DKD-ಸೀತಾರಾಮ ಧಾರಾವಾಹಿಯಿಂದ ಮೇಘನಾ ದಿಢೀರ್‌ ಔಟ್‌: ನಗಿಸೋ ನಟಿಗೆ ಅಂತದ್ದೇನಾಯ್ತು?

ಬೆಂಗಳೂರು, ಸೆಪ್ಟೆಂಬರ್‌ 03: ನಟಿ ಮೇಘನಾ ಶಂಕರಪ್ಪ ಗಾಯಗೊಂಡಿದ್ದು ಸದ್ಯ ನಟನೆ ಹಾಗೂ ಇತರ ಶೋಗಳ ಶೂಟಿಂಗ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ. ಮೇಘನಾ ಶಂಕರಪ್ಪ ಅಂದ್ರೆ ಯಾರು ಏನು ಅಂತಾ ಕೆಲವರಿಗೆ ಗೊಂದಲವಾಗಬಹುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕನ್ನಡ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರ ನಿರ್ವಹಿಸುತ್ತಿರುವವರೇ ಮೇಘನಾ ಶಂಕರಪ್ಪ.

ತಮ್ಮ ಮಾತು ಹಾಗೂ ನಟನೆಯಿಂದ ಕಿರುತೆರೆಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಮೇಘನಾ ಶಂಕರಪ್ಪ ಇತ್ತೀಚಿಗೆ ಡಾನ್ಸ್‌ ಕರ್ನಾಟಕ ಡಾನ್ಸ್‌ಗೂ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು. ಉಳಿದ ಸ್ಪರ್ಧಿಗಳಿಗೆ ಸಕತ್‌ ಕಾಂಪಿಟೀಷನ್‌ ಕೊಡುತ್ತಿದ್ದ ಮೇಘನಾ ಸದ್ಯ ಶೋನಿಂದ ಹೊರಬಂದಿದ್ದು, ಸದ್ಯ ಎಲ್ಲಾ ಚಿತ್ರೀಕರಣಕ್ಕೂ ಬ್ರೇಕ್‌ ಕೊಟ್ಟಿದ್ದಾರೆ. ಇದಕ್ಕೆ ಗಂಭೀರವಾದ ಕಾರಣ ಕೂಡ ಇದೆ.

Seetha Rama Kannada Serial Actress Meghana Shankarappa Get Out From DKD And Serials

ಮೇಘನಾ ಶಂಕರಪ್ಪ ಸದ್ಯ ಅನಾರೋಗ್ಯಕ್ಕೀಡಾಗಿದ್ದಾರೆ. ಕಣ್ಣಿನ ಮೇಲೆ ಗಾಯ ಆಗಿರುವ ಫೋಟೋ ಪೋಸ್ಟ್‌ ಮಾಡಿಕೊಂಡಿರುವ ನಟಿ ಮೇಘನಾ ಶಂಕಪ್ಪ, ಅನಾರೋಗ್ಯದ ಕಾರಣಕ್ಕೆ ನಾನು ಕೆಲ ದಿನಗಳ ಕಾಲ ಸೀತಾರಾಮ ಧಾರಾವಾಹಿ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಷೋನಲ್ಲಿ ಭಾಗಿಯಾಗೋದಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಏನಾಗಿದೆ, ಯಾವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿಲ್ಲ. ಬೇಗ ಗುಣ ಮುಖರಾಗಿ ಬಂದು ನಿಮ್ಮನೆಲ್ಲ ಮತ್ತೆ ರಂಜಿಸುತ್ತೇನೆ ಎಂದು ಮೇಘನಾ ಪೋಸ್ಟ್‌ ಹಂಚಿಕೊಂಡಿದ್ದು, ಅಭಿಮಾನಿಗಳು ಬೇಗ ಹುಷಾರಾಗಿ ಎಂದು ಹಾರೈಸಿದ್ದಾರೆ.

Seetha Rama Kannada Serial Actress Meghana Shankarappa Get Out From DKD And Serials

ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ ಪ್ರಿಯಾ

ಸೀತಾರಾಮ ಧಾರಾವಾಹಿಯಲ್ಲಿ ರಾಮ, ಸೀತಾ ಹಾಗೂ ಸಿಹಿ ಪಾತ್ರ ಎಷ್ಟು ಮುಖ್ಯವಾಗಿದೆಯೇ, ಎಷ್ಟು ಪ್ರೇಕ್ಷಕರನ್ನು ತಲುಪಿದೆಯೋ ಪ್ರಿಯಾ ಹಾಗೂ ಅಶೋಕ ಪಾತ್ರ ಕೂಡ ಅಷ್ಟೇ ಜನಪ್ರಿಯವಾಗಿದೆ. ಸದ್ಯ ಧಾರಾವಾಹಿಯಲ್ಲಿ ಅಶೋಕ್‌ನನ್ನು ಮದುವೆಯಾಗಿ ನೆಮ್ಮದಿಯಾಗಿ ಅಮ್ಮನಾಗಲು ಬಯಸುತ್ತಿರುವ ಪ್ರಿಯಾ ಬಾಳಲ್ಲಿ ಬಿರುಗಾಳಿ ಎದಿದ್ದೆ.

ಪ್ರಿಯಾಳಿಗೆ ಕ್ಯಾನ್ಸರ್‌ ಇರುವಂತೆ ತೋರಿಸಲಾಗಿದ್ದು, ಈ ಸತ್ಯ ಸದ್ಯ ಗೊತ್ತಿರುವುದು ಪ್ರಿಯಾ ಗಂಡ ಅಶೋಕ್ ಈ ಸತ್ಯವನ್ನು ಹೇಳಲೂ ಅಗದೇ, ಮುಚ್ಚಿಡಲೂ ಆಗದೇ ಒದ್ದಾಡುತ್ತಿದ್ದಾನೆ ಎನ್ನುವಂತೆ ಕಥೆ ಮುಂದುವರಿಸಲಾಗುತ್ತಿದೆ. ಅತ್ತ ರಾಮ್‌ ತಾಯಿ ಸಾವಿನ ಸತ್ಯ, ಜೊತೆಗೆ ಸಹಿ ಹುಟ್ಟಿನ ಸತ್ಯ, ಇತ್ತ ಪ್ರಿಯಾ ಆರೋಗ್ಯದ ಸತ್ಯ ತುಂಬಿರುವ ಸೀತಾರಾಮ ಧಾರಾವಾಹಿ ಮುಂದೆನಾಗಲಿದೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+