ಡಾರ್ಲಿಂಗ್ ಪ್ರಭಾಸ್ ಮುಂದಿನ ಸಿನಿಮಾ ಯಾವುದು? ಇಲ್ಲಿದೆ ಉತ್ತರ!
ಬಾಹುಬಲಿ ಸಿನಿಮಾ ಮೂಲಕ ಜಗತ್ತಿನಾದ್ಯಂತ ಸದ್ದು ಮಾಡಿದ್ದ ದಕ್ಷಿಣ ಭಾರತದ ನಟ, ಡಾರ್ಲಿಂಗ್ ಪ್ರಭಾಸ್ ಸಾಲು ಸಾಲು ಸೋಲಿನ ನಿರಾಸೆಯಲ್ಲಿ ಇದ್ದರು. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಪ್ರಭಾಸ್ ಅವರು ಮಾಡಿದ ಸಿನಿಮಾಗಳು ಬಾಕ್ಸ್ ಆಫಿಸ್‌ನಲ್ಲಿ ಭಾರಿ ದೊಡ್ಡ ಹಿನ್ನಡೆ ಅನುಭವಿಸಿವೆ. ಹೀಗಿದ್ದಾಗ ಸಲಾರ್ ಸಿನಿಮಾ ನೀಡಿದ ಗೆಲವು ಅವರಿಗೂ ದೊಡ್ಡ ಬ್ರೇಕ್ ಕೊಟ್ಟಿದ್ದು, ಪ್ರಭಾಸ್ ಅವರ ಮುಂದಿನ ಸಿನಿಮಾ ಬಗ್ಗೆ ದೊಡ್ಡ ಸುದ್ದಿಯೂ ಹೊರಬಿದ್ದಿದೆ.
ಮೊದಲೆ ಹೇಳಿದಂತೆ ಸಲಾರ್ ಮೂಲಕ ನಟ ಡಾರ್ಲಿಂಗ್ ಪ್ರಭಾಸ್‌ಗೆ ಬ್ರೇಕ್ ಸಿಕ್ಕಿದ್ದು, ತಮ್ಮ ಸಿನಿ ಕರಿಯರ್ ಸಂಕಷ್ಟಕ್ಕೆ ಸಿಲುಕಿದೆ ಎನ್ನುವಷ್ಟರಲ್ಲಿ ಪ್ರಭಾಸ್ ಮತ್ತೆ ಖದರ್ ತೋರಿಸಿದ್ದಾರೆ. ಬಾಹುಬಲಿ-1 & ಬಾಹುಬಲಿ-2 ಹಿಟ್ ಆದ ಬಳಿಕ ರಾಧೆ ಶ್ಯಾಮ್, 'ಆದಿಪುರುಷ್' ಸಿನಿಮಾ ಸೋಲು ಪ್ರಭಾಸ್‌ರನ್ನ ಕಂಗೆಡಿಸಿತ್ತು. ಇದೀಗ ಪ್ರಭಾಸ್ ನಿಟ್ಟುಸಿರು ಬಿಟ್ಟಿದ್ದು, ದೊಡ್ಡ ಜಯ ಪಡೆದಿದ್ದಾರೆ. ಹೀಗಾಗಿ ಅವರ ಮುಂದಿನ ಸಿನಿಮಾ ಯಾವುದು ಅನ್ನೋ ವಿಚಾರ ಕನ್ಫರ್ಮ್ ಆಗಿದೆ. ಹಾಗಾದ್ರೆ ಪ್ರಭಾಸ್ ಅವರ ಮುಂದಿನ ಸಿನಿಮಾ ಯಾರ ಜೊತೆಗೆ ಶುರುವಾಗುತ್ತೆ..? ಈ ಬಗ್ಗೆ ಸಿಕ್ಕಿರುವ ಅಪ್‌ಡೇಟ್ ಏನು..? ಬನ್ನಿ ತಿಳಿಯೋಣ.

