ಡಂಕಿ, ಜವಾನ್ & ಪಠಾಣ್ ಮೂಲಕ ಹೊಸ ದಾಖಲೆ ಬರೆದ ಶಾರುಖ್!
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅದ್ಧೂರಿಯಾಗಿ 2023ನ್ನು ಮುಗಿಸಿ, 2024ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಅಭಿಮಾನಿಗಳಿಗೆ ಪ್ರತಿ ಸಿನಿಮಾದಲ್ಲೂ ಅತ್ಯದ್ಭುತವಾದ, ಅದ್ಧೂರಿ ಸಿನಿಮಾ ನೀಡುವ ಈ ನಟ 2023ರಲ್ಲಿ ನಿರ್ಮಾಣ ಮಾಡಿದ ದಾಖಲೆ ಹೇಗೆ ಇತ್ತು ಗೊತ್ತಾ? ಶಾರುಖ್ ಅವರನ್ನು ಫ್ಯಾನ್ಸ್ ಎಷ್ಟು ಇಷ್ಟಪಡ್ತಾರೆ ಅನ್ನೋದಕ್ಕೆ ಸಾಕ್ಷಿ ಇಲ್ಲಿದೆ, ಬನ್ನಿ ತಿಳಿಯೋಣ.
2018ರಲ್ಲಿ 'ಜೀರೊ' ಸಿನಿಮಾ ಹಿನ್ನಡೆ ಬಳಿಕ ಸ್ವಲ್ಪ ದಿನ ತೆರೆ ಹಿಂದೆ ಇದ್ದ ನಟ ಶಾರುಖ್ ಖಾನ್ ಕಳೆದ ವರ್ಷ 'ಪಠಾಣ್' ಆಗಿ ಖಡಕ್ ಕಂಬ್ಯಾಕ್ ಮಾಡಿದ್ರು. ಈ ಸಿನಿಮಾ ಸಾವಿರ ಕೋಟಿ ಕಲೆಕ್ಷನ್ ಗಡಿ ದಾಟಿತ್ತು. ಆ ನಂತರ ಬಂದಿದ್ದ ಜವಾನ್ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಿನಿಮಾ ಕೂಡ 1000 ಕೋಟಿ ರೂ. ಕ್ಲಬ್ ಸೇರಿತ್ತು. ಇನ್ನ 'ಡಂಕಿ' ಚಿತ್ರ ಕೂಡ ಅದೇ ಹಾದಿಯಲ್ಲಿ ಇದ್ದು, ಇನ್ನೇನು 500 ಕೋಟಿ ರೂಪಾಯಿಗೆ ಸಮೀಪ ಇದೆ. ಇಷ್ಟೆಲ್ಲಾ ಸಾಧನೆ & ಸಾಹಸದ ನಡುವೆ ಹೊಸ ಇತಿಹಾಸ ಬರೆದಿದ್ದಾರೆ ನಟ ಶಾರುಖ್.

