Dali-Amrutha Iyengar: ಡಾಲಿ ಧನಂಜಯ್‌ಗೆ ಥ್ಯಾಂಕ್ಸ್‌ ಹೇಳಿದ ಅಮೃತಾ : ಯಾಕೆ ಗೊತ್ತಾ..?

ಲವ್‌ ಮಾಕ್ಟೇಲ್‌, ಬಡವ ರಾಸ್ಕಲ್, ಪಾಪ್ ಕಾರ್ನ್ ಮಂಕಿ ಟೈಗರ್, ಲವ್‌ ಮಾಕ್ಟೇಲ್‌-2 ಚಿತ್ರಗಳಲ್ಲಿ ಮಿಂಚಿದ ಅಮೃತಾ ಅಯ್ಯಂಗಾರ್ ಅವರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಂದನವನದ ಚಂದದ ಹುಡುಗಿ ಅಮೃತಾ ಅಯ್ಯಂಗಾರ್ ಅವರ ಅಭಿಮಾನಿಗಳು ಅವರ ಮುಂದಿನ ಸಿನಿಮಾಕ್ಕಾಗಿ ಕಾಯುತ್ತಿದ್ದು, ಇದೀಗ ಗುಡ್‌ ನ್ಯೂಸ್‌ ಸಿಕ್ಕಿದೆ.

ಲಿಖಿತ್ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್ ನಟನೆಯ ಅಬ್ಬಬ್ಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೆಎಂ ಚೈತನ್ಯ ನಿರ್ದೇಶನದ ಅಬ್ಬಬ್ಬ ಸಿನಿಮಾ ಫೆಬ್ರವರಿ 16ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದ್ದು, ಅಬ್ಬಬ್ಬ ಚಿತ್ರತಂಡಕ್ಕೆ ನಟ ರಾಕ್ಷಸ ಡಾಲಿ ಧನಂಜಯ್‌ ಸಾಥ್‌ ನೀಡಿದ್ದಾರೆ. ಅಬ್ಬಬ್ಬ ಚಿತ್ರತಂಡವನ್ನು ಪ್ರೋತ್ಸಾಹಿಸಿದ ನಟ ಡಾಲಿ ಧನಂಜಯ್‌ ಟ್ರೇಲರ್ ಬಿಡುಗಡೆ ಮಾಡಿ ಸಿನಿಮಾ ಯಶಸ್ಸಿಗೆ ತಂಡಕ್ಕೆ ಶುಭಕೋರಿದ್ದಾರೆ.

Sandalwood Actress Amrutha Iyengar Thanked To Daali Dhananjay

ಅಬ್ಬಬ್ಬ ಚಿತ್ರದ ಟ್ರೇಲರ್ ಲಾಂಚ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಈ ವೇದಿಕೆಯಲ್ಲಿ ಅಮೃತಾ ಅಯ್ಯಂಗಾರ್ ಡಾಲಿ ಧನಂಜಯ್‌ಗೆ ಧನ್ಯವಾದ ತಿಳಿಸಿದ್ದಾರೆ. "ನಮ್ಮ ಅಬ್ಬಬ್ಬ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗುತ್ತಿದೆ. ನಟ ಡಾಲಿ ಧನಂಜಯ್‌ ಅವರಿಗೆ ಥ್ಯಾಂಕ್ಯೂ ಸೋ ಮಚ್‌. ಯಾಕೆಂದರೆ ನಮ್ಮ ಸಿನಿಮಾದ ಆರಂಭದಿಂದಲೂ ನೀವು ನಮ್ಮನ್ನು ಪ್ರೋತ್ಸಾಹಿಸಿಕೊಂಡು ಬಂದಿದ್ದೀರಿ. ನಮ್ಮ ಈ ಸಿನಿಮಾಗೆ ಹಾಡು ಬರೆದು, ಆ ಹಾಡನ್ನು ಲಾಂಚ್‌ ಕೂಡ ಮಾಡಿದ್ರಿ." ಎಂದು ಧನ್ಯವಾದ ತಿಳಿಸಿದ್ದಾರೆ.

