ಕನ್ನಡಿಗರು ನಿರ್ಮಿಸಿರುವ ಪ್ರಭಾಸ್ ಅಭಿನಯದ ‘ಸಲಾರ್’ ಟ್ರೇಲರ್ ಹೇಗಿದೆ?

ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ, ಬಹು ನಿರೀಕ್ಷಿತ ಸಿನಿಮಾ 'ಸಲಾರ್' ರಿಲೀಸ್ ಡೇಟ್ ಹತ್ತಿರ ಬಂದಿದೆ. ಹೀಗಾಗಿ ಸಿನಿಮಾ ತಂಡ ಇಂದು 'ಸಲಾರ್' ಸಿನಿಮಾದ 2ನೇ ಟ್ರೇಲರ್‌ನ ರಿಲೀಸ್ ಮಾಡಿದೆ. ಈಗಾಗಲೇ ತನ್ನ ಮೊದಲ ಟ್ರೇಲರ್ ಮೂಲಕ ಸಂಚಲನ ಸೃಷ್ಟಿಸಿರುವ 'ಸಲಾರ್' ಇದೀಗ ತನ್ನ 2ನೇ ಟ್ರೇಲರ್ ಮೂಲಕವೂ ಅಬ್ಬರಿಸಿ ಬೊಬ್ಬಿರಿದಿದೆ.

ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿರುವ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾದ 2ನೇ ಟ್ರೇಲರ್, ಪ್ರಶಾಂತ್ ನೀಲ್ ಅವರ ಕೈಚಳಕವನ್ನ ಮತ್ತಷ್ಟು ಸ್ಪಷ್ಟಪಡಿಸಿದೆ. 2 ನಿಮಿಷ 54 ಸೆಕೆಂಡ್ ಇರುವ ಸಲಾರ್ 2ನೇ ಟ್ರೇಲರ್, ಪ್ರೀತಿ & ಸ್ನೇಹದ ನಡುವೆ ಹಿಂಸೆ ಯಾಕೆ ಶುರುವಾಯ್ತು ಅನ್ನೋದನ್ನ ಹೇಳಿದೆ. ಹಾಗೇ ಟ್ರೇಲರ್‌ನ ಕೊನೆಯಲ್ಲಿ ಸ್ನೇಹಿತರು ಹೇಗೆ ದೊಡ್ಡ ಶತ್ರುಗಳಾಗಿ ಬೆಳೆಯುತ್ತಾರೆ? ಅನ್ನೋ ಹಿಂಟ್ ಕೊಟ್ಟಿದೆ. ಈ ಮೂಲಕ ನಟ ಪ್ರಭಾಸ್ & ಪೃತ್ವಿರಾಜ್ ಸುಕುಮಾರನ್ ನಡುವೆ ಬಿಗ್ ಫೈಟ್ ಗ್ಯಾರಂಟಿ ಅನ್ನೋ ಹಿಂಟ್‌ನ ಕೂಡ ಬಿಟ್ಟು ಕೊಟ್ಟಿದ್ದಾರೆ.

 Salaar movie 2nd Trailer Thrilled The Darling Prabhas Fans

ಡೈನೋಸಾರ್ ಅಬ್ಬರಕ್ಕೆ ಕೋಟೆ ಉಡೀಸ್?

ನಟ ಪ್ರಭಾಸ್ ಅವರನ್ನ ಹಿಂದೆ ಯಾವ ಸಿನಿಮಾದಲ್ಲೂ ತೋರಿಸದ ರೀತಿ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದಲ್ಲಿ ತೋರಿಸಿದ್ದಾರೆ. ಅದರಲ್ಲೂ ಸಲಾರ್ ಟ್ರೇಲರ್ 1 ರೀತಿಯೇ ಈಗ ಸಲಾರ್ ಟ್ರೇಲರ್ 2 ಕೂಡ ಅಬ್ಬರಿಸಲು ಶುರು ಮಾಡಿದೆ. ಪ್ರಭಾಸ್ ಅಭಿಮಾನಿಗಳು ಇದೇ ಸಮಯಕ್ಕೆ ಅಂತಾ ಬೆಳಗ್ಗೆಯಿಂದ ಕಾದು ಕುಳಿತಿದ್ದರು. ಆದರೆ ಸಾಕಷ್ಟು ತಡವಾಗಿ ಟ್ರೇಲರ್ ರಿಲೀಸ್ ಆದರೂ, ಸಲಾರ್ ಟ್ರೇಲರ್ 2 ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೇ ಈ ಸಿನಿಮಾ ಪ್ರಭಾಸ್ ಅವರ ವೃತ್ತಿ ಜೀವನಕ್ಕು ದೊಡ್ಡ ತಿರುವು ನೀಡುವುದು ಪಕ್ಕಾ ಎನ್ನುವ ಮಾತು ಕೂಡ ಈಗ ಕೇಳಿಬಂದಿವೆ.

