ಮದುವೆ ಯಾವಾಗ ಆಗಬೇಕು? ಲಕ್ಷ್ಮೀಬಾರಮ್ಮ ಬ್ರೋ ಗೌಡ ಪ್ರಶ್ನೆಗೆ ಪ್ರಿನ್ಸಿಪಾಲ್ ಕೊಟ್ಟ ಉತ್ತರ ಇದು..
ಇಬ್ಬರು ಪ್ರೇಮಿಗಳು ಪರಸ್ಪರ ಮೂರ್ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಒಮ್ಮೆ ಅವರ ಗ್ರ್ಯಾಜುವೇಷನ್ ಪೂರ್ಣಗೊಂಡ ಬಳಿಕ ಮಧ್ಯಾಹ್ನದ ಹೊತ್ತು ಪ್ರಿನ್ಸಿಪಲ್ ಮನೆಗೆ ಹೋಗುತ್ತಾರೆ. ಪ್ರಿನ್ಸಿಪಲ್ ಬಳಿ ಹೋಗಿ, 'ಸರ್ ನಾವಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೇವೆ. ನಾವಿಬ್ಬರು ಯಾವಾಗ ಮದುವೆ ಆಗಬಹುದು. ಮದುವೆ ಆಗಲು ರೈಟ್ ಟೈಮ್ ಯಾವುದು? ಸರಿಯಾದ ವಯಸ್ಸು ಯಾವುದು? ದಯವಿಟ್ಟು ಹೇಳಿ' ಎಂದು ಕೇಳುತ್ತಾರೆ. ಈ ಪ್ರಶ್ನೆಯನ್ನು ಪ್ರಿನ್ಸಿಪಾಲರಿಗೆ ಕೇಳಿದ್ದು ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಶಮಂತ್ ಗೌಡ (ಬ್ರೋ ಗೌಡ) ಹಾಗೂ ವೃತ್ತಿಯಲ್ಲಿ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿರುವ ಮೇಘನಾ ಅವರು. ಹಾಗಾದರೆ ಇವರಿಬ್ಬರಿಗೆ ಪ್ರಿನ್ಸಿಪಾಲ್ ಕೊಟ್ಟ ಉತ್ತರ ಏನು ಗೊತ್ತಾ? ಅದನ್ನು ತಿಳಿಯುತ್ತಾ ಹೋಗೋಣ.
ಲಕ್ಷ್ಮೀ ಬಾರಮ್ಮ ಧಾರವಾಹಿಯ ನಾಯಕ ನಟ ಶಮಂತ್ ಗೌಡ ಅವರು ಇತ್ತೀಚೆಗಷ್ಟೇ ಹಲವರು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಅಂದಹಾಗೆ ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಬ್ರೋ ಗೌಡ ಹಾಗೂ ಮೇಘನಾ ಈ ಹಿಂದೆ ಮದುವೆ ಆಗಲು ಯಾವುದು ಸೂಕ್ತ ಸಮಯ ಎಂದು ಪ್ರಿನ್ಸಿಪಾಲ್ ಬಳಿ ಕೇಳಿದ್ದರಂತೆ.

ಪ್ರಿನ್ಸಿಪಾಲ್ ಮನೆಗೆ ಈ ಜೋಡಿ ಹೋದಾಗ ಸುಡು ಬಿಸಿಲಿನ ಮಧ್ಯಾಹ್ನದ ಹೊತ್ತು. ಆಗ ಪ್ರಿನ್ಸಿಪಾಲ್ ಇವರಿಬ್ಬರನ್ನು ಗಾರ್ಡನ್‌ನಲ್ಲಿ ಕೂಡಿಸಿದರಂತೆ. ನಂತರ ಪ್ರಿನ್ಸಿಪಲ್ ತಮ್ಮ ಪತ್ನಿಗೆ ಕೂಗಿ ಗಾರ್ಡನ್‌ನಲ್ಲಿ ನನ್ನ ಗಾಡಿ ಬೀಗ ಕಳೆದು ಹೋಗಿದೆ, ಒಂದು ನಿಮಿಷ ಟಾರ್ಚ್ ತೆಗೆದುಕೊಂಡು ಬಾ ಹುಡುಕಬೇಕು ಅಂದ್ರಂತೆ.
ಅವರು ಹಾಗೆ ಹೇಳಿದ ತಕ್ಷಣ ಅವರ ಪತ್ನಿ ಟಾರ್ಚ್ ತೆಗೆದುಕೊಂಡು ಗಾರ್ಡನ್‌ಗೆ ಓಡಿ ಬರುತ್ತಾರಂತೆ. ಇಬ್ಬರೂ ಕೂಡ ಟಾರ್ಚ್ ಹಿಡಿದುಕೊಂಡು ಸುಡುಬಿಸಿಲಿನಲ್ಲಿ ಮಧ್ಯಾಹ್ನ ಗಾಡಿ ಕೀಯನ್ನು ಹುಡುಕುತ್ತಾರಂತೆ. ಇದನ್ನೆಲ್ಲಾ ಗಮನಿಸಿದ ಬ್ರೋ ಗೌಡ ಹಾಗೂ ಮೇಘನಾ ಸರ್ ನಮ್ಮ ಪ್ರಶ್ನೆಗೆ ಉತ್ತರ ಸಿಕ್ತು. ನಾವಿನ್ನು ಹೊರಡುತ್ತೇವೆ ಎಂದರಂತೆ.

