ಸಾಯಿ ಪಲ್ಲವಿ & ನಾಗಚೈತನ್ಯ ನಡುವೆ ‘ಏನಿಲ್ಲ.. ಏನಿಲ್ಲ..’?
ಸಾಯಿ ಪಲ್ಲವಿ ಅಂದ್ರೆ ಸಾಕು ಪ್ರತಿಯೊಬ್ಬ ಅಭಿಮಾನಿಗೂ ಅದೇನೋ ಆಕರ್ಷಣೆ. ಅದರಲ್ಲೂ ಸಾಯಿ ಪಲ್ಲವಿ ಅವರ ಸಿಂಪಲ್ ಲೈಫ್ ಎಲ್ಲರಿಗೂ ಇಷ್ಟವಾಗುತ್ತದೆ. ಹತ್ತಾರು ಹಿಟ್ ಚಿತ್ರ ಕೊಟ್ಟರೂ ಇಂದಿಗೂ ಸಾಯಿ ಪಲ್ಲವಿ ಅವರು ಸಿನಿಮಾ ರಂಗಕ್ಕೆ ಮಾದರಿ ಆಗಿದ್ದಾರೆ. ತಮ್ಮ ಸಿನಿಮಾ ಕರಿಯರ್ ಜೊತೆಗೆ ವೈಯಕ್ತಿಕ ಜೀವನವನ್ನೂ ಅತ್ಯುತ್ತಮವಾಗಿ ಇರಿಸಿಕೊಂಡ ಕೀರ್ತಿ, ನಟಿ ಸಾಯಿ ಪಲ್ಲವಿ ಅವರಿಗೆ ಸಲ್ಲುತ್ತದೆ. ಆದರೆ ಇದೀಗ ನಟಿ ಸಮಂತಾ ಮಾಜಿ ಗಂಡ + ಸಾಯಿ ಪಲ್ಲವಿ ನಡುವೆ ಏನೋ ಇದೆ ಅಂತಿದ್ದಾರೆ ಫ್ಯಾನ್ಸ್!
ನಾಗಚೈತನ್ಯ & ಸಮಂತಾ ರುತ್ ಪ್ರಭು ಡಿವೋರ್ಸ್ ಆಗಿ ವಿವಾಹ ಸಂಬಂಧವೂ ಮುಗಿದು ಹೋಗಿದೆ. ನಾಗಚೈತನ್ಯ ಅವರು ಡಿವೋರ್ಸ್ ನಂತರ ತಮ್ಮ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರ ಜೊತೆಗೆ ಸಮಂತಾ ಕೂಡ ತಮ್ಮ ಆರೋಗ್ಯ ಸಮಸ್ಯೆಗಳ ಜೊತೆಗೆ, ತಮ್ಮ ಸಿನಿಮಾ ಪ್ರಾಜೆಕ್ಟ್ ಕಡೆಗೂ ಗಮನ ಹರಿಸುತ್ತಿದ್ದಾರೆ. ಹೀಗಿದ್ದಾಗ ಸಮಂತಾ ಮಾಜಿ ಗಂಡ ನಾಗಚೈತನ್ಯ 2ನೇ ಮದುವೆಗೆ ಸಜ್ಜಾಗಿದ್ದಾರೆ ಅನ್ನೋ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ಸಮಯದಲ್ಲಿ ನಟಿ ಸಾಯಿ ಪಲ್ಲವಿ ಇದೀಗ ಪ್ರೇಮಿಗಳ ದಿನಾಚರಣೆ ವೇಳೆ ಹಂಚಿಕೊಂಡಿರುವ ವಿಡಿಯೋ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಈಗ ಸಾಯಿ ಪಲ್ಲವಿ ಹಂಚಿಕೊಂಡಿರುವ ನಾಗಚೈತನ್ಯ ಬಗೆಗಿನ ವಿಡಿಯೋ ಆದ್ರೂ ಏನು? ಮಂದೆ ಓದಿ.

