ಧನ್ವೀರ್‌ ಜೊತೆ ರಚಿತಾ ರಾಮ್‌ ಮದುವೆ ಸುದ್ದಿ, ಇಲ್ಲಿದೆ ಪಕ್ಕಾ ಕ್ಲಾರಿಟಿ ಉತ್ತರ

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರ ಬಗ್ಗೆ ಹಲವು ಗಾಸಿಪ್‌ಗಳಿವೆ. ಇದರಲ್ಲಿ ನಟ ಧನ್ವೀರ್‌ ಗೌಡ ಅವರ ವಿಚಾರವೂ ಒಂದು. ಹೌದು ಬಜಾರ್‌ ನಟ ಧನ್ವೀರ್‌ ಗೌಡ ಹಾಗು ರಚಿತಾ ರಾಮ್‌ ಅವರ ನಡುವೆ ಪ್ರೇಮ್‌ ಕಹಾನಿ ಇದೆ, ಇಬ್ಬರೂ ಮದುವೆ ಕೂಡ ಆಗ್ತಾರೆ ಅನ್ನೋ ವದಂತಿ ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಆದರೆ, ಇದಕ್ಕೆ ಸ್ಪಷ್ಟ ಉತ್ತರವಂತೂ ಸಿಕ್ಕಿಲ್ಲ. ರಚಿತಾ ರಾಮ್‌ ಕೂಡ ಇದಕ್ಕೆಲ್ಲ ತಲೆಕೆಡಿಸಿಕೊಂಡವರೂ ಅಲ್ಲ. ಇನ್ನು ಧನ್ವೀರ್‌ ಗೌಡ ಅವರು ಕೂಡ ಈ ಹಿಂದೆ ಒಮ್ಮೆ ಈ ಗಾಸಿಪ್‌ಗೆ ತೆರೆ ಎಳೆದರೂ, ಜನ ಬಾಯಿ ಮುಚ್ಚಿಸಲು ಆಗಲೇ ಇಲ್ಲ. ಈಗ ಕೊನೆಗೂ ಈ ವಿಚಾರದ ಬಗ್ಗೆ ಧನ್ವೀರ್‌ ಒಂದು ಕ್ಲಾರಿಟಿ ಕೊಟ್ಟೇಬಿಟ್ಟಿದ್ದಾರೆ.

ರಚಿತಾ ಹಾಗೂ ಧನ್ವೀರ್‌ ಇಬ್ಬರೂ ನಟ ದರ್ಶನ್‌ ಅವರ ಗರಡಿಯಲ್ಲೇ ಪಳಗಿರುವ ಸೆಲೆಬ್ರಿಟಿಗಳು. ಇಬ್ಬರಿಗೂ ದರ್ಶನ್‌ ಅವರೇ ಅಚ್ಚುಮೆಚ್ಚು. ಈ ಹಿಂದೆ ರಚಿತಾ ರಾಮ್‌ ಅವರು ಮದುವೆ ವಿಚಾರ ಪ್ರಸ್ತಾಪಿಸಿದಾಗ ನಾನು ಗೌಡ್ರು ಹುಡುಗನನ್ನೇ ಮದುವೆ ಆಗ್ತೀನಿ ಅನ್ನೋ ಮೂಲಕ ಕುತೂಹಲ ಮೂಡಿಸಿದ್ರು. ಇಷ್ಟಾಗಿದ್ದೇ ತಡ ಧನ್ವೀರ್‌ ಗೌಡ ಹಾಗೂ ರಚಿತಾ ರಾಮ್‌ ಅವರ ಬಗ್ಗೆ ಲವ್‌ಸ್ಟೋರಿಗೆ ಹಲವರು ನಿರ್ದೇಶಕರಾಗಿಬಿಟ್ರು.

Sandalwood Actor Dhanveer Gowda Clarifies Marriage Rumors With Actress Rachita Ram

