Darshan Thoogudeepa: ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಡಿ ಬಾಸ್ ದರ್ಶನ್ ನೆನೆದ ಗಾಯಕಿ

ಶಿವಮೊಗ್ಗ ಅಕ್ಟೋಬರ್ 10: ಶಿವಮೊಗ್ಗದ ಯುವ ದಸರಾ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೋಡಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಕಳೆದ ದಿನ ಸಂಜೆ ನಡೆದ ದಸರಾ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಅನಾವರಣ ಮಾಡಲಾಗಿದೆ.

ಹೌದು... ಕಳೆದ ದಿನ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಯುವ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾಡು ಹಾಗೂ ನೃತ್ಯದೊಂದಿಗೆ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ವೇದಿಕೆ ಮೇಲೆ ದರ್ಶನ್ ಅಭಿನಯಸಿದ ಸಿನಿಮಾಗಳ ಹಾಡುಗಳನ್ನು ಹಾಡಲಾಯಿತು. ಜೊತೆಗೆ ಎಲ್.ಇ.ಡಿ. ಪರದೆ ಮೇಲೆ ದರ್ಶನ್ ಫೋಟೋ ಅನಾವರಣ ಮಾಡಲಾಗಿದೆ. ಇದರಿಂದಾಗಿ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಕುಣಿದು ಕುಪ್ಪಳಿಸಿದ್ದಾರೆ.

Shamitha Malnad remembered actor Darshan at the Yuva Dasara program in Shivamogga

ಇದೇ ವೇಳೆ ಗಾಯಕಿ ಡಾ. ಶಮಿತಾ ಮಲ್ನಾಡ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಡಿ ಬಾಸ್ ದರ್ಶನ್ ಅವರನ್ನು ನೆನೆದರು. ಜೊತೆಗೆ ಅವರ ಹಾಡುಗಳನ್ನು ಅತ್ಯಂತ ಉತ್ಸಾಹದಿಂದ ಹಾಡುವ ಮೂಲಕ ನೆರೆದವರನ್ನು ರಂಜಿಸಿದರು. 'ನಮ್ಮಣ್ಣ ಡಿ ಬಾಸ್...' ಎಂದು ಹೇಳಿ 'ಐತಲಕಡಿ' ಹಾಡು ಆರಂಭಿಸಿದ ಶಮಿತಾ ವೇದಿಕೆ ಮೇಲೆ ಹೆಜ್ಜೆ ಕೂಡ ಹಾಕಿದರು.

ಇನ್ನೂ ವೇದಿಕೆ ಮೇಲೆ ಎಲ್.ಇ.ಡಿ. ಪರದೆಯಲ್ಲಿ ದರ್ಶನ್ ಭಾವಚಿತ್ರ ಬರುತ್ತಿದ್ದಂತೆ ಅಭಿಮಾನಿಗಳು ಶಿಳ್ಳೆ, ಕೇಕೆ, ಚಪ್ಪಾಳೆ ಹೊಡೆದು ಖುಷಿ ವ್ಯಕ್ತಪಡಿಸಿದ್ದಾರೆ. ದರ್ಶನ್ ಹಾಡುಗಳು ಇಡೀ ಕಾರ್ಯಕ್ರಮಕ್ಕೆ ಮೆರಗು ತಂದಿದ್ದು ಕಂಡು ಬಂದಿದೆ.

ದರ್ಶನ್ ವೈಯಕ್ತಿಕ ಜೀವನ ಹೇಗೆ ಇರಲಿ ಆದರೆ ದರ್ಶನ್ ಅಭಿನಯ ಹಾಗೂ ಅವರು ಅಭಿನಯದ ಹಾಡುಗಳಿಗೆ ಮಾತ್ರ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ದರ್ಶನ್ ನಟನೆ, ಡೈಲಾಗ್, ಫೈಟ್ ಎಲ್ಲದು ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಸೂಪರ್ ಡೂಪರ್ ಎಂಬಂತಿವೆ. ಯಾಕೆಂದರೆ ದರ್ಶನ್ ಅಭಿನಯದ ಸಿನಿಮಾಗಳು ಬಿದ್ದಿರುವುದಕ್ಕಿಂತ ಹಿಟ್‌ ಆಗಿರುವುದೇ ಹೆಚ್ಚು.

ಹೀಗಾಗಿ ದರ್ಶನ್ ಯಾವುದೇ ಸಿನಿಮಾ ಮಾಡಿದರೂ ಅದರಲ್ಲಿ ಏನಾದ್ರೂ ಒಂದು ವಿಶೇಷತೆ ಇದ್ದೇ ಇರುತ್ತೆ. ತಮ್ಮ ವಿಭಿನ್ನ ಅಭಿನಯದ ಮೂಲಕ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ಅಭಿನಯದ ಐಟಂಸಾಂಗ್ 'ಬಸಣ್ಣಿ ಬಾ...' ಹಾಡು ಇತ್ತೀಚೆಗಷ್ಟೇ ರಿಲೀಸ್ ಆದಂತ ಜನರ ಬಾಯಲ್ಲಿ ಗುನುಗುಟ್ಟುತ್ತಲೇ ಇರುತ್ತದೆ.

ಇನ್ನೂ 'ಸುಂಟರ ಗಾಳಿ', 'ಐತಲಕಡಿ', 'ಸಕ್ಕು.. ಸಕ್ಕು..', 'ಬಸಣ್ಣಿ ಬಾ..' ಇಂತೆಲ್ಲಾ ಹಾಡುಗಳಿಗಂತೂ ದರ್ಶನ್ ಫ್ಯಾನ್ಸ್‌ ಹುಚ್ಚೆದ್ದು ಕುಣಿಯುತ್ತಾರೆ. ದರ್ಶನ್ ಸಿನಿಮಾ ರಿಲೀಸ್ ಆಗುತ್ತೆ ಅಂದ್ರೆ ಅವರ ಅಭಿಮಾನಿಗಳು ಹಿಂದಿನ ದಿನವೇ ಚಿತ್ರಮಂದಿರಗಳಿಗೆ ಹೋಗಿ ಕಾಯುತ್ತಾರೆ. ಇನ್ನೂ ಅವರ ಡೈಲಾಗ್‌ ಹೊಡೆದರೆ ಖುಷಿಯಿಂದ ಶಿಳ್ಳೆ, ಕೇಕೆ ಹೊಡೆಯೋರೇ ಹೆಚ್ಚು.

ಡೆವಿಲ್ ಸಿನಿಮಾ

ದರ್ಶನ್ ಮುಂದಿನ ಸಿನಿಮಾ 'ಡೆವಿಲ್'. ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಆದರೆ ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ಇನ್ನೂ ಕೂಡ ಖಚಿತವಾಗಿಲ್ಲ. 'ಡೆವಿಲ್' ಸಿನಿಮಾವನ್ನು ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಅಭಿನಯದ 57ನೇ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ 2023ರ ನವೆಂಬರ್2 ರಂದು ಬೆಂಗಳೂರಿನ ದೊಡ್ಡ ಮಹಾಗಣಪತಿ ದೇವಾಲಯದಲ್ಲಿ ನಡೆಯಿತು. ಈ ಸಿನಿಮಾ 2024ರ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+