ಅತ್ತ ಡಾಲಿಗೆ ಹುಡುಗಿ ಫಿಕ್ಸ್: ಇತ್ತ ತಮ್ಮ ಮದುವೆ ಬಗ್ಗೆ ಹಿಂಟ್ ಕೊಟ್ಟ ಅಮೃತಾ ಐಯ್ಯಂಗಾರ್
ಕನ್ನಡದ ಅನೇಕ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ಕೂಡ ಒಬ್ಬರು. ಸಾಲು ಸಾಲು ಚಿತ್ರಗಳನ್ನು ಇಬ್ಬರು ಒಟ್ಟಿಗೆ ನಟಿಸಿದ್ದರು. ಡಾಲಿ ಧನಂಜಯ್ ಹೀರೋ ಎಂದರೆ ಅಮೃತಾ ಐಯ್ಯಂಗಾರ್ ಆ ಚಿತ್ರದ ನಾಯಕಿ ಆದರೆ ಸಿನಿಮಾ ಹಿಟ್ ಎನ್ನುವುದು ಸಿನಿ ಪ್ರಿಯರ ಅಭಿಪ್ರಾಯವಾಗಿತ್ತು. ಅಷ್ಟರ ಮಟ್ಟಿಗೆ ಈ ಜೋಡಿ ತೆರೆ ಮೇಲೆ ಮೋಡಿ ಮಾಡಿತ್ತು.
ಇನ್ನು ತೆರೆ ಮರೆಯಲ್ಲೂ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ ಅನೇಕರಲ್ಲಿತ್ತು. ಯಾಕೆಂದರೆ ಒಂದಾದ ಮೇಲೊಂದು ಚಿತ್ರಗಳನ್ನು ಒಟ್ಟಿಗೆ ಮಾಡುತ್ತಿದ್ದರು. ಜೊತೆಗೆ ಎಲ್ಲಾ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಈ ವಿಚಾರದಲ್ಲಿ ಯಾರೇ, ಎಂತಹ ವೇದಿಕೆಯಲ್ಲೂ ಕಾಲು ಎಳೆದರೂ ಕೂಡ ಇಬ್ಬರೂ ಯಾವುದೇ ರೀತಿಯಾಗಿ ರಿಯ್ಯಾಕ್ಟ್ ಮಾಡುತ್ತಿರಲಿಲ್ಲ. ಬದಲಿಗೆ ನಗುತ್ತಿದ್ದರು.

ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಹೂ ಹಿಡಿದು ಅಮೃತಾ ಐಯ್ಯಂಗಾರ್ ಅವರ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಧನಂಜಯ್ ನೀಡಿದ್ದ ಗುಲಾಬಿ ಹೂ ಪಡೆದು ಅಮೃತಾ ಐಯ್ಯಂಗಾರ್ ಕೂಡ ನಾಚಿ ನೀರಾಗಿದ್ದರು. ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿತ್ತು. ಕೆಲವರು ನಿಮ್ಮ ಇಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಕೂಡ ನೇರಾನೇರವಾಗಿಯೇ ಇಬ್ಬರ ಬಳಿ ಕೇಳಿದ್ದರು. ಆದರೆ ಇಬ್ಬರಿಂದಲೂ ಉತ್ತರ ಬಂದಿರಲಿಲ್ಲ.
ಆದರೆ ಈಗ ಎಲ್ಲರ ಊಹೆ, ನಿರೀಕ್ಷೆ ಎಲ್ಲವೂ ಹುಸಿಯಾಗಿದೆ. ಡಾಲಿ ಧನಂಜಯ್ ಹಸೆಮಣೆ ಏರಲು ಸಜ್ಜಾಗಿದ್ದು, ಡಾಕ್ಟರ್ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ದಿನವಾದ ಇಂದೇ ಡಾಲಿ ಧನಂಜಯ್ ಈ ಖುಷಿಯ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಅತ್ತ ಡಾಲಿ ಧನಂಜಯ್ ಜೀವನ ಸಂಗಾತಿಯನ್ನು ಪರಿಚಯಿಸುತ್ತಿದ್ದಂತೆ ಇತ್ತ ಅಮೃತಾ ಐಯ್ಯಂಗಾರ್ ಅತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅಮೃತಾ ಐಯ್ಯಂಗಾರ್ ಅವರಿಗೆ ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಅಣ್ಣಂದು ಮದುವೆ ಫಿಕ್ಸ್ ಆಯ್ತು ನೀವು ಬೇಗ ಮದುವೆಯಾಗಿ ಎನ್ನುತ್ತಿದ್ದಾರೆ.

ಅಣ್ಣ ಮದುವೆಯಾಗುತ್ತಿದ್ದಾರೆ ನಿಮ್ಮದು ಯಾವಾಗ ಎನ್ನುವ ಅಭಿಮಾನಿಯೊಬ್ಬರ ಪ್ರಶ್ನೆಗೆ ಅಮೃತಾ ಐಯ್ಯಂಗಾರ್ ನೇರವಾಗಿ ಉತ್ತರಿಸಿದ್ದಾರೆ. ಮದುವೆ ಬಗ್ಗೆ ಗೊತ್ತಿಲ್ಲ ಇನ್ನೂ ಸಮಯ ಕೂಡಿ ಬರಬೇಕು ಎಂದು ಅಮೃತಾ ಐಯ್ಯಂಗಾರ್ ಗಡಿಯಾರದ ಚಿತ್ರವನ್ನು ಹಾಕಿದ್ದಾರೆ. ಈ ಉತ್ತರದ ಸ್ಕ್ರೀನ್ ಶಾರ್ಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.












Click it and Unblock the Notifications