‘ಕಾಂತಾರ’ ರಿಷಬ್ ಶೆಟ್ಟಿ ಜಾಗಕ್ಕೆ ಲೂಸ್ ಮಾದ ಯೋಗಿ ಎಂಟ್ರಿ: ಸಿನಿಮಾ ಬಗ್ಗೆ ಏನಂದ್ರು ‘ದುನಿಯಾ’ ಸ್ಟಾರ್?

ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಸೂಪರ್ ಹಿಟ್ ಆದ ನಂತರ, ಕೈಯಲ್ಲಿದ್ದ ಹಲವು ಸಿನಿಮಾಗಳನ್ನ ನಿಲ್ಲಿಸಿಬಿಟ್ಟರು. ಯಾಕಂದ್ರೆ ಕಾಂತಾರ ದೊಡ್ಡ ಮಟ್ಟದಲ್ಲಿ ಹಿಟ್ ಕಂಡು, ಭಾರಿ ಸದ್ದು ಮಾಡಿ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿ ಅಬ್ಬರಿಸಿತ್ತು. ಹೀಗೆ ನಟ ರಿಷಬ್ ಶೆಟ್ಟಿ ಅಬ್ಬರಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟರು. ಹೀಗಿದ್ದಾಗ ನಟ ರಿಷಬ್ ಶೆಟ್ಟಿ ಬಿಟ್ಟುಕೊಟ್ಟ ಸಿನಿಮಾದ ಜಾಗಕ್ಕೆ ಲೂಸ್ ಮಾದ ಯೋಗಿ, ಎಂಟ್ರಿಕೊಟ್ಟು ಮಿಂಚುತ್ತಿದ್ದಾರೆ.

ರಿಷಬ್ ಶೆಟ್ಟಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಟ್ಯಾಲೆಂಟೆಡ್ ನಟರು ಮಾತ್ರವಲ್ಲ ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ನಿರ್ದೇಶಕ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಈ ನಟನ ಕಾಂತಾರ ಸಿನಿಮಾ ದೊಡ್ಡ ಸಕ್ಸಸ್ ಪಡೆದು ಮಿಂಚಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಕಾಂತಾರ ಸಿನಿಮಾಗೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಈ ಕಾರಣಕ್ಕೆ ರಿಷಬ್ ಅವರು ಹಲವು ಸಿನಿಮಾಗಳನ್ನ ಬಿಟ್ಟು ಕೊಟ್ಟಿದ್ದಾರೆ. ಹೀಗೆ ರಿಷಬ್ ಶೆಟ್ಟಿ ಬಿಟ್ಟುಕೊಟ್ಟಿದ್ದ ಸಿನಿಮಾಗಳ ಪೈಕಿ 'ಬ್ಯಾಚುಲರ್‌ ಪಾರ್ಟಿ' ಒಂದಾಗಿತ್ತು. ಇದೀಗ ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿ ಅಬ್ಬರಿಸುತ್ತಿದೆ.

Sandalwood Movie Bachelor Party Trailer Got Very Good Response From Audience

ರಕ್ಷಿತ್ ಶೆಟ್ಟಿ ಹಣ ಹಾಕಿರುವ ಸಿನಿಮಾ

ಅಂದಹಾಗೆ 'ಕಾಂತಾರ' ಹಿಟ್ ಆಗುವ ಮೊದಲು ಹಲವು ಸಿನಿಮಾ ಘೋಷಣೆ ಆಗಿದ್ದವು. ಈ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಹಣ ಹಾಕೋದು ಕನ್ಫರ್ಮ್ ಆಗಿತ್ತು. ಆದ್ರೆ ಅಂತಿಮವಾಗಿ ನಟ ರಿಷಬ್ 'ಕಾಂತಾರ' ಮೂಲಕ ಗೆದ್ದು ಬೀಗಿದ್ರು.

ಅನಿವಾರ್ಯವಾಗಿ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಮುಂದುವರಿದ ಭಾಗಕ್ಕೆ ಸಜ್ಜಾದ್ರು. ಹೀಗಾಗಿ 'ಬ್ಯಾಚುಲರ್‌ ಪಾರ್ಟಿ' ಬಿಟ್ಟಿದ್ದರು. ಅವರ ಜಾಗಕ್ಕೆ ದುನಿಯಾ ಖ್ಯಾತಿಯ ಲೂಸ್ ಮಾದ ಯೋಗಿ ಎಂಟ್ರಿ ಕೊಟ್ಟು ಅಬ್ಬರಿಸಿದ್ದಾರೆ ಅಲ್ಲದೆ, ಸಿನಿಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Sandalwood Movie Bachelor Party Trailer Got Very Good Response From Audience

ರಿಲೀಸ್‌ಗೆ 'ಬ್ಯಾಚುಲರ್‌ ಪಾರ್ಟಿ' ರೆಡಿ

ಸಿಂಪಲ್ ಸ್ಟಾರ್ ಬಿರುದಾಂಕಿತ, ರಕ್ಷಿತ್ ಶೆಟ್ಟಿ ನಿರ್ಮಾಣದ & ಅಬಿಜಿತ್‌ ಮಹೇಶ್‌ ನಿರ್ದೇಶನದ 'ಬ್ಯಾಚುಲರ್‌ ಪಾರ್ಟಿ'ಗೆ ಕೌಂಟ್‌ಡೌನ್ ಶುರುವಾಗಿದೆ. ಹೊಸ ವರ್ಷಕ್ಕೆ ಅಂದ್ರೆ 2024 ಜನವರಿ 26ಕ್ಕೆ 'ಬ್ಯಾಚುಲರ್‌ ಪಾರ್ಟಿ' ಭರ್ಜರಿಯಾಗಿ ರಿಲೀಸ್ ಆಗಲಿದೆ.

ಹೀಗಾಗಿ ಸಿನಿಮಾ ರಿಲೀಸ್‌ಗಾಗಿ ಬೇಕಿರುವ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಿದ್ದಾಗ ನಟ ದಿಗಂತ್ ಹಾಗೂ ನಟ ಯೋಗಿ ಸಂದರ್ಶನ ನೀಡಿದ್ದು, ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಹಾಗೇ ಸಿನಿಮಾ ಯಾಕೆ ನೋಡಬೇಕು? ಎಂಬ ಬಗ್ಗೆ ಕೂಡ ವಿವರಣೆ ನೀಡಿದ್ದಾರೆ.

ಸಖತ್ ಮಜವಾಗಿದೆ 'ಬ್ಯಾಚುಲರ್‌ ಪಾರ್ಟಿ'

ಇನ್ನು ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಲ್ಲದೆ ಟ್ರೇಲರ್‌ನ ನೋಡಿ 'ಬ್ಯಾಚುಲರ್‌ ಪಾರ್ಟಿ' ಧಮಾಖ ಗ್ಯಾರಂಟಿ ಅಂತಾ ಅಭಿಮಾನಿ ಬಳಗ ಹೇಳುತ್ತಿದೆ. ಹೀಗಿದ್ದಾಗ ಲೂಸ್ ಮಾದ ಯೋಗಿ ಹಾಗೂ ದೂದ್ ಪೇಡ ದಿಗಂತ್ ಸಿನಿಮಾ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆ ತಾವು ಎಂಜಾಯ್ ಮಾಡಿದ ಕ್ಷಣಗಳನ್ನ ಬಿಡಿಸಿ ಇಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+