ರಚಿತಾ ರಾಮ್‌ ಅವರ ಹೇಳಿಕೆ ಸಮಯದಲ್ಲೇ ಧನ್ವೀರ್‌ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದರು. ರಚಿತಾರಾಮ್‌ ಅವರು ತಾವು ಮದುವೆಯಾಗುವುದು ಗೌಡರ ಹುಡುಗನನ್ನೇ ಎಂದ ಸಮಯದಲ್ಲೇ ಧನ್ವೀರ್‌ ಹಾಗೂ ರಚಿತಾ ಅವರ ಸೆಲ್ಫೀ ಫೋಟೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಆಗ ರಚಿತಾ ಹೇಳಿದ್ದ ಗೌಡರ ಹುಡುಗ ಧನ್ವೀರ್‌ ಅವರೆ ಎಂದು ಹಲವು ಭಾವಿಸಿದ್ದರು. ಅಂದಿನಿಂದಲೂ ಇವರ ಲವ್‌ಸ್ಟೋರಿ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಆಗುತ್ತಲೇ ಇವೆ. ಆದರೆ ರಚಿತಾ ರಾಮ್‌ ಅವರು ಈ ಗಾಸಿಪ್‌ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ಕೊಟ್ಟವರಲ್ಲ. ಏನೇ ಗಾಸಿಪ್‌ ಬಗ್ಗೆ ಕೇಳಿದ್ರೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ಅಂತಾ ನಗುತ್ತಲೇ ಮುಂದೆ ಸಾಗುತ್ತಾರೆ. ಆದರೆ ಧನ್ವೀರ್‌ ಗೌಡ ಹಾಗಲ್ಲ, ಈ ಗಾಸಿಪ್‌ ಬಗ್ಗೆ ಕೊನೆಗೂ ಒಂದು ಕ್ಲಾರಿಟಿ ಕೊಟ್ಟಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ರಚಿತಾ ರಾಮ್‌ ಅವರ ಜೊತೆಗಿನ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ.

Sandalwood Actor Dhanveer Gowda Clarifies Marriage Rumors With Actress Rachita Ram

ಧನ್ವೀರ್‌ ಕೊಟ್ಟ ಕ್ಲಾರಿಟಿ ಏನು?

ಬರೀ ರಚಿತಾ ರಾಮ್‌ ಅವರೊಂದಿಗೆ ಅಲ್ಲ, ಇನ್ನೂ ಹಲವರ ಜೊತೆ ಸಂಬಂಧ ಕಟ್ಟಿ ಚೌಟ್ರಿ ಕೂಡ ಬುಕ್‌ ಮಾಡಿದ್ದರು. ಇನ್ನು ನಮ್ಮಿಬ್ಬರಿಗೆ ತಾಂಬೂಲ ಒಂದು ಎಕ್ಸ್‌ಚೇಂಜ್‌ ಮಾಡಿಲ್ಲ ಅಷ್ಟೇ, ಬಾಕಿ ಇನ್ನೆಲ್ಲವನ್ನೂ ಆಗಲೇ ಮಾಡಿದ್ದರು ಎಂದು ಧನ್ವೀರ್‌ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಜನ ಹೇಗೆ ಅಂದ್ರೆ ಈಗ ಯಾವ ನಟಿ ಜೊತೆ ಸುಮ್ಮನೆ ಕಾಣಿಸಿಕೊಂಡ್ರೂ ಒಂದು ಫೋಟೋ ತಗೋತಾರೆ, ಆ ಮೇಲೆ ಇವರಿಬ್ಬರ ಮಧ್ಯೇ ಏನೋ ಇದೆ ಅಂತ ಕಥೆ ಹೇಳ್ತಾರೆ. ಆದರೆ ನಾವೇನೂ ಅನ್ನೋದು ನಮಗೆ ಮಾತ್ರ ಗೊತ್ತು. ಈಗ ನಾನು ಹಾಗೂ ರಚಿತಾ ಅವರೊಂದಿಗೆ ಶೇರ್‌ ಮಾಡುವ ಬಾಂಡಿಂಗ್‌ ಕೂಡ ಬೇರೆ. ನಾವಿಬ್ಬರೂ ಕಷ್ಟ ಸುಖವನ್ನು ಬೇರೆ ರೀತಿ ಶೇರ್‌ ಮಾಡ್ಕೋತೀವಿ. ಅಷ್ಟಕ್ಕೇ ಏನೇನೋ ಸುದ್ದಿ ಹಬ್ಬಿಸ್ತಾರೆ ಎನ್ನುವ ಮೂಲಕ ಧನ್ವೀರ್‌ ಎಲ್ಲ ವದಂತಿಗೆ ಬ್ರೇಕ್‌ ಹಾಕಿದ್ದಾರೆ.

ಇತ್ತೀಚೆಗೆ ಜಾಮೀನು ಸಿಕ್ಕಿ ದರ್ಶನ್‌ ಅವರು ಹೊರಬಂದ ನಂತರವೂ ವಿಶೇಷ ವಿಡಿಯೋ ಹಂಚಿಕೊಂಡಿದ್ರು. ಇದರಲ್ಲಿ ದರ್ಶನ್‌ ಅವರು ಧನ್ವೀರ್‌ ಹಾಗೂ ರಚಿತಾ ರಾಮ್‌ ಅವರ ಹೆಸರನ್ನು ಉಲ್ಲೇಖಿಸಿ ಧನ್ಯವಾದ ಹೇಳಿದ್ರು. ಆ ಸಮಯದಲ್ಲೂ ಧನ್ವೀರ್‌ ಹಾಗೂ ರಚಿತಾ ರಾಮ್‌ ಅವರ ಮದುವೆ ವಿಚಾರದ ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿಜೋರಾಗಿ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+