ನಾಗಚೈತನ್ಯ + ಸಾಯಿ ಪಲ್ಲವಿ?
2 ವರ್ಷಗಳ ಹಿಂದೆ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ವಿಚಾರ ದೊಡ್ಡ ಸೌಂಡ್ ಮಾಡಿತ್ತು. ಹೀಗೆ ಇಬ್ಬರೂ ದೂರವಾಗಿ ಇದೀಗ 2 ವರ್ಷಗಳೇ ಕಳೆದು ಹೋಗಿದೆ. ಹೀಗಾಗಿ ಇಬ್ಬರೂ ಬೇರೆ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಆಗಾಗ ಹಲ್‌ಚಲ್ ಎಬ್ಬಿಸುತ್ತಿದೆ. ಈ ಮಧ್ಯೆ ನಾಗಚೈತನ್ಯ ಅವರ ವಿಚಾರದಲ್ಲಿ ಇಂತಹ ಸುದ್ದಿಗಳು ಸಿಕ್ಕಾಪಟ್ಟೆ ಹರಿದಾಡುತ್ತಿವೆ. ಈ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೀಗ ಸಾಯಿ ಪಲ್ಲವಿ ಅವರು ನಟ ನಾಗಚೈತನ್ಯ ಕುರಿತು ಸ್ಪೆಷಲ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ಪ್ರೇಮಿಗಳ ದಿನಾಚರಣೆ ವೇಳೆ ಸಾಯಿ ಪಲ್ಲವಿ ಶೇರ್ ಮಾಡಿರುವ ಈ ವಿಡಿಯೋ ಸಂಚಲನ ಸೃಷ್ಟಿಸಿದೆ.
Happy Valentine’s ☺️❤️ pic.twitter.com/3yoJm3uU56
— Sai Pallavi (@Sai_Pallavi92) February 14, 2024
ವಿಡಿಯೋ ಬಗ್ಗೆ ಚರ್ಚೆ ಶುರು!
ಹೀಗೆ ಸಾಯಿ ಪಲ್ಲವಿ & ನಾಗಚೈತನ್ಯ ನಡುವೆ ಲವ್ ಇದ್ದು, ಮುಂದೆ ಇಬ್ಬರೂ ಮದುವೆ ಆಗಲಿದ್ದಾರೆ ಎಂಬ ಗಾಳಿ ಸುದ್ದಿ ಆಗಾಗ ಸಂಚಲನ ಸೃಷ್ಟಿ ಮಾಡುತ್ತಿತ್ತು. ಈಗ ಮತ್ತೊಮ್ಮೆ ಅಂತಹದ್ದೇ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಸಾಯಿ ಪಲ್ಲವಿ ಅವರು ಶೇರ್ ಮಾಡಿದ, ಅದೊಂದು ವಿಡಿಯೋ ಹಲ್‌ಚಲ್ ಎಬ್ಬಿಸಿದೆ. ಆದ್ರೆ ಈ ಬಗ್ಗೆ ಇನ್ನೂ ಯಾವುದೇ ರೀತಿಯ ಸ್ಪಷ್ಟನೆ ಸಿಕ್ಕಿಲ್ಲ. ಮತ್ತೊಂದು ಕಡೆ ಸಾಯಿ ಪಲ್ಲವಿ & ನಾಗಚೈತನ್ಯ ಅವರ ವಿಡಿಯೋಗೆ, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೇ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ.

ಅಂದಹಾಗೆ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಮರು ಮದುವೆ, ಅಂದ್ರೆ 2ನೇ ಮದುವೆ ವಿಚಾರ ಆಗಾಗ ಚರ್ಚೆಗೆ ವೇದಿಕೆ ಒದಗಿಸುತ್ತದೆ. ನಟಿ ಸಾಯಿ ಪಲ್ಲವಿ ಮಾತ್ರವಲ್ಲ, ಜೊತೆಗೆ ನಾಗಚೈತನ್ಯ ಅವರ ಸಂಬಂಧಿ ವಿಚಾರದಲ್ಲೂ ಇಂತಹ ಸುದ್ದಿಗಳೇ ಹಬ್ಬಿವೆ. ನಾಗಚೈತನ್ಯ ಅವರು ಸಂಬಂಧದಲ್ಲೇ ಒಬ್ಬರನ್ನು ಮದುವೆ ಆಗಲಿದ್ದಾರೆ, ಈಗಾಗಲೇ ಮದುವೆಗೆ ತಯಾರಿ ಸಾಗಿದೆ ಎನ್ನುವ ಸುದ್ದಿಗಳೆಲ್ಲಾ ಹರಿದಾಡುತ್ತಿವೆ. ಆದರೆ ಅದ್ಯಾವುದಕ್ಕೂ ಇನ್ನೂ ಉತ್ತರ & ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಇದಕ್ಕೆಲ್ಲಾ ಉತ್ತರ ಸಿಗಲು ಮತ್ತಷ್ಟು ದಿನಗಳ ಕಾಲ ಕಾದು ನೋಡಬೇಕಿದೆ.












Click it and Unblock the Notifications