Tiger 3: ಸಲ್ಮಾನ್ ಖಾನ್ & ಶಾರುಖ್ ಖಾನ್ ಬಾಕ್ಸ್ ಆಫಿಸ್ ಕದನಲ್ಲಿ ಗೆದ್ದು ಬೀಗಿದ್ದು ಯಾರು?

ದೀಪಾವಳಿ ಹಬ್ಬಕ್ಕೆ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. 'ಟೈಗರ್ 3' ಸಿನಿಮಾ ಜಗತ್ತಿನಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫಿಸ್‌ನಲ್ಲೂ ಕೂಡ ಧಾಂ.. ಧೂಂ.. ಅಂತಾ ಪಟಾಕಿ ರೀತಿಯೇ ಸದ್ದು ಮಾಡುತ್ತಿದೆ. ಅದರಲ್ಲೂ ಶಾರುಖ್ ಖಾನ್ & ಸಲ್ಮಾನ್ ಖಾನ್ ಸಿನಿಮಾ ನಡುವೆ ಸದ್ದೇ ಇಲ್ಲದೆ ಶುರುವಾಗಿದ್ದ ಬಾಕ್ಸ್ ಆಫೀಸ್ ಫೈಟಿಂಗ್ ಕೂಡ ಒಂದು ಹಂತ ತಲುಪಿದೆ. ಹಾಗಾದರೆ ಇದರಲ್ಲಿ ಗೆದ್ದಿದ್ದು ಯಾರು?

ಸಲ್ಮಾನ್ ಖಾನ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದು ಈ ಸಿನಿಮಾ ಕಣ್ತುಂಬಿಕೊಳ್ಳಲು ಥಿಯೇಟರ್‌ಗೆ ಮುಗಿಬಿದ್ದಿದ್ದಾರೆ. ಸಲ್ಮಾನ್ ಖಾನ್ ಅಭಿಯದ ಸಿನಿಮಾಗಳು ಅಂದರೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತೆ. ಅದ್ರಲ್ಲೂ 'ಟೈಗರ್' ಸರಣಿಯ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. 'ಟೈಗರ್ 1' ಮತ್ತು 'ಟೈಗರ್ 2' ಹಿಟ್ ಆದ ನಂತರ ಇದೀಗ 'ಟೈಗರ್ 3' ತೆರೆಗೆ ಬಂದಿದ್ದು, ನೂರಾರು ಕೋಟಿ ರೂಪಾಯಿ ಬಾಚುವ ನಿರೀಕ್ಷೆ ಇತ್ತು. ಈ ಮಧ್ಯೆ ದೀಪಾವಳಿ ಹಬ್ಬದ ರಜೆ ಬಂದಿದ್ದು ಡಬಲ್ ಧಮಾಖ ಸಿಕ್ಕಂತಾಗಿತ್ತು. ಹಾಗಾದರೆ ಟೈಗರ್ 3 ಬಾಕ್ಸ್ ಆಫಿಸ್‌ನಲ್ಲಿ ಗಳಿಸಿರುವುದು ಎಷ್ಟು?

Salman Khan Movie Tiger 3 Box Office Collection

ಭರ್ಜರಿ ಶತಕ ಬಾರಿಸಿದ ಸಲ್ಲು!

ಹೌದು, ಎಲ್ಲಾ ಅಂದುಕೊಂಡಂತೆ ನಡೆದಿದ್ದು ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಚಿತ್ರ ಶತಕದ ಗಡಿ ದಾಟಿದೆ. ನೋಡ ನೋಡುತ್ತಲೇ ಈ ಸಿನಿಮಾ 100 ಕೋಟಿ ಕ್ಲಬ್ ಸೇರಿ ದೀಪಾವಳಿಯಲ್ಲಿ ಕಮಾಲ್ ಮಾಡಿದೆ. ಈ ಹಿಂದೆ ಕೂಡ ಸಲ್ಮಾನ್ ಖಾನ್ ಅಭಿನಯಿಸಿದ್ದ ಸಿನಿಮಾಗಳು ನೂರಾರು ಕೋಟಿ ದುಡಿದಿದ್ದವು. ಅದರಲ್ಲೂ ಇತ್ತೀಚೆಗೆ ಶಾರುಖ್ ಖಾನ್ & ಸಲ್ಮಾನ್ ಖಾನ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ 'ಟೈಗರ್ 3'ಗೆ ಕೂಡ ಇಬ್ಬರು ಒಟ್ಟಿಗೆ ಅಭಿನಯಿಸಿ ಗಲ್ಲಾಪೆಟ್ಟಿಗೆ ಉಡಾಯಿಸಿದ್ದಾರೆ.

ತುಂಬಿ ತುಳುಕಿದ ಥಿಯೇಟರ್ಸ್

ಸಲ್ಮಾನ್ ಖಾನ್ ಅವರಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಟೈಗರ್ 3 ರಿಲೀಸ್ ಆಗಿ ಅಬ್ಬರಿಸುತ್ತಿದೆ. ಹೀಗೆ ಈ ಚಿತ್ರವು, ನೂರಾರು ಕೋಟಿ ಬಾಚಿಕೊಂಡು ಮುನ್ನುಗ್ಗುತ್ತಿದೆ. ಭಾರತದ ಜೊತೆಗೆ, ಅಮೆರಿಕ, ಯುಕೆ ಹಾಗೂ ಯುರೋಪ್ ದೇಶಗಳು ಸೇರಿದಂತೆ ವಿವಿಧೆಡೆ ಸಲ್ಮಾನ್ ಖಾನ್ ಅಭಿನಯದ ಚಿತ್ರ, ಕಮಾಲ್ ಮಾಡಿದೆ. ಕೋಟಿಕೋಟಿ ಬಾಚಿ ಮತ್ತೊಮ್ಮೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ದೊಡ್ಡ ಯಶಸ್ಸನ್ನು ಕೂಡ ತಂದುಕೊಟ್ಟಿದೆ.

Salman Khan Movie Tiger 3 Box Office Collection

ಒಟ್ನಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುವ ಜೊತೆಗೆ, ಬಾಕ್ಸ್ ಆಫಿಸ್‌ನಲ್ಲಿ ಕೂಡ ಅಬ್ಬರಿಸಿದ್ದಾರೆ. ಇನ್ನೂ ಹಲವು ಬಹು ನಿರೀಕ್ಷಿತ ಸಿನಿಮಾಗಳು ಸಲ್ಮಾನ್ ಖಾನ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿವೆ. ಹೀಗಾಗಿ ಅಭಿಮಾನಿ ಬಳಗ ಕೂಡ ಸಲ್ಮಾನ್ ಅಭಿನಯವನ್ನ ಈಗಲೂ ಹುಚ್ಚೆದ್ದು ಕುಣಿದು ಎಂಜಾಯ್ ಮಾಡ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+