ಸಲಾರ್ ಅಖಾಡದಲ್ಲಿ ದೊಡ್ಡ ತಾರಾಬಳಗ

'ಸಲಾರ್' ಚಿತ್ರ ರಿಲೀಸ್ ಆಗುವ ಮೊದಲೆ, ಕೋಟಿ ಕೋಟಿ ಬಿಸಿನೆಸ್ ಮಾಡಿದೆ ಎನ್ನಲಾಗಿದೆ. 'ಸಲಾರ್' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಶ್ರುತಿ ಹಾಸನ್‌, ಕನ್ನಡ ನಟ ಪ್ರಮೋದ್ & ಮಧು ಗುರುಸ್ವಾಮಿ ನಟಿಸಿದ್ದಾರೆ. ಸಿಕ್ಕಾಪಟ್ಟೆ ದೊಡ್ಡ ತಾರಾ ಬಳಗ ಸಲಾರ್ ತಂಡಕ್ಕೆ ಸಾಥ್ ನೀಡಿದೆ. ಎಲ್ಲಾ ಕಾರಣಕ್ಕೆ ಇಡೀ ದೇಶಾದ್ಯಂತ, ಸಲಾರ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೂ ಸ್ಯಾಂಡಲ್‌ವುಡ್‌ನ ಹಲವು ನಟ, ನಟಿಯರು ಈ ಚಿತ್ರದಲ್ಲಿ ಅಭಿನಯಿಸಿರುವುದು ಮತ್ತಷ್ಟು ಥ್ರಿಲ್ ಕೊಡುತ್ತಿದೆ.

 Salaar movie 2nd Trailer Thrilled The Darling Prabhas Fans

ಭಾರಿ ದೊಡ್ಡ ಮೊತ್ತದ ಸಂಭಾವನೆ?

ಎಷ್ಟೇ ಸೋಲು ಕಾಣಲಿ, ಎಷ್ಟೇ ಅಡ್ಡಿ ಎದುರಾಗಲಿ. ಪ್ರಭಾಸ್‌ಗೆ ಇರುವ ಡಿಮ್ಯಾಂಡ್ ಕಡಿಮೆ ಆಗಲ್ಲ. ಇದಕ್ಕೆ ಸಾಕ್ಷಿ 'ಸಲಾರ್' ಎನ್ನಬಹುದು. ಏಕೆಂದರೆ, ಈ ಸಿನಿಮಾಗೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತೆ? ಬರೋಬ್ಬರಿ 100 ಕೋಟಿ ರೂ. ಅಂತಾ ಹೇಳಲಾಗ್ತಿದೆ. ಇದನ್ನೂ ಮೀರಿ ಇನ್ನಷ್ಟು ಹಣ ಸಂಭಾವನೆಯ ರೂಪದಲ್ಲಿ ಡಾರ್ಲಿಂಗ್ ಪ್ರಭಾಸ್ ಅವರ ಕೈ ಸೇರುತ್ತದೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿವೆ.

ಒಟ್ನಲ್ಲಿ ಬಹುನಿರೀಕ್ಷಿತ ಸಲಾರ್ ಸಿನಿಮಾದ 2ನೇ ಟ್ರೇಲರ್ ಈಗ ರಿಲೀಸ್ ಆಗಿದ್ದು, ನಟ ಡಾರ್ಲಿಂಗ್ ಪ್ರಭಾಸ್ ಅವರ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಹೀಗೆ ಇಂದು ರಿಲೀಸ್ ಆಗಿರುವ ಸಲಾರ್ ಸಿನಿಮಾದ 2ನೇ ಟ್ರೇಲರ್‌ಗೆ ಕೂಡ ಭಾರಿ ಮೆಚ್ಚುಗೆಯು ವ್ಯಕ್ತವಾಗುತ್ತಿದೆ. ಹೀಗಾಗಿಯೇ ಪ್ರಭಾಸ್ ಅಭಿಮಾನಿಗಳಿಗೆ ಸಿನಿಮಾ ಬಿಡುಗಡೆ ಆಗುವ ದಿನ ಸಿಕ್ಕಾಪಟ್ಟೆ ದೊಡ್ಡ ಸರ್ಪ್ರೈಸ್ ಗ್ಯಾರಂಟಿ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+