‘ಟಗರು ಪಲ್ಯ’ ಸಕ್ಸಸ್ ಬಳಿಕ ನಾಗಭೂಷಣ್ ಹೊಸ ಅವತಾರ!

ನಾಗಭೂಷಣ್ ಕನ್ನಡದಲ್ಲಿ ಮಾಡಿದ ಸಿನಿಮಾಗಳು ಕೆಲವೇ ಆಗಿದ್ರೂ ಕನ್ನಡಿಗರ ಮನಸ್ಸಿಗೆ ತುಂಬಾ ಹತ್ತಿರವಾಗಿದ್ದಾರೆ. ಯಾವುದೇ ಪಾತ್ರಕ್ಕೂ ಸೈ ಎನ್ನುವಂತೆ ನಟಿಸುವ ಈ ನಟನಿಗೆ ಈಗ 'ಟಗರು ಪಲ್ಯ' ದೊಡ್ಡ ಸಕ್ಸಸ್ ಕೊಟ್ಟಿದೆ. ಈ ಖುಷಿಯಲ್ಲೇ ಸಾಲು ಸಾಲು ಸಿನಿಮಾ ಒಪ್ಪಿಕೊಂಡು ಬ್ಯುಸಿ ಆಗಿದ್ದಾರೆ ನಾಗಭೂಷಣ್. ಹಾಗೆ ತಮ್ಮ ಗೆಳೆಯ ಡಾಲಿ ಧನಂಜಯ್ ಜೊತೆಗೆ ಮತ್ತೊಮ್ಮೆ ಕೈಜೋಡಿಸಿದ್ದಾರೆ!

ಹೌದು ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಈ ವರ್ಷದ ಮೊದಲ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸಿನಿ ರಂಗದಲ್ಲೂ ಸುಗ್ಗಿ ಸಂಭ್ರಮ ಜೋರಾಗಿದೆ. ಸಂಕ್ರಾಂತಿ ವಿಶೇಷವಾಗಿ ಹೊಸ ಹೊಸ ಸಿನಿಮಾ ಘೋಷಣೆ ಆಗುತ್ತಿವೆ. ಅದರಂತೆ ಧನಂಜಯ್ ಅವರ ಸ್ವಂತ ನಿರ್ಮಾಣ ಸಂಸ್ಥೆ, ಡಾಲಿ ಪಿಕ್ಚರ್ಸ್‌ನ ನಾಲ್ಕನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣ ಆಗಿದೆ. ಹಾಗೇ ಸಂಕ್ರಾಂತಿ ಸಂಭ್ರಮದಲ್ಲಿ ಇದ್ದ ಕನ್ನಡಿಗರಿಗೆ & ಸಿನಿಮಾ ಪ್ರೇಕ್ಷಕರಿಗೆ ನಟ ನಾಗಭೂಷಣ್ ಅವರ ಹೊಸ ಅವತಾರ ಪರಿಚಯ ಆಗಿ ಇಷ್ಟವಾಗಿದೆ.

Sandalwood Star French Biriyani Nagabhushan Prepared For New Movie

ಹೊಸ ಅವತಾರದಲ್ಲಿ ನಟ ನಾಗಭೂಷಣ್

ಯೆಸ್ ಟಗರು ಪಲ್ಯ ಸಿನಿಮಾ ಮೂಲಕ ಕಳೆದ ವರ್ಷ ಡಾಲಿ ಪಿಚ್ಚರ್ಸ್ ಪ್ರೇಕ್ಷಕರಿಗೆ ಮನರಂಜನೆ ರಸದೌತಣ ಬಡಿಸಿತ್ತು. ಹೊಸ ಡೈರೆಕ್ಟರ್ಸ್‌ಗೆ ವೇದಿಕೆಯಾದ ಡಾಲಿ ಪಿಕ್ಚರ್ಸ್ ಉತ್ತಮ ಸಿನಿಮಾ ನಿರ್ಮಿಸುವಲ್ಲಿ ಹೆಜ್ಜೆ ಇಡ್ತಿದೆ. ಇಂತಿಪ್ಪ ಡಾಲಿ ಪಿಕ್ಚರ್ಸ್ ಈಗ ಮತ್ತೊಂದು ಸಿನ್ಮಾ ನಿರ್ಮಾಣ ಮಾಡಲು ಸನ್ನದ್ಧವಾಗಿದೆ. ಈಗ ವಿದ್ಯಾಪತಿ ಸಿನಿಮಾದ ಫಸ್ಟ್ ಲುಕ್ ಅನ್ನು ಸುಗ್ಗಿ ಸಂಭ್ರಮದ ವಿಶೇಷವಾಗಿ ರಿಲೀಸ್ ಮಾಡಿದೆ ಸಿನಿಮಾ ತಂಡ. ನಟ ನಾಗಭೂಷಣ್ ಈ ಸಿನಿಮಾದಲ್ಲಿಯೂ ಮಿಂಚುವುದು ಪಕ್ಕಾ ಆಗಿದೆ.

ಇಕ್ಕಟ್ ಟೀಂಗೆ ಇಲ್ಲೂ ಜವಾಬ್ದಾರಿ

ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತೆ ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಸಾರಥಿ. ಈ ಚಿತ್ರವನ್ನ ಇವರಿಬ್ಬರು ರಚಿಸಿ ನಿರ್ದೇಶಿಸಿ ಸಂಕಲನ ಜವಾಬ್ದಾರಿಯನ್ನ ಹೊತ್ತಿದಾರೆ. ಫಸ್ಟ್ ಲುಕ್‌ನಲ್ಲಿ ನಾಗಭೂಷಣ್ ಕರಾಟೆ ಕಿಂಗ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದು, ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ. ಹೀಗಾಗಿ 2024ರಲ್ಲಿ ಮತ್ತೊಂದು ಸಖತ್ ಸಿನಿಮಾ ಕನ್ನಡದ ಸಿನಿಮಾ ಪ್ರೇಕ್ಷಕರ ಎದುರು ಬರೋದು ಪಕ್ಕಾ ಆಗಿದೆ.

Sandalwood Star French Biriyani Nagabhushan Prepared For New Movie

ಅಷ್ಟಕ್ಕೂ ಆಕ್ಷನ್ ಕಾಮಿಡಿ ಕಥಾಹಂದರ ಇರುವ ವಿದ್ಯಾಪತಿ ಸಿನಿಮಾದ ಶೂಟಿಂಗ್ ಮುಂದಿನ ವಾರದಿಂದ ಶುರು ಆಗಲಿದೆ ಅಂತ ಹೇಳಲಾಗಿದೆ. ನಟ ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಕ್ಯಾಮೆರಾ ವರ್ಕ್ ಮತ್ತು ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ & ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಗೆ ಇರಲಿದೆ. ಹೀಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿ ತೇಜೇಶ್ ಗಣೇಶ್ ಜವಾಬ್ದಾರಿ ಹೊತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+