400 ಕೋಟಿ ಕ್ಲಬ್ ಸೇರಿದ ಶಾರುಖ್ ಖಾನ್ ಅಭಿನಯದ ಮತ್ತೊಂದು ಸಿನಿಮಾ!
ನಟ ಶಾರುಖ್ ಖಾನ್ ತಮ್ಮ ಖದರ್ ಮೂಲಕವೇ ಬಾಲಿವುಡ್ ಬಾದ್ ಷಾ ಎಂಬ ಬಿರುದು ಪಡೆದು ಮಿಂಚಿದ್ದವರು. ಆದರೆ 2018ರಲ್ಲಿ ಕನ್ನಡಿಗರ 'ಕೆಜಿಎಫ್' ಸಿನಿಮಾ ಎದುರು ಭಾರಿ ದೊಡ್ಡ ಹಿನ್ನಡೆ ಅನುಭವಿಸಿ, ಸ್ವಲ್ಪ ದಿನ ತೆರೆ ಹಿಂದೆ ಸರಿದರು ನಟ ಶಾರುಖ್ ಖಾನ್. ಆದರೆ 2023ರಲ್ಲಿ ಮತ್ತೆ ಟ್ರ್ಯಾಕ್‌ಗೆ ಮರಳಿದ ಕಿಂಗ್ ಖಾನ್, ಅಬ್ಬರಿಸಿ ಬೊಬ್ಬಿರಿದರು. ಅದರಲ್ಲೂ ಸಾಲು ಸಾಲು ಹಿಟ್ ಸಿನಿಮಾ ನೀಡಿ ಗಲ್ಲಾಪೆಟ್ಟಿಗೆ ಶೇಕ್ ಮಾಡಿದ್ದಾರೆ! ಇದೀಗ ಹೊಸದಾಗಿ ಬಂದ 'ಡಂಕಿ' ಕೂಡ ಇತಿಹಾಸ ನಿರ್ಮಿಸಿದೆ.
ಅಂದಹಾಗೆ ನಟ ಶಾರುಖ್ ಖಾನ್ ತಮ್ಮ ಹಳೇ ಖದರ್ ತೋರಿಸಿದ್ದಾರೆ. ಶಾರುಖ್ ಖಾನ್ ಏನೇ ಮಾಡಿದ್ರು ಸೂಪರ್ ಅಂತಾರೆ ಅವರ ಫ್ಯಾನ್ಸ್. ಶಾರುಖ್‌ಗೆ ಭಾರತದಲ್ಲಿ ಮಾತ್ರವಲ್ಲ, ಅಮೆರಿಕ & ಯುರೋಪ್ ಸೇರಿ ಜಗತ್ತಿನ ಮೂಲೆ ಮೂಲೆಯಲ್ಲೂ ಫ್ಯಾನ್ಸ್ ಇದ್ದಾರೆ. ಇಂತಿಪ್ಪ ಶಾರುಖ್‌ರ ಡಂಕಿ ಸಿನಿಮಾ ದೊಡ್ಡ ಸಾಧನೆ ಮಾಡುತ್ತಿದೆ. ಡಂಕಿ ಕಥೆನ ಹೇಳಲು ಬೆಳ್ಳಿತೆರೆ ಮೇಲೆ ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಶಾರುಖ್ ಖಾನ್ ಗೆದ್ದು ಬೀಗಿದ್ದಾರೆ. ಹಾಗಾದ್ರೆ ಬಿಡುಗಡೆಯಾಗಿ 13 ದಿನದಲ್ಲಿ ಈ ಸಿನಿಮಾ ಗಳಿಸಿದ್ದು ಎಷ್ಟು ನೂರು ಕೋಟಿ ಗೊತ್ತಾ?

