಟು ಹೋಮ್, ನಮ್ಮ ತುಳುನಾಡು' ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಹುಟ್ಟೂರಿನ ಆಚಾರ ವಿಚಾರ ಮರೆಯದ ಶಿಲ್ಪಾ ಶೆಟ್ಟಿಯ ಸರಳತೆ, ಹುಟ್ಟೂರು ಮೇಲಿನ ಪ್ರೀತಿಗೆ ಕನ್ನಡಿಗರು ಫಿದಾ ಆಗಿದ್ದಾರೆ. ತಾನೆಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ಕೂಡ ಹುಟ್ಟೂರನ್ನು ಮರೆಯದ ನಟಿಗೆ ಸಲಾಮ್ ಅಂತಿದ್ದಾರೆ.












Click it and Unblock the Notifications