ಏನಿಲ್ಲ ಏನಿಲ್ಲ + ಮೊಯೆ ಮೊಯೆ = ಭರ್ಜರಿ ರಿಮಿಕ್ಸ್ ಮಗಾ!
ಕನ್ನಡ ಸಿನಿಮಾ ರಂಗದಲ್ಲಿ ನಟ ಉಪೇಂದ್ರ ನಿರ್ಮಾಣ ಮಾಡಿರುವ ದಾಖಲೆಗಳು ಒಂದಾ ಎರಡಾ? ಹೀಗೆ ನಟ ಉಪ್ಪಿ ಅಂದ್ರೆ ದಾಖಲೆಗಳ ಸರದಾರ ಅಂತಾ ಅವರ ಅಭಿಮಾನಿಗಳು & ಕನ್ನಡ ಸಿನಿಮಾ ಪ್ರಿಯರು ಕರೆಯುತ್ತಾರೆ. ಹೀಗಿರುವ ನಟ ಉಪೇಂದ್ರ ಅವರು ಸಿಕ್ಕಾಪಟ್ಟೆ ದಾಖಲೆ ಸೃಷ್ಟಿ ಮಾಡಿದ್ದಾರೆ. ಅದರಲ್ಲೂ ಉಪೇಂದ್ರ ತಮ್ಮ ಹೆಸರಲ್ಲೇ ಸಿನಿಮಾ ತೆಗೆದು, 'ಏನಿಲ್ಲ ಏನಿಲ್ಲ' ಹಾಡನ್ನು ಸೃಷ್ಟಿ ಮಾಡಿದ್ದರು. ಈಗ 'ಏನಿಲ್ಲ ಏನಿಲ್ಲ' ಹಾಡು ಇಡೀ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ.
ಹೌದು 'ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ' ಹಾಡಿನ ಮೂಲಕ ಉಪೇಂದ್ರ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. 1999ರ ಅಕ್ಟೋಬರ್ 22ಕ್ಕೆ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿ, ಕನ್ನಡ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಹೀಗೆ ಈ ಸಿನಿಮಾ 25 ವರ್ಷ ಪೂರೈಸಿದ್ದು, ಇದೇ ಸಿಹಿ ಸಮಯದಲ್ಲಿ 'ಉಪೇಂದ್ರ' ಸಿನಿಮಾದ ಹಾಡು ವೈರಲ್ ಆಗ್ತಿದೆ. ಹೊಸ ತಲೆಮಾರಿನ ಹುಡುಗರು ಕೂಡ ಕನ್ನಡದ ಈ ಹಳೆಯ ಸಿನಿಮಾಗೆ ಫಿದಾ ಆಗಿದ್ದಾರೆ. ಈ ಸಮಯದಲ್ಲಿ ಕನ್ನಡ ಸಿನಿಮಾ ಹಾಡು ಈಗ ಹಾಲಿವುಡ್‌ಗೂ ತಲುಪಿದೆ! ಅದು ಹೇಗೆ? ಬನ್ನಿ ತಿಳಿಯೋಣ.

ಕನ್ನಡಿಗರ ಹಾಡಿನ ಹವಾ ಜೋರು!
'ಏನಿಲ್ಲ ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ.. ಏನೇನಿಲ್ಲ.. ಏನಿಲ್ಲ ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ.. ನಿಜದಂತಿರುವ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ.. ಸುಳ್ಳಿನ ನಿಜವೂ ಸುಳ್ಳಲ್ಲ.. ಏನಿಲ್ಲ ಏನಿಲ್ಲ.. ಏನೇನಿಲ್ಲ..' ಹಿಂಗೆ ಶುರುವಾಗುವ ಉಪೇಂದ್ರ ಸಿನಿಮಾ ಹಾಡು ಆಗಿನ ಕಾಲಕ್ಕೆ ಭರ್ಜರಿ ಮೋಡಿ ಮಾಡಿತ್ತು. ಆದರೆ ಈಗ ಅಂದ್ರೆ ಈಗಿನ ಸೋಷಿಯಲ್ ಮೀಡಿಯಾ ಕಾಲಘಟ್ಟದಲ್ಲಿ ಇದೇ ಏನಿಲ್ಲ ಏನಿಲ್ಲ ಹಾಡನ್ನ ಮತ್ತೆ ಟ್ರೆಂಡ್ ಮಾಡುತ್ತಿದ್ದಾರೆ ಹೊಸ ತಲೆಮಾರಿನ ಹುಡುಗ & ಹುಡುಗಿಯರು. ಅದೇ ರೀತಿ ಈ ಹಾಡಿಗೆ 'ಮೊಯೆ ಮೊಯೆ' ಜೊತೆ ರಿಮಿಕ್ಸ್ ಮಾಡಿದ್ದು ಫುಲ್ ವೈರಲ್ ಆಗಿದೆ.
ಶೋಭರಾಜ್ ಡಾನ್ಸ್‌ಗೆ 'ಮೊಯೆ ಮೊಯೆ'!
ನಟ ಶೋಭರಾಜ್ ಅಂದ್ರೆ ಕನ್ನಡ ಸಿನಿಮಾ ಪ್ರಿಯರಿಗೆ ತುಂಬಾ ಹತ್ತಿರ. ಅದರಲ್ಲೂ ನಟ ಶೋಭರಾಜ್ ಅವರು 80 & 90ರ ದಶಕದಲ್ಲಿ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯ ಶೇಕ್, ಶೇಕ್ ಮಾಡಿದ್ದರು. ಇದೇ ನಟ, ಸಾಯಿಕುಮಾರ್ ಅವರ ಜೊತೆಗೆ 'ಓಂ ನಮಃ ಶಿವಾಯ' ಕನ್ನಡ ಸಿನಿಮಾ ಮಾಡಿದ್ದರು. ಹೀಗೆ ಈ ಸಿನಿಮಾದಲ್ಲಿ ಶೋಭರಾಜ್ ಅವರ ನಟನೆ ಭಾರಿ ಅಟ್ರ್ಯಾಕ್ಟ್ ಆಗಿತ್ತು. ಹಾಗೇ ಅವರ ಡಾನ್ಸ್ ನೋಡಿ, ಶೋಭರಾಜ್ ಅವರಿಗೆ ಫಿದಾ ಆಗಿದ್ರು ಅಭಿಮಾನಿಗಳು. ಇಂತಿಪ್ಪ ನಟ ಶೋಭರಾಜ್ ಅವರ 'ಓಂ ನಮಃ ಶಿವಾಯ' ಹಾಡಿಗೆ ಈಗ 'ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ' ಹಾಡು & 'ಮೊಯೆ ಮೊಯೆ' ಹಾಡನ್ನೂ ರಿಮಿಕ್ಸ್ ಮಾಡಿದ್ದಾರೆ! ವಿಡಿಯೋ ನೋಡಲು ಮುಂದೆ ಓದಿ.

