UI Movie: Aನಲ್ಲಿ ಓಡಿ ಹೋಗಿದ್ದ ಹುಡುಗ UI ಬಿಡುಗಡೆ ವೇಳೆ ಪ್ರತ್ಯಕ್ಷ: ಉಪೇಂದ್ರ ಫುಲ್‌ ಶಾಕ್‌

ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್‌ ಉಪೇಂದ್ರ ನಟನೆಯ ಹಾಗೂ ನಿರ್ದೇಶನದ ಯುಐ ಸಿನಿಮಾ ನಾಳೆ ತೆರೆ ಕಾಣುತ್ತಿದ್ದು, ಉಪ್ಪಿ ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಚಿತ್ರಮಂದಿರಗಳೆಲ್ಲಾ ಹೌಸ್‌ ಫುಲ್‌ ಆಗಿದ್ದು, ನಾಳೆ ಉಪ್ಪಿ ಅಬ್ಬರ ಆರಂಭವಾಗಲಿದೆ. ಸದ್ಯ ಎಲ್ಲೆಡೆ ಯುಐ ಹವಾ ಕಾಣುತ್ತಿದ್ದು, ಕನ್ನಡಿಗರು ಮಾತ್ರವಲ್ಲದೇ ಇತರ ಭಾಷೆಯ ಅಭಿಮಾನಿಗಳು ಕೂಡ ಉಪೇಂದ್ರ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಇನ್ನು ಯುಐ ಸಿನಿಮಾದ ಪ್ರಚಾರದ ವೇಳೆ ಉಪೇಂದ್ರಗೆ ಹಿಂದೆದೂ ಆಗಿರದ ಅನುಭವವೊಂದು ಆಗಿದೆ. ಸಿನಿ ಪ್ರಿಯರಿಗೆ ಉಪೇಂದ್ರ ಶಾಕ್‌ ಕೊಡುವುದು ತೀರಾ ಸಾಮಾನ್ಯ. ಆದರೆ ಉಪೇಂದ್ರಗೆ ಈಗ ಶಾಕ್‌ ಆದ ಘಟನೆ ಯುಐ ಸಿನಿಮಾದ ಪ್ರಚಾರದ ವೇಳೆ ನಡೆದಿದೆ.

Sandalwood Real Star Upendra Shocked In UI Movie Promotion At Hyderabad

ಉಪೇಂದ್ರ ಅವರ ಎ ಸಿನಿಮಾಗೆ ಯಾರಿಗೆ ಗೊತ್ತಿಲ್ಲ ಹೇಳಿ, ಆ ಸಿನಿಮಾದ ಪ್ರತಿಯೊಂದು ದೃಶ್ಯವೂ, ಪ್ರತಿಯೊಂದು ಡೈಲಾಗ್‌ ಸಖತ್‌ ಫೇಮಸ್‌. I Am God God is Great ಅಂತಾ ಡೈಲಾಗ್‌ ಹೊಡೆಯುತ್ತಾ ಉಪೇಂದ್ರ ಕೆಲಸ ಇಲ್ಲದೇ ಖಾಲಿ ಕುಳಿತವರನ್ನು, ಜಗಳ ಆಡುವವರನ್ನು ಕೊಲ್ಲುತ್ತಾ ಬರುತ್ತಾರೆ. ಈ ವೇಳೆ ಗಂಡ ಹೆಂಡತಿಯನ್ನು ಕೊಂದು ಅವರ ಪಕ್ಕದಲ್ಲಿ ಅಳುತ್ತಿದ್ದ ಬಾಲಕನ ಬಳಿ ಉಪೇಂದ್ರ ಹೋಗುತ್ತಾರೆ.

'ಯೋಚನೆ ಮಾಡಿದರೆ ನೀನು ನನ್ನ ತರ ಆಗಿ ಬಿಡುತ್ತೀಯಾ. ಸೆಂಟಿಮೆಂಟ್‌ ಇದ್ದರೆ ಈ ಖಾಲಿ ತಟ್ಟೆನೇ ಗಟ್ಟಿಯಾಗಿ ಬಿಡುತ್ತದೆ. ನೋಡು ಪ್ರಪಂಚ ತುಂಬಾ ವಿಶಾಲವಾಗಿದೆ. ಹೋಗು ಆರಾಮಾಗಿ ಹೋಗಿ ಬದುಕು ಹೋಗು ಅಂತಾ ಉಪೇಂದ್ರ ಆ ಹುಡುಗನನ್ನು ಕಳುಹಿಸುತ್ತಾರೆ. ಆ ಹುಡುಗ ಅಲ್ಲಿಂದ ಅಳುತ್ತಾ ಓಡಿ ಹೋಗಿರುತ್ತಾನೆ. ಇಲ್ಲಿಗೆ ಎ ಸಿನಿಮಾದ ಈ ಸೀನ್‌ ಮುಗಿಯುತ್ತದೆ. ಈ ದೃಶ್ಯದ ವಿವರ ಯಾಕೆ ಎನ್ನುವುದು ಈ ಕೆಳಗಿದೆ.

Sandalwood Real Star Upendra Shocked In UI Movie Promotion At Hyderabad

ಉಪೇಂದ್ರ ಇತ್ತೀಚಿಗೆ ಹೈದ್ರಾಬಾದ್‌ಗೆ ಯುಐ ಸಿನಿಮಾದ ಪ್ರಚಾರಕ್ಕಾಗಿ ಹೋಗಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಎ ಸಿನಿಮಾದ ಇದೇ ದೃಶ್ಯವನ್ನು ವಿವರಿಸುತ್ತಾರೆ. ಈ ವ್ಯಕ್ತಿ ಯುಐ ಸಿನಿಮಾದ ಪ್ರಮೋಷನ್‌ನಲ್ಲಿ ಎ ಸಿನಿಮಾದ ದೃಶ್ಯ ವಿವರಿಸುವುದನ್ನು ಕಂಡು ಉಪೇಂದ್ರ ಕೂಡ ಗೊಂದಲಕ್ಕೀಡಾಗುತ್ತಾರೆ. ಆದರೆ ಅದಾದ ಮೇಲೆ ಈ ಯುವಕ ಕೊಟ್ಟ ಉತ್ತರ ಕೇಳಿ ಸ್ವತಃ ಉಪೇಂದ್ರ ಫುಲ್‌ ಶಾಕ್‌ ಆಗುತ್ತಾರೆ.

ಹೌದು ಅಂದು ಎ ಸಿನಿಮಾದಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡು ಓಡಿ ಹೋಗಿದ್ದ ಬಾಲಕನ ಪಾತ್ರದಲ್ಲಿ ನಟಿಸಿದ್ದವರೇ ಇಂದು ಉಪೇಂದ್ರ ಮುಂದೆ ಪ್ರತ್ಯಕ್ಷ ಆಗಿದ್ದಾರೆ. ಎ ಸಿನಿಮಾದಲ್ಲಿ ಬಾಲಕನ ಪಾತ್ರದಲ್ಲಿ ನಟಿಸಿದ್ದ ವ್ಯಕ್ತಿ ಯುಐ ಸಿನಿಮಾದ ಪ್ರಮೋಷನ್‌ನಲ್ಲಿ ಉಪೇಂದ್ರ ಮುಂದೆ ಆ ಪಾತ್ರ ಮಾಡಿದ್ದು ನಾನೇ ಎಂದು ಹೇಳಿಕೊಳ್ಳುತ್ತಾರೆ.

ಈ ವೇಳೆ ಉಪೇಂದ್ರಗೆ ಶಾಕ್‌ ಜೊತೆ ಖುಷಿಯೂ ಆಗಿದ್ದು, ಅಂದು ಓಡಲು ಶುರು ಮಾಡಿದವನು ಇಲ್ಲಿಗೆ ಬಂದು ನಿಂತಿದ್ದೀರಾ ಎಂದು ಹಾಸ್ಯ ಚಟಾಕಿ ಹಾರಿಸುತ್ತಾರೆ. ಈ ವಿಡಿಯೋ ಈಗ ವೈರಲ್‌ ಆಗುತ್ತಿದೆ. ಅಂದು ಎ ಸಿನಿಮಾದಲ್ಲಿ ನಟಿಸಿದವರು ಇಂದು ಹೈದ್ರಾಬಾದ್‌ನಲ್ಲಿ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ನಡೆಸುತ್ತಿದ್ದಾರೆ. ಅದೇನೇ ಇರಲಿ ಒಂದು ಸಿನಿಮಾದಲ್ಲಿ ನೂರಾರು ಪಾತ್ರಗಳು ಬಂದು ಹೋಗುತ್ತದೆ. ಕೆಲವೊಮ್ಮೆ ಸಾವಿರಾರು, ಹೀಗಿರುವಾಗ ಪ್ರೇಕ್ಷಕರು ಕೆಲವೊಂದಿಷ್ಟು ಪಾತ್ರಗಳನ್ನಷ್ಟೇ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆದರೆ ಉಪೇಂದ್ರ ಅವರ ಸಿನಿಮಾದ ಪ್ರತಿಯೊಂದು ಪಾತ್ರಗಳು ಕೂಡ ಎಂದಿಗೂ ಪ್ರೇಕ್ಷಕರ ಸೃತಿ ಪಟಲದಲ್ಲಿ ಇರುವಂತವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+