ಶಾರುಖ್ ಖಾನ್ ಹೊಸ ಇತಿಹಾಸ
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿಮಾನಿಗಳು ಹೆಮ್ಮೆಯಿಂದ 2023ಕ್ಕೆ ಗುಡ್ ಬೈ ಹೇಳಿ, 2024ಕ್ಕೆ ಭರ್ಜರಿಯಾಗಿ ಕಾಲಿಟ್ಟಿದ್ದಾರೆ. ಒಂದೇ ವರ್ಷದಲ್ಲಿ ತಮ್ಮ ನೆಚ್ಚಿನ ಈ ನಟ ಮಾಡಿದ ಸಾಧನೆಗೆ, ಶಾರುಖ್ ಖಾನ್ ಅವರ ಅಭಿಮಾನಿಗಳು ಖುಷ್ ಆಗಿದ್ದಾರೆ. ಬರೀ ಇಷ್ಟೇ ಅಲ್ಲ, ಮತ್ತೊಂದು ಐತಿಹಾಸಿಕ ಸಾಧನೆಗೂ ಶಾರುಖ್ ಪಾತ್ರವಾಗಿದ್ದಾರೆ. ಈ ಮೂಲಕ ಸಿನಿ ರಂಗದಲ್ಲಿ ಹೊಸ ಅಲೆ ಹುಟ್ಟು ಹಾಕಿದ್ದಾರೆ ನಟ ಶಾರುಖ್ ಖಾನ್. ಹಾಗಾದರೆ ಏನದು ದಾಖಲೆ?
8 ಕೋಟಿ ಜನರಿಂದ ವೀಕ್ಷಣೆ!
ಹೌದು, ಡಂಕಿ, ಜವಾನ್ & ಪಠಾಣ್ ಸಿನಿಮಾದ ಮೂಲಕ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಹಿಟ್ ಬಾರಿಸಿದ ಕೀರ್ತಿ ಶಾರುಖ್ ಖಾನ್ ಅವರಿಗೆ ಸಲ್ಲುತ್ತಿದೆ. ಹಾಗೇ ಕಲೆಕ್ಷನ್ ಅಲ್ಲದೆ, ಈ 3 ಚಿತ್ರಗಳನ್ನು ವೀಕ್ಷಿಸಿದ್ದು, ಭರ್ಜರಿ 8 ಕೋಟಿ ಜನರು ಅಂತಾ ಹೇಳಲಾಗಿದೆ. ಹೀಗೆ ಟಿಕೆಟ್ ಮಾರಾಟದ ವಿಚಾರದಲ್ಲೂ ದಾಖಲೆ ಬರೆದಿವೆ ಶಾರುಖ್ ಅವರ ಸಿನಿಮಾಗಳು.
ಎಷ್ಟು ಕೋಟಿ ಟಿಕೆಟ್ ಸೇಲ್?
ಒಂದು ವರ್ಷದಲ್ಲಿಯೇ ಇಷ್ಟು ಮಂದಿ ಸಿನಿಮಾ ವೀಕ್ಷಿಸಿರುವುದು ದಾಖಲೆಯೇ ಸರಿ ಅಂತ ಹೇಳಲಾಗುತ್ತಿದೆ. ಇನ್ನು ಜವಾನ್ ಸಿನಿಮಾದ 3.93 ಕೋಟಿ ಟಿಕೆಟ್ ಮಾರಾಟವಾಗಿದ್ದು, ಪಠಾಣ್ 3.20 ಕೋಟಿ & ಡಂಕಿ ಸಿನಿಮಾದ 1 ಕೋಟಿ ಟಿಕೆಟ್ ಮಾರಾಟ ಆಗಿದೆಯಂತೆ. ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಎಂಬ ಕೀರ್ತಿ ಕೂಡ ಪಡೆದಿದ್ದಾರೆ. ಇದು ಕೂಡ ಶಾರುಖ್ ಅವರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

2023ರಲ್ಲಿ ಜವಾನ್ & ಪಠಾಣ್ ಗಳಿಕೆಯಲ್ಲಿ ದಾಖಲೆ ಬರೆದಿದ್ದು ಡಂಕಿ ಕೂಡ ಹೀಗೆ ಇದೀಗ ಅಬ್ಬರಿಸುತ್ತಿದೆ. 2023ರ ಆರಂಭದಲ್ಲೇ ಪಠಾಣ್ ಬಾಕ್ಸ್ ಆಫೀಸ್ ಉಡೀಸ್ ಮಾಡಿತ್ತು. ಈ ಗೆಲುವಿನ ನಂತರ ಮತ್ತೆ ಮತ್ತೆ ಹಿಟ್ ಕಂಡರು ಶಾರುಖ್. ಭಾರತಾದ್ಯಂತ 545 ಕೋಟಿ ಗಳಿಸಿದ್ದ ಪಠಾಣ್ ವಿಶ್ವಾದ್ಯಂತ ಒಟ್ಟು 1055 ಕೋಟಿ ಗಳಿಕೆ ಕಂಡಿತ್ತು. ಆ ಬಳಿಕ ಜೂನ್ ತಿಂಗಳಲ್ಲಿ ತೆರೆಕಂಡ ಜವಾನ್, ಹಿಂದಿ ಸಿನಿಮಾ ಕ್ಷೇತ್ರದಲ್ಲೇ 643 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಜಗತ್ತಿನಾದ್ಯಂತ ಒಟ್ಟಾರೆ 580 ಕೋಟಿ ಲೂಟಿ ಮಾಡಿ 1000 ಕೋಟಿ ಕ್ಲಬ್‌ಗೆ ಸೇರಿತ್ತು. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿರುವ ಡಂಕಿ ಕೆಲ ದಿನದಲ್ಲೇ 450 ಕೋಟಿ ಕ್ಲಬ್ ಸೇರುವ ಸಮೀಪ ಬಂದಿದೆ.












Click it and Unblock the Notifications