SUB HEAD: 'ಏನಿಲ್ಲ ಏನಿಲ್ಲ' ಹಾಡಿನ ಲಿರಿಕ್ಸ್
ಏನಿಲ್ಲ.. ಏನಿಲ್ಲ..
ನಿನ್ನ ನನ್ನ ನಡುವೆ ಏನಿಲ್ಲ..
ಏನೇನಿಲ್ಲ..
ಏನಿಲ್ಲ.. ಏನಿಲ್ಲ..
ನಿನ್ನ ನನ್ನ ನಡುವೆ ಏನಿಲ್ಲ..
ನಿಜದಂತಿರುವ ಸುಳ್ಳಲ್ಲ..
ಸುಳ್ಳುಗಳೆಲ್ಲ ನಿಜವಲ್ಲ..
ಸುಳ್ಳಿನ ನಿಜವೂ ಸುಳ್ಳಲ್ಲ..
ಏನಿಲ್ಲ.. ಏನಿಲ್ಲ..
ಏನೇನಿಲ್ಲ..
ಕಳೆದ ದಿನಗಳಲೇನೂ ಇಲ್ಲ..
ನೆನಪುಗಳಲಿ ಏನೇನಿಲ್ಲ..
ಉತ್ತರ.. ದಕ್ಷಿಣ.. ಸೇರಿಸೋ ದಿಂಬಲಿ ನೀನಿಲ್ಲ..
ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ..
ಕೆದಕಿದರೆ ಏನೇನಿಲ್ಲ..
ಏನಿಲ್ಲ.. ಏನಿಲ್ಲ..
ನಿನ್ನ ನನ್ನ ನಡುವೆ ಏನಿಲ್ಲ..
ಏನೇನಿಲ್ಲ..
ಮನಸಿನೊಳಗೆ ಖಾಲಿ ಖಾಲಿ..
ನೀ ಮನದೊಳಗೆ ಇದ್ದರೂ..
ಮಲ್ಲಿಗೆ ಸಂಪಿಗೆ ತರದೇ ಹೋದರೂ ನೀ ನನಗೆ..
ಓ ನಲ್ಲ, ನೀನಲ್ಲ..
ಕರಿಮಣಿ ಮಾಲೀಕ ನೀನಲ್ಲ..
ಕರಿಮಣಿ ಮಾಲೀಕ ನೀ.. ನಲ್ಲ..
ಏನಿಲ್ಲ.. ಏನಿಲ್ಲ..
ನಿನ್ನ ನನ್ನ ನಡುವೆ ಏನಿಲ್ಲ..
ನಿಜದಂತಿರುವ ಸುಳ್ಳಲ್ಲ..
ಸುಳ್ಳುಗಳೆಲ್ಲ ನಿಜವಲ್ಲ..
ಏನಿಲ್ಲ.. ಏನಿಲ್ಲ..
ನಿನ್ನ ನನ್ನ ನಡುವೆ ಏನಿಲ್ಲ..
ಏನೇನಿಲ್ಲ..
ಪರಭಾಷಿಕರಿಗೂ ಕನ್ನಡ ಹಾಡು ಇಷ್ಟ!
'ಉಪೇಂದ್ರ' ಸಿನಿಮಾ ಆಗಿನ ಕಾಲಕ್ಕೆ ದೊಡ್ಡ ಹೆಸರನ್ನು ಮಾಡಿತ್ತು. ಹಾಗೇ ಗಲ್ಲಾಪೆಟ್ಟಿಗೆ ತುಂಬಾ ಕಾಸು ಮಾಡಿ, ಕನ್ನಡ ಸಿನಿಮಾ ರಂಗದ ಕೀರ್ತಿಯನ್ನ ಹಬ್ಬಿಸಿತ್ತು. ಇದೀಗ ಮತ್ತೆ ಕನ್ನಡಿಗರ ಸಿನಿಮಾ ಹಳೇ ಹಾಡು ವೈರಲ್ ಆಗುತ್ತಿದ್ದು. ಪರಭಾಷಿಕರು ಕೂಡ ಈ ಹಾಡು ಮತ್ತು ಮ್ಯೂಸಿಕ್‌ಗೆ ಮತ್ತೆ ಮತ್ತೆ ಫಿದಾ ಆಗ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮತ್ತೆ 'ಉಪೇಂದ್ರ' ಸಿನಿಮಾ ಟ್ರೆಂಡ್ ಕ್ರಿಯೇಟ್ ಮಾಡಿದೆ.












Click it and Unblock the Notifications