ಶಿವರಾತ್ರಿಗೆ ಶಿವರಾಜ್‌ಕುಮಾರ್ ಹೊಸ ಸಿನಿಮಾ ಅಬ್ಬರ ಶುರು!
ಸೆಂಚುರಿ ಸ್ಟಾರ್ ಶಿವಣ್ಣ ಎಷ್ಟೇ ವಯಸ್ಸಾದರೂ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಖದರ್ ಕಡಿಮೆ ಮಾಡಿಕೊಂಡಿಲ್ಲ. ವರ್ಷಕ್ಕೆ ಹಲವು ಸಿನಿಮಾಗಳನ್ನು ರಿಲೀಸ್ ಮಾಡುವ ಶಿವಣ್ಣ, ಅದೇ ರೀತಿ ಸಾಲು ಸಾಲು ಹಿಟ್ ಸಿನಿಮಾಗಳನ್ನೂ ನೀಡುತ್ತಾರೆ. ಕನ್ನಡ ಮಾತ್ರವಲ್ಲ ಪರ ಭಾಷೆ ಸಿನಿಮಾಗಳಲ್ಲೂ ಶಿವಣ್ಣ ಅಬ್ಬರ ಜೋರಾಗಿದೆ. ಇದೇ ಸಮಯದಲ್ಲಿ ಹೊಸ ಸುದ್ದಿ ಹೊರಬಿದ್ದಿದ್ದು, ಶಿವಣ್ಣ & ಪ್ರಭುದೇವ ಸಿನಿಮಾ ರಿಲೀಸ್ ಡೇಟ್ ಕೂಡ ಫೈನಲ್ ಆಗಿದೆ.
ಹೌದು, ಗರಡಿ ಸಿನಿಮಾ ಬಳಿಕ ಯೋಗರಾಜ ಭಟ್ಟರು ಆ್ಯಕ್ಷನ್ ಕಟ್ ಹೇಳಿರುವ ಹೊಸ ಸಿನಿಮಾ 'ಕರಟಕ ದಮನಕ' ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ & ಪ್ರಭುದೇವ ನಟಿಸಿರುವ ಈ ಸಿನಿಮಾಗೆ ಅಭಿಮಾನಿಗಳು ಕಾಯುತ್ತಿದ್ದರು. ಟೈಟಲ್ ಮೂಲಕವೇ ಈ ಸಿನಿಮಾ ಅಭಿಮಾನಿಗಳ ಗಮನ ಸೆಳೆದಿತ್ತು. ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಒಟ್ಟಿಗೆ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಹೀಗೆ 'ಕರಟಕ ದಮನಕ' ಎಲ್ಲಾ ಆಯಾಮದಲ್ಲೂ ಭಾರಿ ಗಮನ ಸೆಳೆದಿತ್ತು. ಇದೀಗ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ.

ಕುತೂಹಲ ಕೆರಳಿಸಿರುವ ಶಿವಣ್ಣ ಸಿನಿಮಾ
ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ, ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಮ್ಯೂಸಿಕ್, ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್ ಇದೆ. ತನಿಕೆಲ್ಲ ಭರಣಿ, ಪ್ರಿಯಾ ಆನಂದ್, ರಂಗಾಯಣ ರಘು, ನಿಶ್ವಿಕಾ ನಾಯ್ಡು ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿ ಇದ್ದಾರೆ. ಹಾಗಾದ್ರೆ ಈ ಸಿನಿಮಾ ರಿಲೀಸ್ ಆಗುವುದಾದ್ರೂ ಯಾವಾಗ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಯಂಗ್ & ಎನೆರ್ಜೆಟಿಕ್ ಶಿವಣ್ಣ!
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 60 ಕ್ರಾಸ್ ಆಗಿದ್ರೂ, 16 ವರ್ಷದ ಚಿರ ಯುವಕರಂತೆ ನಟನೆ ಮಾಡ್ತಿದ್ದಾರೆ. ನಟ ಶಿವಣ್ಣ ಸಿನಿಮಾ ನೋಡಲು ಅವರ ಫ್ಯಾನ್ಸ್ ಕಾತುರದಿಂದ ಕಾಯ್ತಾ ಕುಳಿತಿರುತ್ತಾರೆ. ಈಗ ಶಿವರಾಜ್‌ಕುಮಾರ್ ಅವರ ಮುಂದಿನ ಸಿನಿಮಾ, 'ಕರಟಕ ದಮನಕ'ಗೆ ರಿಲೀಸ್ ಆಗಲು ಮುಹೂರ್ತ ಸಿಕ್ಕಿದೆ. ಅಂದಹಾಗೆ ಇದೇ ಶಿವರಾತ್ರಿಗೆ ಅಂದ್ರೆ ಮಾರ್ಚ್ 8ಕ್ಕೆ 'ಕರಟಕ ದಮನಕ' ಸಿನಿಮಾ ರಿಲೀಸ್ ಆಗಲಿದೆಯಂತೆ. ಕೆಲವು ದಿನಗಳ ಹಿಂದಷ್ಟೇ ಶಿವಣ್ಣ ಅಭಿನಯದ ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಆಗಿ ಅಬ್ಬರಿಸಿತ್ತು.

