‘ಕಾಟೇರ’ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ದರ್ಶನ್ ಅವರ ಅಭಿಮಾನಿ ಬಳಗದ ಮಹತ್ವದ ಮನವಿ!

ಕಾಟೇರ ಸಿನಿಮಾ ಇಂದು ಮಧ್ಯರಾತ್ರಿಯೇ ತನ್ನ ಅಬ್ಬರ ಶುರು ಮಾಡಲಿದೆ. ಹೀಗಾಗಿಯೇ ಕೋಟ್ಯಂತರ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳಲು ಕಾದು ಕೂತಿದ್ದಾರೆ. ಇದೇ ವೇಳೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಪ್ರೇಕ್ಷಕರ ಬಳಿ ಮಹತ್ವದ ಮನವಿ ಮಾಡಿದ್ದಾರೆ. ಹಾಗಾದ್ರೆ ದರ್ಶನ್ ಅವರ ಫ್ಯಾನ್ಸ್ ಮಾಡಿರುವ ಮನವಿ ಏನು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

'ಕ್ರಾಂತಿ' ಸಿನಿಮಾದಲ್ಲಿ ಕನ್ನಡದ ಅಭಿಮಾನ ಮೆರೆದಿದ್ದ ನಟ ದರ್ಶನ್ ಅವರು 'ಕಾಟೇರ' ಸಿನಿಮಾ ಮೂಲಕ ರೈತರ ಸಂಕಷ್ಟಗಳನ್ನ ತೆರೆ ಮೇಲೆ ತರಲು ಬರ್ತಿದ್ದಾರೆ. ಹೀಗಿದ್ದಾಗಲೇ ನಟ ದರ್ಶನ್ ಅವರ ಫ್ಯಾನ್ಸ್ ವಿಶಿಷ್ಟವಾದ ಮನವಿ ಒಂದನ್ನು ಮಾಡಿಕೊಂಡಿದ್ದು, ಅನ್ನದಾತ ರೈತನಿಗೆ ನಮಿಸೋಕೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ 'ಕಾಟೇರ' ನೋಡೋಕೆ ಬರುವ ಪ್ರೇಕ್ಷಕರು ಮರೆಯದೆ ಏನ್ ಮಾಡಬೇಕಂತೆ ಗೊತ್ತಾ? ಅನ್ನದಾತ ರೈತನಿಗೆ ಈಗ, ದರ್ಶನ್ ಅವರ ಅಭಿಮಾನಿಗಳು ಹೇಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ? ಮುಂದೆ ಓದಿ.

Sandalwood Star Darshan Fans Is Requesting To Wore The Green Shawl While Watching Kaatera

'ಕಾಟೇರ' ನೋಡಲು ಪ್ರೇಕ್ಷಕರು ಮರೆಯದೇ...

ಅಂದಹಾಗೆ 'ಕಾಟೇರ' ಸಿನಿಮಾ ಬಹುನಿರೀಕ್ಷಿತ ಕನ್ನಡ ಸಿನಿಮಾ ಆಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯದಲ್ಲಿ ಕನ್ನಡದಲ್ಲೇ ಬಿಡುಗಡೆ ಆಗಲು ಸಜ್ಜಾಗಿದೆ. ಹೀಗೆ, ಕನ್ನಡ ಸಿನಿಮಾ ಕರ್ನಾಟಕದಲ್ಲಿ ಬರೋಬ್ಬರಿ 1000ಕ್ಕೂ ಹೆಚ್ಚು ಪ್ರದರ್ಶನ ನೀಡಲಿದೆ. ಈ ಸಂಭ್ರಮದಲ್ಲೇ 'ಕಾಟೇರ' ನೋಡಲು ಬರುವ ಪ್ರೇಕ್ಷಕರು & ಅಭಿಮಾನಿಗಳ ಬಳಿ ದರ್ಶನ್ ಅವರ ಫ್ಯಾನ್ಸ್ ವಿಶೇಷ ಮನವಿ ಮಾಡಿದ್ದಾರೆ. ಅದೇನೆಂದರೆ ರೈತರಿಗೆ ಗೌರವ ಸಲ್ಲಿಸೋಕೆ, ಈ ಸಿನಿಮಾ ಚಿತ್ರ ಮಂದಿರದಲ್ಲಿ ನೋಡುವ ಸಮಯದಲ್ಲಿ, ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ಬನ್ನಿ ಎಂದು ಮನವಿ ಮಾಡಲಾಗಿದೆ. ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧೆಡೆ ಅಭಿಮಾನಿಗಳು ಈ ವಿಶೇಷ ಮನವಿ ಮಾಡಿದ್ದಾರೆ.

