ಶಿವರಾಜ್‌ಕುಮಾರ್ & ರಜನಿಕಾಂತ್ ಅಳಿಯನ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್!
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಇತ್ತೀಚೆಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್‌ರ ಸಿನಿಮಾದಲ್ಲಿ ನಟಿಸಿದ್ದರು. 'ಜೈಲರ್' ಸಿನಿಮಾದಲ್ಲಿ, ನಟ ಶಿವಣ್ಣ ಮಿಂಚು ಹರಿಸಿದ್ದರು. ಇದೀಗ ಮಾವನ ನಂತರ, ಅಳಿಯನ ಸಿನಿಮಾದಲ್ಲೂ ಮಿಂಚಲು ನಟ ಶಿವಣ್ಣ ಸಿದ್ಧವಾಗಿ ನಿಂತಿದ್ದಾರೆ. ಶಿವಣ್ಣ & ತಮಿಳು ನಟ ಧನುಷ್ ಕಾಂಬಿನೇಷನ್ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಹೊಸ ವರ್ಷಕ್ಕೆ ಈ ಮೂಲಕ ಸಿಹಿ ಸುದ್ದಿ ಸಿಕ್ಕಿದೆ.
ಅಂದಹಾಗೆ ತಮಿಳು ನಟ ಧನುಷ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಫಸ್ಟ್ ಲುಕ್ & ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ರಜನಿಕಾಂತ್ ಜೈಲರ್ ಸಿನಿಮಾದಲ್ಲಿ 'ನರಸಿಂಹ' ಆಗಿ, ದರ್ಶನ ಕೊಟ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದ ಟಗರು ಶಿವಣ್ಣ ಹೊಸ ಅವತಾರ ನೋಡಲು ಫ್ಯಾನ್ಸ್ ಈಗ ಕಾತುರರಾಗಿದ್ದಾರೆ. ಇತ್ತ ಧನುಷ್ 49ನೆ ಚಿತ್ರ ಇದಾಗಿದ್ದು, ಹೀಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಸದ್ಯ ಕ್ಯಾಪ್ಟನ್ ಮಿಲ್ಲರ್ ಬಿಡುಗಡೆಗೆ ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಈಗ ಚಿತ್ರ ತಂಡ ಗುಡ್ ನ್ಯೂಸ್ ಕೊಟ್ಟಿದೆ.

ಸಂಕ್ರಾಂತಿ ಹಬ್ಬಕ್ಕೆ ಶುರು ಮಿಲ್ಲರ್ ಹವಾ
ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿ ಹಬ್ಬದ ಸ್ಪೆಷಲ್ ಆಗಿ ಧನುಷ್ & ಶಿವಣ್ಣ ಸಿನಿಮಾ ತೆರೆಗೆ ಬರಲಿದೆ. 2024 ಜನವರಿ 12 ರಂದು 'ಕ್ಯಾಪ್ಟನ್ ಮಿಲ್ಲರ್' ಜಗತ್ತಿನ ವಿವಿಧೆಡೆ ತೆರೆ ಕಾಣಲಿದ್ದು. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ನಟ ಧನುಷ್ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದು ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಅಂತಾ ಹೇಳಲಾಗಿದೆ. ಹೀಗಾಗಿ ಕುತೂಹಲ ಕೂಡ ಡಬಲ್ ಆಗಿದೆ.
ಸಿಕ್ಕಾಪಟ್ಟೆ ಸ್ಪೆಷಲ್ ಆಗಿದೆ ಸಿನಿಮಾ
ಇನ್ನು ಈಗಾಗಲೇ ರಿಲೀಸ್ ಆಗಿರುವ ಟೀಸರ್, ಸಿನಿ ಪ್ರಿಯರಿಗು ಕಿಕ್ ಕೊಟ್ಟಿದೆ. ಧನುಷ್ ಉದ್ದ ಕೂದಲು & ಗಡ್ಡ ಮೀಸೆ ಬಿಟ್ಟು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೆ ಶಿವರಾಜ್‌ಕುಮಾರ್ ಕೂಡ ಕುದುರೆ ಏರಿ ಬರುವ ಸನ್ನಿವೇಶ ಅವರ ಫ್ಯಾನ್ಸ್ ಥ್ರಿಲ್ ಹೆಚ್ಚಿಸಿದೆ. ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಜಿ.ವಿ. ಪ್ರಕಾಶ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ಹಾಗೂ ಟ್ಯೂನ್‌ಗಳನ್ನ ಕಂಪೋಸ್ ಮಾಡಿದ್ದಾರೆ.

'ಭೈರತಿ ರಣಗಲ್' ಯಾವಾಗ ರಿಲೀಸ್?
ಹ್ಯಾಟ್ರಿಕ್ ಹೀರೋ ಮತ್ತು ದೊಡ್ಮನೆ ದೊಡ್ಮಗ ನಟ ಶಿವರಾಜ್ ಕುಮಾರ್ ಸಾಲು ಸಾಲು ಹಿಟ್ ಸಿನಿಮಾಗಳನ್ನ ಕನ್ನಡಿಗರ ಎದುರು ಇಡುತ್ತಿದ್ದಾರೆ. ಇದೇ ರೀತಿ ಮೊನ್ನೆ ಮೊನ್ನೆ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರು ಶಿವರಾಜ್ ಕುಮಾರ್. 'ಘೋಸ್ಟ್' ಈಗಾಗಲೇ ರಾಜ್ಯದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ರಿಲೀಸ್ ಆಗಿ ಅಬ್ಬರಿಸಿದೆ. ಹೀಗಿದ್ದಾಗ 'ಭೈರತಿ ರಣಗಲ್' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದು, 2024ರ ಆರಂಭದಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ 'ಕ್ಯಾಪ್ಟನ್ ಮಿಲ್ಲರ್' ಕೂಡ ಎಂಟ್ರಿ ಕೊಡುತ್ತಿದೆ.












Click it and Unblock the Notifications