Sara Ali Khan: ದೇವಾಲಯದ ಬಳಿ ಆಹಾರ ಹಂಚಿದ ನಟಿ ಸಾರಾ ಅಲಿಖಾನ್; ಫೋಟೋ ತೆಗೆದವರ ಮೇಲೆ ಗರಂ

ಮುಂಬೈ, ಮಾರ್ಚ್ 31: ಬಾಲಿವುಡ್ ಸ್ಟಾರ್ ಕಿಡ್‌ಗಳಲ್ಲಿ ನಟಿ ಸಾರಾ ಅಲಿ ಖಾನ್ ಕೂಡ ಒಬ್ಬರು. ಅವರ ತಂದೆ ಸೈಫ್ ಅಲಿ ಖಾನ್ ಫೇಮಸ್ ನಟ. ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ, ಹೆಚ್ಚಾಗಿ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಹಲವು ಬಾರಿ ಅವರ ಫೋಟೋ, ವಿಡಿಯೋಗಳು ವೈರಲ್ ಆಗಿವೆ.

ಈಗ ಮತ್ತೊಂದು ಘಟನೆಯಿಂದ ನಟಿ ಸಾರಾ ಅಲಿ ಖಾನ್ ಸುದ್ದಿಯಲ್ಲಿದ್ದಾರೆ. ಒಂದು ಚಿಕ್ಕ ಸಹಾಯ ಮಾಡಿ ಅದನ್ನೇ ದೊಡ್ಡದಾಗಿ ತೋರಿಸಿಕೊಳ್ಳುವ ಸ್ಟಾರ್‌ಗಳ ಮಧ್ಯದಲ್ಲಿ ಬಡವರಿಗೆ ಸಹಾಯ ಮಾಡಿದ ಸಾರಾ ಅಲಿ ಖಾನ್ ಅವರು ಫೋಟೋ, ವಿಡಿಯೋ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ.

Sara Ali Khan distributes food urges paps not to record Watch video

ಮರ್ಡರ್ ಮುಬಾರಕ್ ಮತ್ತು ಏ ವತನ್ ಮೇರೆ ವತನ್‌ ಸಿನಿಮಾಗಳ ಮೂಲಕ ಈ ತಿಂಗಳು ಎರಡು ಬ್ಯಾಕ್ ಟು ಬ್ಯಾಕ್ ಚಿತ್ರಗಳು ಬಿಡಿಗಡೆಯಾಗಿರುವಾಗಲೇ ಸಾರಾ ಅಲಿ ಖಾನ್ ಶನಿವಾರ ಜುಹುದಲ್ಲಿರುವ ಶನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಅಲ್ಲಿಯೇ ಆವರಣದ ಹೊರಗೆ ಕುಳಿತಿದ್ದ ನಿರ್ಗತಿಕರಿಗೆ ಸಿಹಿತಿಂಡಿ ಪ್ಯಾಕೆಟ್‌ಗಳನ್ನು ಹಂಚಿದ್ದಾರೆ.

ಆರೆಂಜ್ ಕಲರ್ ಟಾಪ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದ ಸಾರಾ ಅಲಿ ಖಾನ್, ದೇವಸ್ಥಾನದಿಂದ ಹೊರಗೆ ಬಂದು ದೇವಸ್ಥಾನದ ಆವರಣದ ಹೊರಗೆ ಕುಳಿತಿದ್ದ ನಿರ್ಗತಿಕರಿಗೆ ಸಿಹಿ ಪ್ಯಾಕೆಟ್‌ಗಳನ್ನು ಹಂಚುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಇದ್ದವರು ಆಕೆಯನ್ನು ಗುರುತು ಹಚ್ಚಿದ್ದಾರೆ. ಬಾಲಿವುಡ್ ಸ್ಟಾರ್‌ಗಳ ಬೆನ್ನು ಹತ್ತುವ ಪಾಪಾರಾಜಿಗಳು ಅವರ ಹಿಂದೆ ಬಿದ್ದಿದ್ದಾರೆ.

ಆಹಾರ ಪೊಟ್ಟಣಗಳನ್ನು ಹಂಚುವ ಫೋಟೋ ಮತ್ತು ವಿಡಿಯೋಗಳನ್ನು ಮಾಡದಂತೆ ಸಾರಾ ಅಲಿ ಖಾನ್ ಪಾಪರಾಜಿಗಳಿಗೆ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಅವರು ಮಾತು ಕೇಳದ ಕಾರಣ ಅವರ ಮೇಲೆ ಕೋಪಗೊಂಡು ಕಾರಿನ ಕಡೆಗೆ ನಡೆದಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ

ಹಲವು ಪಾಪರಾಜಿಗಳು ಮತ್ತು ಮಾಧ್ಯಮಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಅಲಿ ಖಾನ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಾರಾ ಅವರ ರೀತಿಯ ಗೆಸ್ಚರ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ಆಕೆ ತುಂಬಾ ಕರುಣಾಮಯಿ ಎಂದು ಹೇಳಿದ್ದಾರೆ.

ವಿಡಿಯೋಗೆ ಪ್ರತಿಕ್ರಿಯಿಸಿ ಮತ್ತೊಬ್ಬ ಅಭಿಮಾನಿ, " ಇಂತಹ ಕೆಲಸ ಮಾಡುವಾಗ ರೆಕಾರ್ಡಿಂಗ್ ಮಾಡದಂತೆ ಇರಲು ಪಾಪರಾಜಿಗಳಿಗೆ ಹೇಳುವುದು ನಿಜಕ್ಕೂ ಒಳ್ಳೆಯ ಕ್ರಮ. ಜೊತೆಗೆ ಸಾರಾ ಆ ಮಹಿಳೆಯನ್ನು ಆ ರೀತಿಯಲ್ಲಿ ಮಗುವನ್ನು ಎಬ್ಬಿಸದಂತೆ ತಡೆದ ರೀತಿ ಇಷ್ಟವಾಯಿತು. ಇದು ಒಳ್ಳೆ ಗೆಸ್ಚರ್" ಎಂದಿದ್ದಾರೆ.

ಸಾರಾ ಅಲಿ ಖಾನ್ ಸಿನಿಮಾಗಳು

ಸಾರಾ ಅಲಿ ಖಾನ್ ಬಾಲಿವುಡ್‌ನಲ್ಲಿ ಅಂತಹ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳದೇ ಹೊದರೂ ಕೂಡ ಅವರಿಗೆ ಆಫರ್‌ಗಳ ಕೊರತೆಯಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಮರ್ಡರ್ ಮುಬಾರಕ್ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ಏ ವತನ್ ಮೇರೆ ವತನ್‌ ಬಿಡುಗಡೆಯಾಗಿವೆ. ಮರ್ಡರ್ ಮುಬಾರಕ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದರೇ, ಏ ವತನ್ ಮೇರೆ ವತನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಸಾರಾ ಅಲಿ ಖಾನ್ ಮುಂದೆ ಅನುರಾಗ್ ಬಸು ಅವರ ಮೆಟ್ರೋ ಇನ್ ಡಿನೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಟ್ರೋ ಇನ್ ಡಿನೋದಲ್ಲಿ ಅನುಪಮ್ ಖೇರ್, ನೀನಾ ಗುಪ್ತಾ, ಪಂಕಜ್ ತ್ರಿಪಾಠಿ, ಕೊಂಕಣ ಸೇನ್ ಶರ್ಮಾ, ಅಲಿ ಫಜಲ್ ಮತ್ತು ಫಾತಿಮಾ ಸನಾ ಶೇಖ್ ಸೇರಿ ದೊಡ್ಡ ತಾರಾಗಣವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+