ದಳಪತಿ ವಿಜಯ್ ಪತ್ನಿ ಸಂಗೀತಾ ಅವರ ಒಟ್ಟು ಆಸ್ತಿ: ಪತಿಗಿಂತಲೂ ಶ್ರೀಮಂತರೇ? ಇಲ್ಲಿದೆ ಅಚ್ಚರಿ ಮಾಹಿತಿ

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಮತ್ತು 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಸ್ಥಾಪಕ ದಳಪತಿ ವಿಜಯ್ ಸದ್ಯ 2026ರ ವಿಧಾನಸಭಾ ಚುನಾವಣೆಯ ಭರ್ಜರಿ ಯಶಸ್ಸಿನ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಆದರೆ ಈ ನಡುವೆ ಅವರ ಪತ್ನಿ ಸಂಗೀತಾ ಅವರ ಆಸ್ತಿ ವಿವರಗಳು ಎಲ್ಲರ ಗಮನ ಸೆಳೆಯುತ್ತಿವೆ.

ಸಂಗೀತಾ ಅವರ ಆಸ್ತಿಯ ಹಿನ್ನೆಲೆ

ಲಂಡನ್ ಮೂಲದ ಶ್ರೀಲಂಕಾ ತಮಿಳು ಕೈಗಾರಿಕೋದ್ಯಮಿ ಸೊರ್ನಲಿಂಗಂ ಅವರ ಪುತ್ರಿಯಾಗಿರುವ ಸಂಗೀತಾ ಅವರು ತಮ್ಮ ಕುಟುಂಬದ ಬೃಹತ್ ವ್ಯವಹಾರ ಸಾಮ್ರಾಜ್ಯದಿಂದ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆಸ್ತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಅವರ ಕುಟುಂಬವು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಲಂಡನ್‌ನಲ್ಲಿ ಪ್ರಬಲ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ಯುಕೆ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಇವರ ಹೂಡಿಕೆಗಳು ಹರಡಿಕೊಂಡಿವೆ.

Sangeetha Vijay

ಅಭಿಮಾನಿಯಿಂದ ಅರ್ಧಾಂಗಿಯಾದ ಕಥೆ

ಸಂಗೀತಾ ಅವರು 1996ರಲ್ಲಿ ವಿಜಯ್ ಅವರ 'ಪೂವೆ ಉನಕ್ಕಾಗ' ಚಿತ್ರವನ್ನು ನೋಡಿ ದಳಪತಿ ಅವರ ದೊಡ್ಡ ಅಭಿಮಾನಿಯಾದರು. ನಂತರ ಚೆನ್ನೈನಲ್ಲಿ ವಿಜಯ್ ಅವರನ್ನು ಭೇಟಿಯಾದಾಗ ಇಬ್ಬರ ನಡುವೆ ಶುರುವಾದ ಸ್ನೇಹ ಪ್ರೀತಿಯಾಗಿ ಬದಲಾಯಿತು. ಆಗಸ್ಟ್ 25, 1999ರಂದು ಈ ಜೋಡಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಪ್ರಸ್ತುತ ಅವರು ವಿಜಯ್ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

ದಳಪತಿ ವಿಜಯ್ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ಬೆನ್ನಲ್ಲೆ 'ಜನ ನಾಯಗನ್' ನಟಿ ಪೂಜಾ ಹೆಗ್ಡೆ ವಿಶೇಷ ವಿಡಿಯೋ ವೈರಲ್‌
ದಳಪತಿ ವಿಜಯ್ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ಬೆನ್ನಲ್ಲೆ 'ಜನ ನಾಯಗನ್' ನಟಿ ಪೂಜಾ ಹೆಗ್ಡೆ ವಿಶೇಷ ವಿಡಿಯೋ ವೈರಲ್‌

ಚುನಾವಣಾ ಅಫಿಡವಿಟ್‌ನಲ್ಲಿನ ಆಸ್ತಿ ವಿವರಗಳು

ವಿಜಯ್ ಅವರು ಸಲ್ಲಿಸಿರುವ ಚುನಾವಣಾ ಅಫಿಡವಿಟ್‌ನಲ್ಲಿ ಸಂಗೀತಾ ಅವರ ಹೆಸರಿನಲ್ಲಿರುವ ಸ್ವತ್ತುಗಳ ಮಾಹಿತಿ ಹಂಚಿಕೊಂಡಿದ್ದಾರೆ. ಅದರಂತೆ ₹1 ಲಕ್ಷ ನಗದು ಹಾಗೂ ಬ್ಯಾಂಕ್ ಖಾತೆಗಳಲ್ಲಿ ಸುಮಾರು ₹10.47 ಕೋಟಿಗೂ ಅಧಿಕ ಹಣವಿದೆ. ₹4 ಕೋಟಿ ಮೌಲ್ಯದ 3,132 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು ₹1 ಕೋಟಿ ಮೌಲ್ಯದ 135 ಕ್ಯಾರೆಟ್ ವಜ್ರಗಳನ್ನು ಹೊಂದಿದ್ದಾರೆ. ಸ್ವತಃ ವಿಜಯ್ ಅವರೇ ಪತ್ನಿ ಸಂಗೀತಾ ಅವರಿಗೆ ₹12.6 ಕೋಟಿ ಸಾಲ ನೀಡಿದ್ದಾರೆ ಎಂದೂ ತಿಳಿಸಿದ್ದಾರೆ.

ಅಫಿಡವಿಟ್ ಪ್ರಕಾರ ಸಂಗೀತಾ ಅವರ ಆಸ್ತಿಯ ಒಟ್ಟು ಮೌಲ್ಯ ಸುಮಾರು ₹15-16 ಕೋಟಿ ಎಂದು ತೋರಿಸಲಾಗಿದೆ. ಆದರೆ, ಹೊರಗಿನ ಅಂದಾಜುಗಳು ಮತ್ತು ವಿವಿಧ ವರದಿಗಳು ಅವರ ಒಟ್ಟು ಆಸ್ತಿಯು ₹400 ಕೋಟಿಗೂ ಅಧಿಕ ಎಂದು ಹೇಳುತ್ತಿವೆ. ಇಷ್ಟು ದೊಡ್ಡ ಮೊತ್ತದ ಆಸ್ತಿ ಮತ್ತು ಸ್ಟಾರ್ ಪತ್ನಿಯಾಗಿದ್ದರೂ ಸಹ ಸಂಗೀತಾ ಅವರು ಸಾರ್ವಜನಿಕ ಜೀವನದಿಂದ ಮತ್ತು ಪ್ರಚಾರದಿಂದ ಯಾವಾಗಲೂ ದೂರ ಉಳಿಯಲು ಬಯಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+