ಮಧ್ಯರಾತ್ರಿಯೇ ಶುರುವಾಗುತ್ತೆ ಅಬ್ಬರ

ಕಾಟೇರ ಶೋಗಳು ಮಧ್ಯರಾತ್ರಿ ಮತ್ತು ಬೆಳ್ಳಂಬೆಳಗ್ಗೆ ಶುರು ಆಗಲಿವೆ. ಬೆಂಗಳೂರಿನಲ್ಲಿನ, ಕೆಜಿ ರಸ್ತೆಯ ಅನುಪಮ ಥಿಯೇಟರ್ ಕಾಟೇರ ಆಗಮನಕ್ಕೆ ಕಾಯುತ್ತಿದೆ. ಅನುಪಮದಲ್ಲಿ ಬೆಳಗ್ಗೆ 6 ಗಂಟೆಗೆ ಶೋ ಶುರುವಾಗಲಿದೆ. ಸುಂಕದಕಟ್ಟೆ ಮೋಹನ್ ಥಿಯೇಟರ್ ಬೆಳಗ್ಗೆ 5.30ಕ್ಕೆ ಶೋ ಶುರು ಮಾಡಲಿದೆ. ಮಾಗಡಿ ರಸ್ತೆ ಪ್ರಸನ್ನ ಥಿಯೇಟರ್‌ ಕೂಡ ಕಾಟೇರ ಸಿನಿಮಾ ಹಿನ್ನೆಲೆಯಲ್ಲಿ ಸಿಂಗಾರಗೊಂಡಿದೆ. ಇದರ ಜೊತೆಗೆ ರಾಕ್‌ಲೈನ್‌ ಸಿನಿಮಾಸ್‌ನಲ್ಲಿ ಮಧ್ಯರಾತ್ರಿಯಿಂದ ಕಾಟೇರ ಸಿನಿಮಾ ಶೋ ಶುರುವಾಗಲಿದ್ದು, ಚಿತ್ರದ ಟಿಕೆಟ್ ಮಾರಾಟ ಕೂಡ ಭರ್ಜರಿಯಾಗಿದೆ.

Sandalwood Star Darshan Fans Is Requesting To Wore The Green Shawl While Watching Kaatera

ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಸದ್ದು!

ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಕಾಟೇರ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿಯೂ ಹೀಗೆ ಅಬ್ಬರಿಸುವ ಸೂಚನೆ ಇದೆ. ಅದರಲ್ಲೂ ಈಗಾಗಲೇ ಸೇಲ್ ಆಗಿರುವ ಟಿಕೆಟ್ ಲೆಕ್ಕ ನೋಡಿ ಹೇಳುವುದಾದರೆ, ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲೇ ಹೀಗೆ ಅಬ್ಬರಿಸಿದೆ. ಇನ್ನು ಸಿನಿಮಾದ ಪ್ರದರ್ಶನ ಆರಂಭವಾದ ನಂತರ ಅಭಿಮಾನಿಗಳು ಸಿನಿಮಾ ನೋಡೋಕೆ ಮತ್ತಷ್ಟು ಮುಗಿ ಬಿದ್ದು ಬರೋದು ಪಕ್ಕಾ ಎನ್ನಲಾಗಿದೆ. ಹೀಗಾಗಿ ಬಾಕ್ಸ್ ಆಫಿಸ್‌ನಲ್ಲಿ ಕೂಡ ಹೊಸ ಹೊಸ ದಾಖಲೆ ನಿರ್ಮಾಣ ಮಾಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+