Ragini:ವಿರಾಟ್ ಕೊಹ್ಲಿ ಫಸ್ಟ್ ಗರ್ಲ್‌ಫ್ರೆಂಡ್ ರಾಗಿಣಿ ಗಾಸಿಪ್ ಬಗ್ಗೆ ತುಪ್ಪದ ಬೆಡಗಿ ಹೇಳಿದ್ದೇನು?
ಐಪಿಎಲ್ 6 ವೇಳೆ ಕನ್ನಡ ಚಿತ್ರರಂಗದ ನಟಿ ರಾಗಿಣಿ ದ್ವಿವೇದಿ ಹಾಗೂ ವಿರಾಟ್ ಕೊಹ್ಲಿಯ ಫೋಟೊ ಒಂದು ವೈರಲ್ ಆಗಿತ್ತು. ಪಂದ್ಯವೊಂದರ ವೇಳೆ ವಿರಾಟ್ ಕೊಹ್ಲಿಯ ಹಿಂದೆ ರಾಗಿಣಿ ಶಾರ್ಟ್ ಡ್ರೆಸ್ ತೊಟ್ಟು ನಿಂತಿದ್ದರು. ಆ ವೇಳೆ ರಾಗಿಣಿಯ ಕಾಲುಗಳನ್ನು ವಿರಾಟ್ ಕೊಹ್ಲಿ ನೋಡುತ್ತಿರುವಂತೆ ಕಾಣುವ ಫೋಟೊ ಕ್ಲಿಕ್ ಮಾಡಲಾಗಿತ್ತು. ಆ ಫೋಟೊ ಎಲ್ಲೆಡೆ ವೈರಲ್ ಆಗಿತ್ತು.
ಈ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಜೆ ರಾಜೇಶ್ ಜೊತೆಗಿನ ಸಂದರ್ಶನದಲ್ಲಿ ನಟಿ ರಾಗಿಣಿ ಮಾತನಾಡಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿ ಫಸ್ಟ್ ಗರ್ಲ್ ಫ್ರೆಂಡ್ ರಾಗಿಣಿ ಎನ್ನುವ ಗೂಗಲ್ ಸರ್ಚ್ ಪ್ರಶ್ನೆಗೆ ಉತ್ತರಿಸಿದ್ದಾರೆ. 'ಆ ರೀತಿ ಏನು ಇಲ್ಲ. ನಮಿಬ್ಬರಿಗೂ ಪರಸ್ಪರ ಪರಿಚಯವೇ ಇಲ್ಲ. ಆ ಸಮಯದಲ್ಲಿ ನಾನು ಆರ್‌ಸಿಬಿ ಅಂಬಾಸಿಡರ್ ಆಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಮ್ಯಾಚ್‌ಗೆ ಹೋಗಿದ್ದೆ. ನನಗೆ ಇನ್ನೂ ನೆನಪಿದೆ. ನಾನು ಕಾಯಿನ್ ಟಾಸ್ ಮಾಡುವಾಗ ಮೈದಾನಕ್ಕೆ ಹೋಗಿದ್ದೆ.

ಕಾಯಿನ್ ಟಾಸ್ ನಡೆಯುವಾಗ ನಾನಿದ್ದೆ, ವಿರಾಟ್ ಕೊಹ್ಲಿ ಇದ್ದರು, ಮತ್ತೊಂದು ಟೀಂ ಆಟಗಾರ ಎಲ್ಲರೂ ಇದ್ದರು. ಅದು ಎರಡು ಮೂರು ನಿಮಿಷದ ಘಟನೆ ಆಗಿತ್ತು. ಒಬ್ಬ ಫೋಟೋಗ್ರಾಫರ್ ಯಾವುದೋ ಒಂದು ಆ್ಯಂಗಲ್‌ನಲ್ಲಿ ತೆಗೆದ ಫೋಟೋ ತೆಗೆದಿದ್ದ. ಅದು ಹೇಗಿತ್ತು ಅಂದರೆ ವಿರಾಟ ಕೊಹ್ಲಿ ನನ್ನ ಕಾಲು ನೋಡುತ್ತಿದ್ದ ಹಾಗೇ ಇತ್ತು.
ನಿಮಗೆ ಗೊತ್ತಾ ಅಲ್ಲಿ ಆ ತರ ಏನೂ ಸೀನ್ ಇಲ್ಲ. ಆ ತರ ಸಂದರ್ಭ ಅಲ್ಲಿ ಇರಲಿಲ್ಲ. ನಮ್ಮ ಮಧ್ಯ ಮಾತುಕತೆನೂ ಇಲ್ಲ. ಯಾಕೆಂದರೆ ನಮಿಬ್ಬರಿಗೂ ಪರಸ್ಪರ ಪರಿಚಯವೇ ಇಲ್ಲ. ಅವರು ಕ್ಯಾಪ್ಟನ್ ಆಗಿ ನಿಂತಿದ್ದರು. ನಾನು ಅಂಬಾಸಿಡರ್ ಆಗಿ ನಿಂತಿದ್ದೆ ಅಷ್ಟೇ. ನಾವು ಹೆಚ್ಚೆಂದರೆ ಹಾಯ್ ಹಲೋ ಹೇಳಿರಬೇಕು ಅಷ್ಟೆ.
ಆ ಫೋಟೋ ಇಡೀ ದೇಶದ ಪತ್ರಿಕೆಯ ಮೊದಲ ಪುಟದಲ್ಲೇ ಬಂದಿತ್ತು. ಅದನ್ನು ನೋಡಿ ಇಂತ ಫೋಟೋ ಯಾಕೆ ಮೊದಲ ಪೇಜ್‌ನಲ್ಲಿ ಹಾಕಿದ್ದಾರೆ ಅನಿಸಿತು. ಇದು ಮೂರ್ಖತನ ಅಂತಾ ನಾನಂತೂ ನೆಗಲೆಕ್ಟ್ ಮಾಡದೆ. ಆದರೆ ಅದು ದೊಡ್ಡ ತಮಾಷೆಯಾಗಿತ್ತು. ಆದರೆ ಫೋಟೋಗ್ರಾಫರ್ ಕ್ರೆಯೆಟಿವಿಟಿ ಮೆಚ್ಚಬೇಕು. ಮಗಲಿ, ಎದ್ದು ಹೆಂಗೆ ತೆಗೆದಿದ್ದಾನೋ ಗೊತ್ತಿಲ್ಲ' ಎಂದರು.

ಆ ಬಳಿಕ ನಾನು ವಿರಾಟ್ ಕೊಹ್ಲಿಯನ್ನು ಭೇಟಿ ಆಗಲೇ ಇಲ್ಲ. ನನ್ನ ಪ್ರಕಾರ ನಮ್ಮ ದೇಶದ ಅತ್ಯುತ್ತಮ ಕ್ರಿಕೆಟ್ ಆಟಗಾರ ಅವರು. ನನಗೆ ಕ್ರಿಕೆಟ್ ಜೊತೆ ಡೀಪ್ ಕನೆಕ್ಷನ್ ಇದೆ. ರಣಜಿ ಆಗಲೀ, ಕೆಸಿಎಲ್ ಆಗಲೀ, ಹುಬ್ಬಳ್ಳಿ ರಾಜ್ ಕಪ್ ಆಗಲೀ, ಐಪಿಎಲ್ ಆಗಲೀ ಕ್ರಿಕೆಟ್ ಜೊತೆ ನನ್ನ ಕನೆಕ್ಷನ್ ಚೆನ್ನಾಗಿದೆ ಎಂದು ಹೇಳಿದರು.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications