Samantha Ruth Prabhu: 2025ರಲ್ಲಿ ಸಮಂತಾಗೆ ಮತ್ತೊಮ್ಮೆ ಕಂಕಣ ಭಾಗ್ಯ: ಹೇಗಿದೆ ಗೊತ್ತಾ ಹೊಸ ವರ್ಷದ ಭವಿಷ್ಯ?
ಸಮಂತಾ ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರು ಲಕ್ಷಾಂತರ ಜನ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಅದ್ಭುತ ಅಭಿನಯದಿಂದ ಸಮಂತಾ ರುತ್ ಪ್ರಭು ಸಾಕಷ್ಟು ಹೆಸರು ಮಾಡಿದ ನಟಿ. ಸದ್ಯ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಮುಂದಿನ ವರ್ಷ ಆಗುವ ಬದಲಾವಣೆಯನ್ನು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಅವರ ಅಭಿಮಾನಿಗಳಿಗೆ ಅಚ್ಚರಿಯೊಂದಿಗೆ ಖುಷಿ ಕೂಡ ಆಗಿದೆ.
ಹೌದು... ಸಮಂತಾ ಹಂಚಿಕೊಂಡ ಆ ಪೋಸ್ಟ್‌ನಲ್ಲಿದೆ ಅವರ ವಿವಾಹ ವಿಚಾರ. ನಟಿ ಸಮಂತಾ ಈಗಾಗಲೇ ವಿವಾಹವಾಗಿದ್ದಾರೆ. ನಾಗ ಚೈತನ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಮಂತಾ ವಿಚ್ಛೇದನ ಪಡೆದುಕೊಂಡಿದ್ದಾರೆ. ವಿಚ್ಛೇದನ ಬಳಿಕ ನಾಗ ಚೈತನ್ಯ ಮತ್ತೊಂದು ವಿವಾಹವಾಗಿ ಹೊಸ ಜೀವನ ಶುರು ಮಾಡಿದರು. ಆದರೆ ಸಮಂತಾ ವೈಯಕ್ತಿಕ ಜೀವನದಲ್ಲಿ ಆದ ಎಲ್ಲಾ ಬದಲಾವಣಿಗಳಿಂದಾಗಿ ಹೊರ ಬರಲು ಸಾಕಷ್ಟು ಸಮಯ ತೆಗೆದುಕೊಂಡರು. ಆದರೀಗ ಅವರಿಗೆ ಸುದಿನ ಆರಂಭವಾಗಲಿದೆ. ಅವರ ಕಷ್ಟಗಳೆಲ್ಲವೂ ದೂರವಾಗಿ ಅವರ ಜೀವನದಲ್ಲಿ ಸಂತೋಷವೊಂದೇ ನೆಲೆಸುವ ಸಮಯ ಬಂದಾಗಿದೆ. ಅದು ಹೇಗೆ ಅಂತೀರಾ? ಅದನ್ನ ಹೇಳ್ತೀವಿ ಮುಂದೆ ಓದಿ.

ಸಮಂತಾ ಹೊಸ ವರ್ಷದ ಭವಿಷ್ಯ ಹೇಗಿದೆ?
ಸಮಂತಾ ಅವರದ್ದು ವೃಷಭ ರಾಶಿ. 2025ರಲ್ಲಿ 12 ರಾಶಿಗಳಲ್ಲಿ ವೃಷಭ ರಾಶಿಯವರಿಗೆ ಅತ್ಯಂತ ಅದ್ಬುತವಾದ ಸಮಯ ಶುರುವಾಗಲಿದೆ ಎಂದು ಈಗಾಗಲೇ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಯಾಕೆಂದರೆ ಹೊಸ ವರ್ಷದಲ್ಲಿ ವೃಷಭ ರಾಶಿಯವರಿಗೆ ಗುರು ಜೊತೆಗೆ ಶನಿ ಬಲವೂ ಇದೆ. ಹೀಗಾಗಿ ಎಲ್ಲಾ ರಾಶಿಗಳಿಗಿಂತ ಅತ್ಯಂತ ಮಂಗಳಕರ ದಿನಗಳು ವೃಷಭ ರಾಶಿಯವರಿಗೆ ಮುಂದಿನ ವರ್ಷ ಆರಂಭವಾಗಲಿದೆ.