ಆಗ ಪ್ರಿನ್ಸಿಪಾಲ್ ನಿಮಗೇನು ಅರ್ಥ ಆಯ್ತು ಎಂದು ಪ್ರಶ್ನೆ ಕೇಳಿದಾಗ ಈ ಜೋಡಿ, ಸರ್ ಈ ಸುಡುವ ಬಿಸಿಲಿನಲ್ಲಿ ನಿಮ್ಮ ಪತ್ನಿ ಟಾರ್ಚ್ ತರಲು ಹೇಳ್ತೀರಿ. ಆಗ ನಿಮ್ಮ ಪತ್ನಿ ಒಂದೇ ಒಂದು ಪ್ರಶ್ನೆ ಮಾಡದೆ ಟಾರ್ಚ್ ತಂದು ಕೊಡುತ್ತಾರೆ. ಇಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಎಷ್ಟು ನಂಬಿಕೆ ಇರಬೇಕು ಅಂದರೆ ಅಲ್ಲಿ ಕ್ರಾಸ್ ಕ್ವಷನ್ ಮಾಡಬಾರದು. ಆ ರೀತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗ ಮಾತ್ರ ನಾವು ಮದುವೆ ಆಗಬೇಕು ಅನ್ನೋದು ನಮಗೆ ಅರ್ಥ ಆಯ್ತು ಎಂದಿದರಂತೆ.
ಆಗ ಪ್ರಿನ್ಸಿಪಾಲ್ ಅವರ ಹೆಂಡತಿ ಹೇಳಿದರಂತೆ, ನನ್ನ ಪತಿ ನನಗೆ ಮಧ್ಯಾಹ್ನ ಟಾರ್ಚ್ ತರಲು ಹೇಳಿದ್ದಾರೆ ಅಂದರೆ ಅದರ ಹಿಂದೆ ಒಂದು ಅರ್ಥ ಇದ್ದೇ ಇರುತ್ತದೆ ಅನ್ನೋದು ನನಗೆ ಗೊತ್ತಿತ್ತು. ಹೀಗಾಗಿ ನಾನು ಯಾವುದೇ ಪ್ರಶ್ನೆ ಮಾಡದೇ ಟಾರ್ಚ್ ತೆಗೆದುಕೊಂಡು ಬಂದೆ ಎಂದು ಹೇಳಿದ್ದರಂತೆ. ಇದನ್ನು ಅರ್ಥ ಮಾಡಿಕೊಂಡ ಈ ಜೋಡಿ ತಾವಿಬ್ಬರು ಪರಸ್ಪರ ಅರ್ಥ ಮಾಡಿಕೊಂಡ ನಂತರ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಬಹುಶ: ಈ ಕಥೆಯಿಂದ ಪ್ರೇಮಿಗಳಿಗೆ ಯಾವಾಗ ಮದುವೆ ಆಗಬೇಕು ಅನ್ನೋದು ಅರ್ಥವಾಗುತ್ತದೆ.
ಬಿಗ್‌ಬಾಸ್ ಕನ್ನಡ ಸೀಸನ್ 8ರ ಖ್ಯಾತಿಯ ಶಮಂತ್ ಬ್ರೋ ಗೌಡ ಹಾಗೂ ಮೇಘನಾ ಮದುವೆ ಯಾವಾಗ ಅನ್ನೋದು ಇನ್ನೂ ಕೂಡ ಗೊತ್ತಾಗಿಲ್ಲ. ಆದರೆ ಇದೇ ವರ್ಷ ಈ ಜೋಡಿ ಮದುವೆ ಆಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಶಮಂತ್ ಮದುವೆಯಾಗುತ್ತಿದ್ದು, ಅವರ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.












Click it and Unblock the Notifications