ಸಂಕ್ರಾಂತಿ ಹಬ್ಬಕ್ಕೆ ಸಿಹಿಸುದ್ದಿ ಪಕ್ಕಾ
ಅಂದಹಾಗೆ ಪ್ರಭಾಸ್ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದ್ದು, ಟಾಲಿವುಡ್‌ನ ಸ್ಟಾರ್ ನಿರ್ದೇಶಕ ಮಾರುತಿ ಅವರ ಚಿತ್ರದಲ್ಲಿ ನಟಿಸಲು ಪ್ರಭಾಸ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರ ಪ್ರಭಾಸ್ ಅವರ 24ನೇ ಸಿನಿಮಾ. ಚಿತ್ರದ ಹೆಸರು & ಮೊದಲ ಪೋಸ್ಟರ್ ಅನ್ನು ಸಂಕ್ರಾಂತಿಯ ದಿನದಂದು ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಮಾಹಿತಿಯನ್ನ ನೀಡಿದ್ದು ಎಲ್ಲೆಲ್ಲೂ ಸಂಚಲನ ಸೃಷ್ಟಿಯಾಗಿದೆ. ನಿರ್ದೇಶಕ ಮಾರುತಿ ಕೂಡ, ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು ಪ್ರಭಾಸ್ ಜೊತೆ ಕೆಲಸ ಮಾಡಲು ಉತ್ಸಾಹದಿಂದ ಇದ್ದೇನೆ ಎಂದಿದ್ದಾರೆ.
ಮತ್ತೊಂದು ಸಿನಿಮಾ ಕೂಡ ರೆಡಿ!
ಈಗಾಗಲೇ ರಿಲೀಸ್ ಆಗಿರುವ ಪ್ರಭಾಸ್ ನಟನೆಯ & ಪ್ರಶಾಂತ್ ನೀಲ್ ನಿರ್ದೇಶದ ಸಿನಿಮಾ ಸಲಾರ್ ಅಬ್ಬರಿಸುತ್ತಿದೆ. 'ಸಲಾರ್: ಪಾರ್ಟ್-1' ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಂಡು ಬಾಕ್ಸ್ ಆಫೀಸ್‌ನಲ್ಲಿ ₹500 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ ಎನ್ನಲಾಗುತ್ತಿದೆ. ಇದರ ಜೊತೆ 'ಕಲ್ಕಿ 2898 ಎಡಿ' ಸಿನಿಮಾ ಕೂಡ ಸಿದ್ಧವಾಗುತ್ತಿದ್ದು ಪ್ರಭಾಸ್ ಅಭಿಮಾನಿಗಳಿಗೆ ಈ ಚಿತ್ರ ಕೂಡ ಸರ್ಪ್ರೈಸ್ ನೀಡಲಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ & ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಠಾನಿ ಸೇರಿದಂತೆ ದೊಡ್ಡ ತಾರಾಬಳಗ ಇದ್ದು. ಹೀಗೆ ಭಾರಿ ನಿರೀಕ್ಷೆ ಹುಟ್ಟು ಹಾಕಿರುವ 'ಕಲ್ಕಿ 2898 ಎಡಿ' 2024ರಲ್ಲಿ ರಿಲೀಸ್ ಆಗಲಿದೆ.

ಭಾರತದಲ್ಲೇ 300 ಕೋಟಿ ಕಮಾಲ್!
ಬಾಹುಬಲಿ ಪ್ರಭಾಸ್ ಭರ್ಜರಿ ಗೆಲುವು ಸಾಧಿಸಿದ್ದು ಪ್ರಶಾಂತ್ ನೀಲ್ ಡೈರೆಕ್ಷನ್ ಇತಿಹಾಸವನ್ನ ನಿರ್ಮಿಸಿದೆ. ಕನ್ನಡಿಗರು ಸೇರಿ ನಿರ್ಮಿಸಿರುವ 'ಸಲಾರ್' ಸಿನಿಮಾ ಬರೋಬ್ಬರಿ 500 ಕೋಟಿ ರೂಪಾಯಿಗೂ ಹೆಚ್ಚು ಹಣ ಸುಲಭವಾಗಿ ವಸೂಲಿ ಮಾಡಿದೆ ಎನ್ನಲಾಗಿದೆ. ಈ ಸಾಧನೆಯನ್ನ ಕೆಲ ದಿನಕ್ಕೆ ಸಾಧಿಸಿದೆ ಕನ್ನಡಿಗರು ನಿರ್ಮಿಸಿರುವ ತೆಲುಗು ಸಿನಿಮಾ ಸಲಾರ್. ಜಗತ್ತಿನಾದ್ಯಂತ ಪ್ರಭಾಸ್ ಫ್ಯಾನ್ಸ್ ಈ ಸಿನಿಮಾ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಕೂಡ ಸಲಾರ್ ಸಿನಿಮಾ ಹಲವು ದಾಖಲೆ ಬರೆಯುತ್ತಿದೆ.
ಒಟ್ನಲ್ಲಿ ಸಲಾರ್ ಸಿನಿಮಾ ಮೂಲಕ ಹಳೆಯ ಪ್ರಭಾಸ್ ವಾಪಸ್ ಬಂದಿದ್ದಾರೆ. ಅಭಿಮಾನಿ ಬಳಗ ಕೂಡ ಇದರಿಂದ ಸಿಕ್ಕಾಪಟ್ಟೆ ಖುಷಿಯಾಗಿದೆ. ಯಾಕಂದ್ರೆ ಬಾಹುಬಲಿ ನಂತರ ದೊಡ್ಡ ಬ್ರೇಕ್ ಪಡೆಯಲು ಡಾರ್ಲಿಂಗ್ ಪ್ರಭಾಸ್ ಪರದಾಡುತ್ತಿದ್ದರು. ಆದರೆ ಆ ರೀತಿಯ ಬ್ರೇಕ್‌ಗೆ ಮುಹೂರ್ತ ಕೂಡಿ ಬಂದಿರಲಿಲ್ಲ. ಇದೀಗ ಸಲಾರ್ ಸಿನಿಮಾ ಮೂಲಕ ಆ ಬ್ರೇಕ್ ಸಿಕ್ಕಿದ್ದು ಪ್ರಭಾಸ್ ಅಬ್ಬರ ಶುರುವಾಗಿದೆ. ಹಾಗೇ ಸಾಲು ಸಾಲು ಒಳ್ಳೆಯ ಸಿನಿಮಾಗಳನ್ನ ಪ್ರಭಾಸ್, ಇದೀಗ ಅಭಿಮಾನಿಗಳ ಎದುರು ಇಡಲು ಸಜ್ಜಾಗಿದ್ದಾರೆ.












Click it and Unblock the Notifications