ಹೀಗಾಗಿ ವೃಷಭ ರಾಶಿಯವರಿಗೆ ಹೊಸ ವರ್ಷ ಆರ್ಥಿಕ, ಸಾಮಾಜಿಕ, ವೃತ್ತಿ ಎಲ್ಲಾ ರಂಗದಲ್ಲೂ ಅತ್ಯಾದ್ಭುತ ಫಲ ಸಿಗಲಿದೆ. ಅಲ್ಲದೆ ಮದುವೆಯಾಗುವ ಯೋಗದ ಜೊತೆಗೆ ಮಕ್ಕಳ ಭಾಗ್ಯ ಕೂಡ ಇದೆ. ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ರಾಶಿಗಳಲ್ಲಿ ಅವರ ವೃಷಭ ರಾಶಿ ಕೂಡ ಇದೆ. ಈ ಮೂಲಕ ಮುಂದಿನ ವರ್ಷ ಸಮಂತಾ ರುತ್ ಪ್ರಭು ಮದುವೆ ಆಗುವ ಸೂಚನೆಯನ್ನು ಕೊಟ್ಟಿದ್ದಾರೆ.
ಅಂದಹಾಗೆ ಸಮಂತಾ ರುತ್ ಪ್ರಭು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಅವರು ಶೇರ್ ಮಾಡಿದ ರಾಶಿಗಳ ಪೈಕಿ ಅವರ ವೃಷಭ ರಾಶಿ ಕೂಡ ಇದೆ. 2025ರಲ್ಲಿ ವೃಷಭ ರಾಶಿಯವರ ಜಾತಕ ಹೇಗಿದೆ ಎಂಬುದನ್ನು ಈ ಪೋಸ್ಟ್ ವಿವರಿಸುತ್ತದೆ. ಸಮಂತಾ ಅವರದ್ದು ವೃಷಭ ರಾಶಿ ಆಗಿದೆ. ಈ ರಾಶಿಯವರು 2025ರ ವರ್ಷದಲ್ಲಿ ಏನೆಲ್ಲಾ ನಿರೀಕ್ಷೆ ಮಾಡಬಹುದು ಎಂಬ ಪಟ್ಟಿಯನ್ನು ಹಂಚಿಕೊಂಡು ಸಮಂತಾ 'ಹಾಗೇಯೇ ಆಗಲಿ' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ವೃಷಭ ರಾಶಿಯವರ ಭವಿಷ್ಯದ ಚಾಟ್ ನಲ್ಲಿಯೂ ಮದುವೆ ಮತ್ತು ಮಕ್ಕಳ ಬಗ್ಗೆ ಸೂಚನೆ ಇದೆ.
2025ರಲ್ಲಿ ಸಮಂತಾ ಮದುವೆ
ಈ ಮೂಲಕ ಮುಂದಿನ ವರ್ಷ ಸಮಂತಾ ಮದುವೆಯಾಗುವ ಸೂಚನೆಯನ್ನು ಕೊಟ್ಟಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ನಿಮ್ಮ ಜೀವನದಲ್ಲಿ ಬದಲಾವಣೆಯಾಗಲಿ, ಹೊಸ ವರ್ಷ ಹೊಸತನ ತರಲಿ ಎಂದು ಹಾರೈಸಿದ್ದಾರೆ. ಆದರೆ ಸಮಂತಾ ತಾವು ಮದುವೆ ಯಾವಾಗ ಆಗುತ್ತಾರೆ? ಹುಡುಗ ಯಾರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಅವರ ಮುಂದಿನ ವರ್ಷದ ವರ್ಷ ಭವಿಷ್ಯವನ್ನು ಹಂಚಿಕೊಂಡು ಅವರು ಸಂತೋಷ ವ್ಯಕ್ತಪಡಿಸಿರುವುದು ನೋಡಿದರೆ ಅವರು 2025ರಲ್ಲಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಸಮಂತಾ ಅವರು ಮತ್ತೆ ಮದುವೆಯಾದರೆ ಯಾರನ್ನು ವರಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಇದನ್ನು ತಿಳಿಯಲು ಮುಂದಿನ ವರ್ಷದವರೆಗೂ ಕಾಯಲೇಬೇಕು.












Click it and Unblock the Notifications