‘ಸಲಾರ್’ ಅಬ್ಬರಕ್ಕೆ ಬಾಕ್ಸ್ ಆಫಿಸ್ ತತ್ತರ, ಈ ಸಿನಿಮಾ ಗಳಿಸಿದ್ದು ಎಷ್ಟು?

ಕನ್ನಡಿಗರ ತೆಲುಗು ಸಿನಿಮಾ 'ಸಲಾರ್' ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ 'ಸಲಾರ್' ಸಿನಿಮಾ, ಸಾಲು ಸಾಲು ದಾಖಲೆ ಸೃಷ್ಟಿ ಮಾಡ್ತಿದೆ. ಡಿ. 22 ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಲಾರ್, ಗಲ್ಲಾಪೆಟ್ಟಿಗೆ ಶೇಕ್ ಶೇಕ್ ಮಾಡಿದೆ.

ಈಗಾಗಲೇ ಹಾಕಿದ ಬಂಡವಾಳ ವಸೂಲಿ ಮಾಡಿರುವ 'ಸಲಾರ್' ಇದೀಗ ಲಾಭದ ಕಡೆಗೆ ಹೆಜ್ಜೆ ಹಾಕಿದೆ. ಬಾಹುಬಲಿ-1 ಹಾಗೂ ಬಾಹುಬಲಿ-2 ದೊಡ್ಡ ಮಟ್ಟದಲ್ಲಿ ಹಿಟ್ ಆದ ನಂತರ, 'ರಾಧೆ ಶ್ಯಾಮ್' & 'ಆದಿಪುರುಷ್' ಸಿನಿಮಾ ಸೋಲು ಪ್ರಭಾಸ್‌ರನ್ನ ಕಂಗೆಡಿಸಿತ್ತು. ಹೀಗಾಗಿ ದೊಡ್ಡ ಬ್ರೇಕ್ ಸಿಗುವ ನಿರೀಕ್ಷೆಯಲ್ಲಿ ಪ್ರಭಾಸ್ ಇದ್ದರು. ಹೀಗಿದ್ದಾಗಲೇ ಸಲಾರ್ ಸಿನಿಮಾ ಅಂದುಕೊಂಡ ಮಟ್ಟಿಗೆ ಸಕ್ಸಸ್ ನೀಡುವ ಮೂಲಕ, ನಟ ಡಾರ್ಲಿಂಗ್ ಪ್ರಭಾಸ್ ಅವರಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದೆ. ಹಾಗೇ ಪ್ರಭಾಸ್ ಅವರ ಸಿನಿಮಾ ಭವಿಷ್ಯಕ್ಕೆ ಮತ್ತಷ್ಟು ಹುರುಪು ತುಂಬಿದೆ.

Salaar Star Prabhas Movie Created New Record

ಭಾರತದಲ್ಲೂ ದಾಖಲೆ ಬರೆದ ಸಲಾರ್

ಮೊದಲ ದಿನವೇ 'ಸಲಾರ್' ಸಿನಿಮಾ, ಜಗತ್ತಿನಾದ್ಯಂತ ಸುಮಾರು 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಹಿಂದಿನ ದಾಖಲೆಗಳನ್ನ ಹಿಂದಿಕ್ಕಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡಿತ್ತು ಪ್ರಭಾಸ್ ಅವರ ಸಿನಿಮಾ. ಈಗ ಭಾರತದಲ್ಲಿ ಮಾತ್ರ 260 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಕಳೆದ 4 ದಿನಗಳಿಂದ ಸಾಲು ಸಾಲು ರೆಜೆ ಸಿಕ್ಕಿದ್ದ ಕಾರಣ ಪ್ರಭಾಸ್ ಅವರ ಸಲಾರ್ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈಗ ಮತ್ತೆ ಇನ್ನೇನು ಹೊಸ ವರ್ಷದ ಸಂಭ್ರಮ ಕೂಡ ಮೇಳೈಸಲಿದ್ದು, ಬಾಕ್ಸ್ ಆಫಿಸ್‌ನ ಶೇಕ್ ಮಾಡುವ ಸೂಚನೆ ನೀಡಿದೆ.

Salaar Star Prabhas Movie Created New Record

ಯಾವ ಸಿನಿಮಾ ಎಷ್ಟು ಗಳಿಸಿದೆ?

ಮೊದಲ ದಿನ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪೈಕಿ RRR ಸಿನಿಮಾಗೆ ಮೊದಲ ಸ್ಥಾನ ಇದ್ದು, ಆರ್‌ಆರ್‌ಆರ್ ಸಿನಿಮಾ ಮೊದಲ ದಿನ 223 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇನ್ನು ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂಪಾಯಿಗಳ ಸಂಪಾದನೆ ಮಾಡಿತ್ತು. ಇದನ್ನ ಬಿಟ್ಟರೆ ಕನ್ನಡಿಗರ 'ಕೆಜಿಎಫ್ ಚಾಪ್ಟರ್-2' ಬರೋಬ್ಬರಿ 164 ಕೋಟಿ ರೂಪಾಯಿ ಹಣವನ್ನು ಮೊದಲನೇ ದಿನವೇ ಸಂಪಾದಿಸಿತ್ತು. ಈಗ ಪ್ರಭಾಸ್ ಅವರ ಸಲಾರ್ ಸಿನಿಮಾ ಹೊಸ ಇತಿಹಾಸ ಬರೆದಿದೆ. ಜೊತೆಗೆ ಭಾರತದಲ್ಲಿ ಗಳಿಸಿರುವ ಹಣದ ಲೆಕ್ಕ ಕೂಡ ದಾಖಲೆ ನಿರ್ಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+