ಶಾರುಖ್ ಸಿನಿಮಾ ಗಳಿಸಿದ್ದು 410 ಕೋಟಿ
ಹೌದು, ರಾಜಕುಮಾರ್ ಹಿರಾನಿ ಅವರು ಕಾನೂನು ಬಾಹಿರವಾಗಿ ಬೇರೆ ದೇಶಗಳಿಗೆ ಹೋಗುವ ಜನರ ಕಥೆ ಆಧರಿಸಿ ಡಂಕಿ ಕಥೆ ಹೆಣೆದಿದ್ದರು. ಡಂಕಿ ಸಿನಿಮಾ ಅಭಿಮಾನಿಗಳಿಗೆ ಈಗ ಸಿಕ್ಕಾಪಟ್ಟೆ ಇಷ್ಟವಾಗಿ ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ 410 ಕೋಟಿ ರೂಪಾಯಿ ಹಣ ಬಾಚಿದೆ ಎನ್ನಲಾಗಿದೆ. ಇದರ ಜೊತೆಗೆ ಇನ್ನೂ ಹಲವು ದಿನಗಳ ಕಾಲ ಇದೇ ರೀತಿ ಅಬ್ಬರಿಸುವ ಮುನ್ಸೂಚನೆಯನ್ನು ಕೂಡ ನೀಡುತ್ತಿದೆ. ಹಾಗೇ ಒಂದೇ ವರ್ಷದಲ್ಲಿ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನೀಡಿದ ಖ್ಯಾತಿ ಕೂಡ ಶಾರುಖ್ ಖಾನ್ ಅವರ ಪಾಲಾಗಿದೆ.
ಭಾರತದಲ್ಲೇ 200 ಕೋಟಿ ರೆಕಾರ್ಡ್
'ಡಂಕಿ' ಸಿನಿಮಾ ಬಿಡುಗಡೆಯಾಗಿ 13 ದಿನ ಕಳೆದಿದೆ ಡಿಸೆಂಬರ್ 21 ಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು. ದಿನದಿಂದ ದಿನಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಹೆಚ್ಚಿಸಿಕೊಂಡಿದ್ದು, ಇದೀಗ 410 ಕೋಟಿ ರೂ. ಕ್ಲಬ್ ಸೇರಿದೆ. ಅದ್ರಲ್ಲೂ ಭಾರತ ಒಂದರಲ್ಲಿ ಈ ಸಿನಿಮಾ ಭರ್ಜರಿ 200.62 ಕೋಟಿ ಬಾಚಿದೆ ಎನ್ನಲಾಗಿದೆ. ಸಾವಿರಾರು ಥಿಯೇಟರ್‌ನಲ್ಲಿ ರಿಲೀಸ್ ಆಗಿ ಅಬ್ಬರಿಸಿತ್ತು ಡಂಕಿ. ಹಾಗೆಯೇ ಒಂದೇ ವರ್ಷದಲ್ಲಿ ಶಾರುಖ್ ಖಾನ್ ಅವರ ಸಿನಿಮಾಗಳು ಗಳಿಸಿದ್ದು ಎಷ್ಟು ಕೋಟಿ ಗೊತ್ತೆ?
ಸಾವಿರ ಸಾವಿರ ಕೋಟಿ ಕಲೆಕ್ಷನ್!
ಶಾರುಖ್ ಖಾನ್ ಅವರ ಪಠಾಣ್ & ಜವಾನ್ ಸಿನಿಮಾಗಳ ಮೂಲಕ 2023 ರಲ್ಲಿ ಭರ್ಜರಿ ಹಿಟ್ ಕಂಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಈಗ ಡಂಕಿ ಕೂಡ ಅದೇ ರೀತಿ 1000 ಕೋಟಿ ಕ್ಲಬ್ ಸೇರುವ ಹಾದಿಯಲ್ಲೇ ಇದೆ. ಈಗಿನ ಕ್ರೇಜ್ ನೋಡಿದರೆ ಕೆಲವೇ ದಿನದಲ್ಲಿ ಡಂಕಿ 500 ಕೋಟಿ ಕ್ಲಬ್ ಕೂಡ ದಾಟಲಿದೆ.
ಹೇಗಿತ್ತು ಡಂಕಿ ಸಿನಿಮಾ ಟೀಂ?
ಇನ್ನು 'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಜೊತೆ ತಾಪ್ಸಿ ಪನ್ನು & ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಸೇರಿದಂತೆ ದೊಡ್ಡ ದೊಡ್ಡ ನಟರ ದಂಡೇ ನಟಿಸಿದೆ. ಸಿನಿಮಾನ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿ ಗೌರಿ ಖಾನ್ & ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಹೀಗೆ ಶಾರುಖ್ ಖಾನ್ ಅವರ ಹೊಸ ಸಿನಿಮಾ ಕೂಡ, ಭರ್ಜರಿ ದಾಖಲೆ ಮಾಡಿದಂತಾಗಿದೆ.












Click it and Unblock the Notifications