ಬೇರೆ ಭಾಷೆಯಲ್ಲೂ ಶಿವಣ್ಣ ಹವಾ!
ನಟ ಶಿವಣ್ಣ ಅಬ್ಬರ ಬಲು ಜೋರಾಗಿದೆ. ಇಷ್ಟು ದಿನ ಕಾಲ ಕನ್ನಡಿಗರಿಗೆ ಈ ನಟ ಮನರಂಜನೆ ರಸದೌತಣ ಉಣಬಡಿಸಿದ್ದರು. ಇದೀಗ ಹೊರ ರಾಜ್ಯಗಳ ಬೇರೆ ಭಾಷೆಗಳಲ್ಲೂ, ಶಿವಣ್ಣ ಹವಾ ಜೋರಾಗಿದೆ. ಅದರಲ್ಲೂ ರಜನಿಕಾಂತ್‌ರ ಅಳಿಯನ ಸಿನಿಮಾದಲ್ಲಿ, ಶಿವಣ್ಣ ಅಬ್ಬರಿಸಿದ್ದಾರೆ. ಈ ಮೂಲಕ ತಮಿಳುನಾಡು ಸಿನಿಮಾ ಪ್ರೇಕ್ಷಕರು ನಟ ಶಿವಣ್ಣ ಅವರ ನಟನೆಗೆ ಫಿದಾ ಆಗಿದ್ದಾರೆ ಅಲ್ಲದೆ ಥಿಯೇಟರ್‌ನಲ್ಲಿ ಸಂಭ್ರಮಿಸಿದ್ದಾರೆ. ಇದೀಗ ಪ್ರಭುದೇವ ಅವರ ಜೊತೆಗೆ ಕನ್ನಡಿಗರ ಸಿನಿಮಾ ಮೂಲಕ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಎಂಟ್ರಿ ಕೊಡ್ತಿದ್ದಾರೆ ಹ್ಯಾಟ್ರಿಕ್ ಹೀರೋ.
1986ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ
ಹೀರೋ ಆಗಿ ಶಿವರಾಜ್‌ಕುಮಾರ್ ಅವರ ಮೊದಲ ಸಿನಿಮಾ ರಿಲೀಸ್ ಆಗಿದ್ದು 1986ರಲ್ಲಿ. ಹೀಗೆ ಸಿನಿ ಲೋಕಕ್ಕೆ ಸುಮಾರು 40 ವರ್ಷದ ಹಿಂದೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಶಿವಣ್ಣ 125ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ. ಎಲ್ಲಾ ಸಿನಿಮಾಗಳು ವಿಭಿನ್ನವಾಗಿದ್ದು, ಗಮನವನ್ನ ಸೆಳೆದು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿವೆ. ಇದೀಗ ಹೊಸ ಜಾನರ್ ಜೊತೆಗೆ ಪ್ರಭುದೇವ ಅವರೊಂದಿಗೆ ಶಿವಣ್ಣ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಮಾರ್ಚ್ 8ಕ್ಕೆ ಅಭಿಮಾನಿಗಳ ನಿರೀಕ್ಷೆ ನಿಜವಾಗಲಿದೆ.












Click it and Unblock the Notifications