Oscar Awards 2025: ಅತ್ಯುತ್ತಮ ನಟ ಅಡ್ರಿಯನ್ ಬ್ರಾಡಿ & ಅತ್ಯುತ್ತಮ ನಿರ್ದೇಶಕ ಸೀನ್ ಬೇಕರ್!

ಜಾಗತಿಕ ಮಟ್ಟದ ಅತ್ಯುನ್ನತ ಮತ್ತು ಅತ್ಯಂತ ಶ್ರೇಷ್ಠ ಪ್ರಶಸ್ತಿ ಎಂದು ಕರೆಯಲಾಗುವ 'ಆಸ್ಕರ್ ಅವಾರ್ಡ್' ಘೋಷಣೆ ಆಗಿದೆ. ಭಾರಿ ದೊಡ್ಡ ಪೈಪೋಟಿ ನಡುವೆ ಆರಂಭ ಆಗಿದ್ದ ಆಸ್ಕರ್ ಅವಾರ್ಡ್ ರೇಸ್‌ನಲ್ಲಿ ಅಡ್ರಿಯನ್ ಬ್ರಾಡಿ & ಸೀನ್ ಬೇಕರ್ ಗೆದ್ದು ಬೀಗಿದ್ದಾರೆ. ಇವರ ಜೊತೆಗೇ ಅತ್ಯುತ್ತಮ ನಟಿಯಾಗಿ ಮೈಕಿ ಮ್ಯಾಡಿಸನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬಹು ನಿರೀಕ್ಷಿತ ಪ್ರಶಸ್ತಿಯ ಅಂತಿಮ ಘೋಷಣೆ ಹೊರಬಿದ್ದಿದೆ.

ಅತ್ಯುತ್ತಮ ನಟ ಪ್ರಶಸ್ತಿ ರೇಸ್‌ನಲ್ಲಿ ಆಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್), ತಿಮೋತಿ ಚಲಮೆಟ್ (ಎ ಕಂಪ್ಲೀಟ್ ಅನ್‌ನೋನ್‌) & ಕೋಲ್ಮನ್ ಡೊಮಿಂಗೊ (ಸಿಂಗ್ ಸಿಂಗ್), ರಾಲ್ಫ್ ಫಿಯೆನ್ನೆಸ್ (ಕಾನ್‌ಕ್ಲೇವ್), ಸೆಬಾಸ್ಟಿಯನ್ ಸ್ಟಾನ್ (ದಿ ಅಪ್ರೆಂಟಿಸ್) ಇದ್ದರು. ಕೊನೆಗೆ ದಿ ಬ್ರೂಟಲಿಸ್ಟ್‌ನ ನಟನೆಗಾಗಿ ಆಡ್ರಿಯನ್ ಬ್ರಾಡಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಮತ್ತೊಂದು ಕಡೆಯಲ್ಲಿ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ, ಸೀನ್ ಬೇಕರ್ (ಅನೋರಾ), ಬ್ರಾಡಿ ಕಾರ್ಬೆಟ್ (ದಿ ಬ್ರೂಟಲಿಸ್ಟ್), ಲುಕಾ ಗ್ವಾಡಾಗ್ನಿನೊ (ಎ ಕಂಪ್ಲೀಟ್ ಅನ್‌ನೋನ್), ಜಾಕ್ವೆಸ್ ಆಡಿಯಾರ್ಡ್ (ಎಮಿಲಿಯಾ ಪೆರೆಜ್) ಸೇರಿದಂತೆ ಡೆನಿಸ್ ವಿಲ್ಲೆನ್ಯೂವ್ (ಡ್ಯೂನ್:ಪಾರ್ಟ್ 2) ಇದ್ದರು. ಈ ರೇಸ್‌ನಲ್ಲಿ ಸೀನ್ ಬೇಕರ್ ಗೆದ್ದು ಬೀಗಿದ್ದು, ಅತ್ಯುತ್ತಮ ನಿರ್ದೇಶಕರಾಗಿದ್ದಾರೆ.

Sean Baker Wins Best Director And Adrien Brody Best Actor at Oscars 2025

ಅತ್ಯುತ್ತಮ ನಟಿಯಾಗಿ ಮೈಕಿ ಮ್ಯಾಡಿಸನ್!

2025ರ ಆಸ್ಕರ್ ಅವಾರ್ಡ್ ಅಖಾಡದಲ್ಲಿ ದೊಡ್ಡ ಸದ್ದು ಮಾಡಿದ್ದು 'ಅನೋರಾ' ಸಿನಿಮಾ. ಇದೇ ಸಿನಿಮಾದ ನಟನೆಗಾಗಿ ಮೈಕಿ ಮ್ಯಾಡಿಸನ್ ಅವರು ಅತ್ಯುತ್ತಮ ನಟಿಯಾಗಿ ಆಯ್ಕೆಯೂ ಆಗಿದ್ದಾರೆ. ಮತ್ತೊಂದು ಕಡೆ ಈ ಬಾರಿ ಬೆಸ್ಟ್ ಒರಿಜಿನಲ್ ಸ್ಕೋರ್ ವಿಭಾಗದಲ್ಲಿ ದಿ ಬ್ರುಟಲಿಸ್ಟ್ ಸಿನಿಮಾ ಗೆದ್ದಿದ್ದು, ಡೆನಿಯಲ್ ಬ್ಲೂಮ್‌ಬರ್ಗ್ ಸಂಗೀತ ಸಂಯೋಜನೆ ಮಾಡಿದ್ದರು. ಹಾಗೇ, ಈ ಸಿನಿಮಾದ ನಟನೆಗಾಗಿ ಆಡ್ರಿಯನ್ ಬ್ರಾಡಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಹಾಗಾದರೆ ಅತ್ಯುತ್ತಮ ಸಿನಿಮಾ ಯಾವುದು?

'ಅನೋರಾ' ಅಬ್ಬರ ಬಲು ಜೋರು!

2025ರ ಆಸ್ಕರ್ ಪ್ರಶಸ್ತಿ ಲಿಸ್ಟ್‌ನಲ್ಲಿ ಒಟ್ಟು 10 ಸಿನಿಮಾಗಳು ಅಬ್ಬರಿಸಿದ್ದವು. 'ಅನೋರಾ' ಸೇರಿ ದಿ ಬ್ರುಟಲಿಸ್ಟ್, ಎ ಕಂಪ್ಲೀಟ್ ಅನ್‌ನೋನ್, ಕಾನ್‌ಕ್ಲೇವ್, ಡ್ಯೂನ್: ಪಾರ್ಟ್-2, ಎಮಿಲಿಯಾ ಪರೇಜ್, ಐಮ್ ಸ್ಟಿಲ್ ಹೀಯರ್, ನಿಕೆಲ್ ಬಾಯ್ಸ್, ದಿ ಸಬ್‌ಸ್ಟೆನ್ಸ್, ವಿಕೆಡ್ ಸಿನಿಮಾಗಳು ಈ ಬಾರಿ ಆಸ್ಕರ್ ರೇಸ್‌ನಲ್ಲಿ ಗಮನ ಸೆಳೆದಿದ್ದವು. ಆದರೆ ಅಂತಿಮವಾಗಿ ಈ ಪ್ರಶಸ್ತಿ 'ಅನೋರಾ' ಸಿನಿಮಾ ಪಾಲಾಗಿದ್ದು, ಅನೋರಾ 2025ರ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಅತ್ಯುತ್ತಮ ಸಿನಿಮಾ ಎಂಬ ಪಟ್ಟ ಗಿಟ್ಟಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+