ಮಾತು ಮುಂದುವರಿಸಿದ ಅಮೃತಾ ಅಯ್ಯಂಗಾರ್ " ಚೈತನ್ಯ ಸರ್‌ ನಿಮಗೆ ನಾನು ಚಿರರುಣಿ, ಒಂದು ಕಾಮಿಡಿ ಸಿನಿಮಾ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ನಮ್ಮನ್ನು ಟ್ರೈನ್‌ ಮಾಡಿ, ವರ್ಕ್ ಶಾಪ್‌ಗಳನ್ನು ಮಾಡಿದ್ದೀರಿ, ಇಂದು ತೆರೆಯ ಮೇಲೆ ಚಿತ್ರವನ್ನು ನೋಡುವಾಗ ಖುಷಿಯಾಗುತ್ತದೆ. ಇಂದು ಇಷ್ಟು ಚೆನ್ನಾಗಿ ನಟಿಸಿದ್ದೇವೆ ಎಂದರೆ ಅದಕ್ಕೆ ನೀವು ಕಾರಣ" ಎಂದು ಸಂಪೂರ್ಣ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

Sandalwood Actress Amrutha Iyengar Thanked To Daali Dhananjay

"ಈ ಚಿತ್ರದಲ್ಲಿ ಎಲ್ಲರೂ ಅತ್ಯುತ್ತಮವಾಗಿ ನಟಿಸಿದ್ದಾರೆ. ನಮ್ಮ ಅಬ್ಬಬ್ಬ ಸಿನಿಮಾ ಫೆಬ್ರವರಿ 16ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನಿಮಗೆ ಸಿಕ್ಕಾಪಟ್ಟೆ ಮನೋರಂಜನೆ ನೀಡುತ್ತದೆ ಎಂದು ನಾನು ನಿಮಗೆ ಪ್ರಾಮಿಸ್‌ ಮಾಡುತ್ತೇನೆ. ಸಿನಿಮಾ ಆರಂಭದಿಂದ ಕೊನೆಯ ತನಕ ನಗು ಇರುತ್ತದೆ. ಸ್ವಲ್ಪ ಸ್ಯಾಡ್‌ ಹಾಗೂ ಆ್ಯಕ್ಷನ್‌ ಸಿನಿಮಾಗಳ ನಡುವೆ ಒಂದು ಕಾಮಿಡಿ ಸಿನಿಮಾ ಬರುತ್ತಿದೆ. ಎಲ್ಲರೂ ಮಿಸ್‌ ಮಾಡದೇ ಚಿತ್ರಮಂದಿರಕ್ಕೆ ಬಂದು ನೋಡಿ" ಎಂದು ಸಿನಿ ಪ್ರಿಯರಲ್ಲಿ ಮನವಿ ಮಾಡಿದ್ದಾರೆ.

"ಇನ್ನು ಈ ಸಿನಿಮಾದ ಮೂಲಕ ಹಾಸ್ಟೇಲ್‌ ಜೀವನ ಕಂಡಿಲ್ಲ ಎನ್ನುವ ನನ್ನ ಕೊರಗನ್ನು ನಿರ್ದೇಶಕರು ಕಿತ್ತು ಎಸೆದಿದ್ದಾರೆ. ನಾನು ಶೂಟಿಂಗ್‌ ಮುಗಿಸಿ ಮನೆಗೆ ಹೋದರು ಹಾಸ್ಟೇಲ್‌ನಲ್ಲಿದ್ದೀನಿ, ಈಗಲೂ ಹಾಸ್ಟೇಲ್‌ನಲ್ಲಿದ್ದೀನಿ ಎನಿಸುತ್ತಿದೆ" ಎಂದು ಅಮೃತ ಅಯ್ಯಂಗಾರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+