ವರನಟ ಡಾ.ರಾಜ್‌ಕುಮಾರ್ ಮೊಮ್ಮಗನ ಸಿನಿಮಾದ ಹಾಡು ರಿಲೀಸ್!

ಕನ್ನಡ ಸಿನಿಮಾ ರಂಗದಲ್ಲಿ, ಡಾ. ರಾಜ್ ಅವರ ಹೊರತಾಗಿ ಸ್ಯಾಂಡಲ್‌ವುಡ್ ಪರಿಕಲ್ಪನೆಯೇ ಅಸಾಧ್ಯ. ಹೀಗೆ ಕನ್ನಡಿಗರಿಂದ ಹಲವು ಬಿರುದು ಪಡೆದಿದ್ದ ವರನಟ ಡಾ. ರಾಜ್‌ಕುಮಾರ್ ಅವರು, ಜಗತ್ತಿನಾದ್ಯಂತ ಹೆಸರು ಗಳಿಸಿದ್ದರು. ಇದೀಗ ಅವರ ಕುಟುಂಬದ 3ನೇ ತಲೆಮಾರು ಅಂದ್ರೆ ಅವರ ಮೊಮ್ಮಕ್ಕಳು ಕೂಡ ಕನ್ನಡ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಹೀಗಿದ್ದಾಗ ಹೊಸ ವರ್ಷಕ್ಕೆ ಡಾ. ರಾಜ್ ಅವರ ಮೊಮ್ಮಗನ ಹೊಸ ಸಿನಿಮಾದ ಹೊಸ ಸಾಂಗ್ ರಿಲೀಸ್ ಆಗಿದೆ.

ಹೌದು ಒಂದು ಸರಳ ಪ್ರೇಮ ಕಥೆ ರೂವಾರಿ ಸಿಂಪಲ್ ಸುನಿ ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದದ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀನ್ಯಾರೆಲೆ.. ನಿನಗಾಗಿಯೇ.. ಈ ಜೀವ ಭಾವ ಸೋಜಿಗ ಎಂಬ ಕ್ಯಾಚಿ ಮ್ಯಾಚಿ ಸಾಹಿತ್ಯ ಇರುವ ಮೆಲೋಡಿ ಮಸ್ತಿಯನ್ನು ಈಗ ರಿಲೀಸ್ ಮಾಡಿದ್ದಾರೆ. ಸಿದ್ದು ಕೋಡಿಪುರ & ಸುನಿ ಸಾಹಿತ್ಯ ಇರುವ ಈ ಸಾಂಗ್‌ಗೆ, ಅರ್ಮಾನ್‌ ಮಲಿಕ್‌ ಅವರು ಧ್ವನಿಯಾಗಿದ್ದಾರೆ. ಈ ಮೂಲಕ ವಿನಯ್ ರಾಜ್ ಕುಮಾರ್ ಅವರೀಗ, ನೀನ್ಯಾರೆಲೆ ಎಂದು ಗುನುಗಿದ್ದಾರೆ. ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಹೊಸ ಹಾಡನ್ನು ಕೂಡ, ಉಡುಗೊರೆಯಾಗಿ ನೀಡಿದ್ದಾರೆ ದೊಡ್ಮನೆ ಮೊಮ್ಮಗ.

Sandalwood Movie Ondu Sarala Prema Kathe Attracting The Audience With Different Song

ಯಾರೆಲ್ಲಾ ಇದ್ದಾರೆ ಸಿನಿಮಾದಲ್ಲಿ?

ಇದೇ ಮೊದಲ ಬಾರಿ ದೊಡ್ಮನೆ ಹೀರೋ ವಿನಯ್ ರಾಜ್ ಕುಮಾರ್‌ಗೆ ಸಿಂಪಲ್ ಸುನಿ ಡೈರೆಕ್ಷನ್ ಮಾಡ್ತಿದ್ದಾರೆ. ವಿನಯ್‌ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್ & ರಾಧಾ ಕೃಷ್ಣ ಧಾರಾವಾಹಿ ಖ್ಯಾತಿ ಮಲ್ಲಿಕಾ ಸಿಂಗ್, ಇಬ್ಬರು ಚೆಲುವೆಯರು ನಾಯಕಿಯಾರಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ ಮತ್ತು ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾ ಬಳಗದಲ್ಲಿ ಇದ್ದಾರೆ. ಸಿನಿಮಾ ತಂಡಕ್ಕೆ ಆದಿ ಸಂಕಲನವಿದ್ದು, ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ.

2024ರಲ್ಲಿ ಬಿಡುಗಡೆಗೆ ಸಿದ್ಧತೆ?

ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಿದ್ದಾರೆ. ಸಿಂಪಲ್ ಸುನಿ ಅವರ 'ಅವತಾರ್ ಪುರುಷ' ಬಳಿಕ ಸುನಿ 'ಗತವೈಭವ' ಸಿನಿಮಾ ಕೈಗೆತ್ತಿಕೊಂಡಿದ್ದರು. ಆ ಬಳಿಕ 'ಒಂದು ಸರಳ ಪ್ರೇಮಕಥೆ' ಶುರು ಮಾಡಿದ್ದಾರೆ. ಇದೀಗ ಚಿತ್ರೀಕರಣ ಮುಗಿಸಿರುವ ಈ ಚಿತ್ರ ತಂಡ ರಿಲೀಸ್‌ಗೆ ಕೂಡ ಸಜ್ಜಾಗ್ತಿದೆ. ಅಂದಹಾಗೆ ಈ ಸಿನಿಮಾಗೆ, ಮೈಸೂರು ರಮೇಶ್‌ ನಿರ್ಮಾಣ ಮಾಡಿದ್ದಾರೆ. ಇನ್ನೇನು ರಿಲೀಸ್‌ಗೆ ಕೂಡ ಸಿನಿಮಾ ತಂಡ ಭರ್ಜರಿ ತಯಾರಿಯ ನಡೆಸುತ್ತಿದ್ದು, 2024 ರಲ್ಲಿ ಕನ್ನಡಿಗರು ಈ ಸಿನಿಮಾ ಕಣ್ತುಂಬಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+