‘ಚೆನ್ನೈ ಎಕ್ಸ್‌ಪ್ರೆಸ್’ ದಾಖಲೆ ಮುರಿದರು ಸ್ವತಃ ಶಾರುಖ್ ಖಾನ್!
ಶಾರುಖ್ ಖಾನ್ ಅವರಿಗೆ 2023 ಎಂದೂ ಮರೆಯಲಾಗದ ಉಡುಗೊರೆ ನೀಡಿದೆ. ಒಂದೇ ವರ್ಷ 3 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ಕೀರ್ತಿ ಅವರಿಗೆ ಸೇರಿದೆ. ಇದೇ ಸಮಯದಲ್ಲೇ ತಮ್ಮದೇ ಸಿನಿಮಾದ ದಾಖಲೆ ಮುರಿದಿದ್ದಾರೆ, ಶಾರುಖ್ ಅವರು. ಬರೋಬ್ಬರಿ 10 ವರ್ಷದ ಹಿಂದೆ ರಿಲೀಸ್ ಆಗಿದ್ದ 'ಚೆನ್ನೈ ಎಕ್ಸ್‌ಪ್ರೆಸ್' ದಾಖಲೆ ಹಿಂದಿಕ್ಕಿದ್ದಾರೆ. ಹಾಗಾದ್ರೆ ಯಾವುದು ಆ ರೆಕಾರ್ಡ್? ಬನ್ನಿ ತಿಳಿಯೋಣ.
ರಾಜಕುಮಾರ್ ಹಿರಾನಿ ಅವರು ಕಾನೂನು ಬಾಹಿರವಾಗಿ ಬೇರೆ ದೇಶಕ್ಕೆ ಹೊಗುವ ಜನರ ಕಥೆಯ ಆಧರಿಸಿ ಡಂಕಿ ಕಥೆ ಹೆಣೆದಿದ್ದರು. ಹೀಗೆ ಡಂಕಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿ ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ 423 ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿದೆ ಎನ್ನಲಾಗಿದೆ. ಜೊತೆಗೆ ಈಗಲೂ ತನ್ನ ಗೆಲುವಿನ ಓಟ ಮುಂದುವರಿಸಿದೆ. ಈ ಮೂಲಕ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರ ನಿರ್ಮಾಣ ಮಾಡಿದ್ದ ದಾಖಲೆ ಹಿಂದಿಕ್ಕಿದೆ ಸ್ವತಃ ಶಾರುಖ್ ಖಾನ್‌ರ ಸಿನಿಮಾ. 10 ವರ್ಷಗಳ ಹಿಂದೆ ರಿಲೀಸ್ ಆಗಿದ್ದ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾ 423 ಕಲೆಕ್ಷನ್ ಮಾಡಿತ್ತು. ಆದ್ರೆ ಈಗ ಆ ದಾಖಲೆಯನ್ನ ಸ್ವತಃ ಶಾರುಖ್ ಖಾನ್ ಅವರೇ ಹಿಂದಿಕ್ಕಿದ್ದಾರೆ.

ಏನ್ ಹೇಳುತ್ತೆ 10 ವರ್ಷಗಳ ಇತಿಹಾಸ?
'ಡಂಕಿ' ಸಿನಿಮಾ ಬಿಡುಗಡೆಯಾಗಿ 16 ದಿನ ಕಳೆದಿದೆ ಡಿಸೆಂಬರ್ 21ರಂದು ಈ ಚಿತ್ರ ಬಿಡುಗಡೆ ಆಗಿತ್ತು. ದಿನದಿಂದ ದಿನಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಹೆಚ್ಚಿಸಿಕೊಂಡು ಇದೀಗ 423 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗಿದೆ. ಅದರಲ್ಲೂ ಭಾರತ ಒಂದರಲ್ಲೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಸಾವಿರಾರು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಅಬ್ಬರಿಸಿತ್ತು ಡಂಕಿ ಸಿನಿಮಾ. ಶಾರುಖ್ ಖಾನ್ ಹಿಂದಿನ ಪಠಾಣ್ & ಜವಾನ್ ಸಿನಿಮಾಗಳ ಮೂಲಕ 2023ರಲ್ಲಿ ಭರ್ಜರಿ ಹಿಟ್ ಕಂಡಿದ್ದರು. ಈ ಎರಡು ಚಿತ್ರ 1000 ಕೋಟಿ ಕ್ಲಬ್ ಸೇರಿದ್ದವು ಈಗ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾ ದಾಖಲೆಯನ್ನೂ ಹಿಂದಿಕ್ಕಿದೆ ಡಂಕಿ.
ಶಾರುಖ್ ಖಾನ್ ಮತ್ತು ರಾಜ್ ಕುಮಾರ್ ಹಿರಾನಿ, ಈ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಂಕಿ'. ಶಾರುಖ್ ಖಾನ್ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಹೊಸ ಹೊಸ ದಾಖಲೆ ಸೃಷ್ಟಿಸೋಕೆ ಎಂಟ್ರಿ ಕೊಟ್ಟಿದ್ದಾರೆ. '3 ಇಡಿಯಟ್ಸ್' 'ಲಗೆ ರಹೋ ಮುನ್ನಾಭಾಯಿ' ಹಾಗೂ 'ಪಿಕೆ' ಸೇರಿ 'ಸಂಜು' 'ಮುನ್ನಾಭಾಯಿ ಎಂಬಿಬಿಎಸ್' ರೀತಿ ಉತ್ತಮ ಸಿನಿಮಾ ನೀಡಿರುವ ರಾಜ್‌ಕುಮಾರ್ ಹಿರಾನಿ ಇದೇ ಮೊದಲ ಬಾರಿ ಶಾರುಖ್ ಜೊತೆ ಸೇರಿ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಹೀಗೆ ಡಂಕಿ ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿದೆ.












Click it and Unblock the Notifications